Select Your Language

Notifications

webdunia
webdunia
webdunia
webdunia

ಉಪ್ಪಿ ನಿರ್ದೇಶನದ ಚಿತ್ರ ಮುಂದಕ್ಕೆ: ಮತ್ತೆ ರಿಮೇಕ್‌ಗೆ ಜೈ?

ಉಪ್ಪಿ ನಿರ್ದೇಶನದ ಚಿತ್ರ ಮುಂದಕ್ಕೆ: ಮತ್ತೆ ರಿಮೇಕ್‌ಗೆ ಜೈ?
PR
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದತ್ತ ಮತ್ತೆ ಬರುತ್ತಿದ್ದಾರೆ ಎಂಬ ಸುದ್ದಿ ಠುಸ್ ಆಗಿದೆ. 'ಉಪೇಂದ್ರ' ಚಿತ್ರದ ಭಾಗ ಎರಡು ಎಂದೇ ಹೇಳಲಾಗುತ್ತಿರುವ ಬಹು ನಿರೀಕ್ಷಿತ 'ಉಪ್ಪಿ-2' ಅಥವಾ ಉಪ್ಪಿಟ್ಟು ಎಂದು ಹೇಳಲಾಗಿರುವ ಚಿತ್ರ ಮುಂದಕ್ಕೆ ಹೋಗಿದೆ ಎಂದು ಉಪ್ಪಿ ಹೋಮ್ ಪ್ರೊಡಕ್ಷನ್ ಅಧಿಕೃತವಾಗಿ ಪ್ರಕಟಿಸಿದೆ.

ಇದಕ್ಕೆ ಕಾರಣವೇನು ಅನ್ನೋದು ಸ್ಪಷ್ಟವಿಲ್ಲ. ಆದರೆ ಉಪ್ಪಿ ಇನ್ನೊಂದು ರಿಮೇಕ್ ಚಿತ್ರಕ್ಕೆ ರೆಡಿಯಾಗುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿಗಳಿವೆ. ಸದ್ಯ ಚಾಲ್ತಿಯಲ್ಲಿರುವ ನಿರ್ಮಾಪಕರೊಬ್ಬರು ಉಪ್ಪಿಗೆ ಎಡತಾಕಿದ್ದಾರೆ, ಈ ಸಂಬಂಧ ಮಾತುಕತೆ ನಡೆಯುತ್ತಿದೆ. ಅದು ಯಶಸ್ವಿಯಾದಲ್ಲಿ, ಇನ್ನೊಂದು ರಿಮೇಕ್ ಚಿತ್ರದಲ್ಲಿ ಉಪ್ಪಿ ನಾಯಕನಾಗಲಿದ್ದಾರೆ.

Audition for lyricist and writers is closed, the project is delayed a bit, hence audition for actors and other crew has been postponed -- ಇದು ಉಪೇಂದ್ರ ಪ್ರೊಡಕ್ಷನ್ಸ್ ಫೇಸ್‌ಬುಕ್ ಅಧಿಕೃತ ಖಾತೆಯಲ್ಲಿ ಹಾಕಿರುವ ಪೋಸ್ಟ್.

2012ರ ಸೆಪ್ಟೆಂಬರ್ 18ರಂದು, ಅಂದರೆ ಉಪ್ಪಿ ಬರ್ತ್ ಡೇ ದಿನ ಹೊಸ ಚಿತ್ರ ನಿರ್ದೇಶಿಸುತ್ತಿರುವುದನ್ನು ಘೋಷಿಸಲಾಗಿತ್ತು. ಜನವರಿ 19ರಂದು ಚಿತ್ರದ ಕಲಾವಿದರು, ತಂತ್ರಜ್ಞರ ಆಯ್ಕೆ ಆಡಿಷನ್ ಶುರುವಾಗಿತ್ತು. ಈಗ ಸಾಹಿತ್ಯ ಮತ್ತು ಬರಹಗಾರರ ಆಡಿಷನ್ ಮುಗಿದಿದೆ. ಪ್ರಾಜೆಕ್ಟ್ ವಿಳಂಬವಾಗುತ್ತಿರುವುದರಿಂದ, ಕಲಾವಿದರು ಮತ್ತು ಇತರೆ ತಂತ್ರಜ್ಞರ ಆಯ್ಕೆಯನ್ನು ಮುಂದಕ್ಕೆ ಹಾಕಲಾಗುತ್ತಿದೆ ಎಂದು ಉಪೇಂದ್ರ ಪ್ರೊಡಕ್ಷನ್ ತಿಳಿಸಿದೆ.

ಮೂಲಗಳ ಪ್ರಕಾರ, ಚಿತ್ರದ ಕಥೆ ಹೆಚ್ಚು ಕಡಿಮೆ ರೆಡಿಯಾಗಿದೆ. ಗುರುಕಿರಣ್ ಸಂಗೀತ, ಎಚ್.ಸಿ. ವೇಣು ಛಾಯಾಗ್ರಹಣ ನೀಡುವುದೆಂದು ಖಚಿತವಾಗಿದೆ. ಆದರೂ ಯಾವ ಕಾರಣಕ್ಕೆ ಚಿತ್ರವನ್ನು ಮುಂದಕ್ಕೆ ಹಾಕಲಾಗಿದೆ ಎಂಬ ಬಗ್ಗೆ ಮಾಹಿತಿಯಿಲ್ಲ. ಏನೇ ಇರಲಿ, ಇದು ಉಪ್ಪಿ ನಿರ್ದೇಶನದ ಚಿತ್ರಕ್ಕೆ ಕಾಯುತ್ತಿದ್ದವರಿಗಂತೂ ನಿರಾಸೆಯ ಸುದ್ದಿ.

Share this Story:

Follow Webdunia kannada