Webdunia - Bharat's app for daily news and videos

Install App

ಉಪ್ಪಿ ನಿರ್ದೇಶನದ ಚಿತ್ರ ಮುಂದಕ್ಕೆ: ಮತ್ತೆ ರಿಮೇಕ್‌ಗೆ ಜೈ?

Webdunia
PR
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದತ್ತ ಮತ್ತೆ ಬರುತ್ತಿದ್ದಾರೆ ಎಂಬ ಸುದ್ದಿ ಠುಸ್ ಆಗಿದೆ. 'ಉಪೇಂದ್ರ' ಚಿತ್ರದ ಭಾಗ ಎರಡು ಎಂದೇ ಹೇಳಲಾಗುತ್ತಿರುವ ಬಹು ನಿರೀಕ್ಷಿತ 'ಉಪ್ಪಿ-2' ಅಥವಾ ಉಪ್ಪಿಟ್ಟು ಎಂದು ಹೇಳಲಾಗಿರುವ ಚಿತ್ರ ಮುಂದಕ್ಕೆ ಹೋಗಿದೆ ಎಂದು ಉಪ್ಪಿ ಹೋಮ್ ಪ್ರೊಡಕ್ಷನ್ ಅಧಿಕೃತವಾಗಿ ಪ್ರಕಟಿಸಿದೆ.

ಇದಕ್ಕೆ ಕಾರಣವೇನು ಅನ್ನೋದು ಸ್ಪಷ್ಟವಿಲ್ಲ. ಆದರೆ ಉಪ್ಪಿ ಇನ್ನೊಂದು ರಿಮೇಕ್ ಚಿತ್ರಕ್ಕೆ ರೆಡಿಯಾಗುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿಗಳಿವೆ. ಸದ್ಯ ಚಾಲ್ತಿಯಲ್ಲಿರುವ ನಿರ್ಮಾಪಕರೊಬ್ಬರು ಉಪ್ಪಿಗೆ ಎಡತಾಕಿದ್ದಾರೆ, ಈ ಸಂಬಂಧ ಮಾತುಕತೆ ನಡೆಯುತ್ತಿದೆ. ಅದು ಯಶಸ್ವಿಯಾದಲ್ಲಿ, ಇನ್ನೊಂದು ರಿಮೇಕ್ ಚಿತ್ರದಲ್ಲಿ ಉಪ್ಪಿ ನಾಯಕನಾಗಲಿದ್ದಾರೆ.

Audition for lyricist and writers is closed, the project is delayed a bit, hence audition for actors and other crew has been postponed -- ಇದು ಉಪೇಂದ್ರ ಪ್ರೊಡಕ್ಷನ್ಸ್ ಫೇಸ್‌ಬುಕ್ ಅಧಿಕೃತ ಖಾತೆಯಲ್ಲಿ ಹಾಕಿರುವ ಪೋಸ್ಟ್.

2012 ರ ಸೆಪ್ಟೆಂಬರ್ 18ರಂದು, ಅಂದರೆ ಉಪ್ಪಿ ಬರ್ತ್ ಡೇ ದಿನ ಹೊಸ ಚಿತ್ರ ನಿರ್ದೇಶಿಸುತ್ತಿರುವುದನ್ನು ಘೋಷಿಸಲಾಗಿತ್ತು. ಜನವರಿ 19ರಂದು ಚಿತ್ರದ ಕಲಾವಿದರು, ತಂತ್ರಜ್ಞರ ಆಯ್ಕೆ ಆಡಿಷನ್ ಶುರುವಾಗಿತ್ತು. ಈಗ ಸಾಹಿತ್ಯ ಮತ್ತು ಬರಹಗಾರರ ಆಡಿಷನ್ ಮುಗಿದಿದೆ. ಪ್ರಾಜೆಕ್ಟ್ ವಿಳಂಬವಾಗುತ್ತಿರುವುದರಿಂದ, ಕಲಾವಿದರು ಮತ್ತು ಇತರೆ ತಂತ್ರಜ್ಞರ ಆಯ್ಕೆಯನ್ನು ಮುಂದಕ್ಕೆ ಹಾಕಲಾಗುತ್ತಿದೆ ಎಂದು ಉಪೇಂದ್ರ ಪ್ರೊಡಕ್ಷನ್ ತಿಳಿಸಿದೆ.

ಮೂಲಗಳ ಪ್ರಕಾರ, ಚಿತ್ರದ ಕಥೆ ಹೆಚ್ಚು ಕಡಿಮೆ ರೆಡಿಯಾಗಿದೆ. ಗುರುಕಿರಣ್ ಸಂಗೀತ, ಎಚ್.ಸಿ. ವೇಣು ಛಾಯಾಗ್ರಹಣ ನೀಡುವುದೆಂದು ಖಚಿತವಾಗಿದೆ. ಆದರೂ ಯಾವ ಕಾರಣಕ್ಕೆ ಚಿತ್ರವನ್ನು ಮುಂದಕ್ಕೆ ಹಾಕಲಾಗಿದೆ ಎಂಬ ಬಗ್ಗೆ ಮಾಹಿತಿಯಿಲ್ಲ. ಏನೇ ಇರಲಿ, ಇದು ಉಪ್ಪಿ ನಿರ್ದೇಶನದ ಚಿತ್ರಕ್ಕೆ ಕಾಯುತ್ತಿದ್ದವರಿಗಂತೂ ನಿರಾಸೆಯ ಸುದ್ದಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments