Webdunia - Bharat's app for daily news and videos

Install App

ಉಪ್ಪಿ ಟೋಪಿವಾಲ: ತಲೆ ಇದ್ದವರು ಈ ಟ್ರೇಲರ್ ನೋಡಿ...!

Webdunia
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಚಿತ್ರಗಳೆಂದರೆ ಅದರಲ್ಲಿ ಏನಾದರೂ ಸರ್‌ಪ್ರೈಸ್ ಇದ್ದೇ ಇರುತ್ತದೆ. ಆದರೆ 'ಟೋಪಿವಾಲ' ಉಪ್ಪಿ ಆಕ್ಷನ್ ಕಟ್ ಹೇಳಿರುವ ಚಿತ್ರವಲ್ಲ. ಕೆಲವು ಕಿರುಚಿತ್ರಗಳಿಂದ ಗಮನ ಸೆಳೆದಿರುವ ರೇಡಿಯೋ ಜಾಕಿ ಶ್ರೀನಿವಾಸ್ ನಿರ್ದೇಶಿಸಿರುವ ಚಿತ್ರ.

ಶ್ರೀನಿ ನಿರ್ದೇಶನದ ಚಿತ್ರ ಎಂದ ಮಾತ್ರಕ್ಕೆ ಇಲ್ಲಿ ಉಪ್ಪಿ ಕೈವಾಡ ಇಲ್ಲವೆಂದಲ್ಲ. ಸ್ವತಃ ಉಪ್ಪಿ ಕಥೆ, ಚಿತ್ರಕಥೆ ಬರೆದಿದ್ದಾರೆ. ಇದಕ್ಕೆ ಸಂಭಾಷಣೆ ಬರೆದು, ನಿರ್ದೇಶಿಸಿರುವುದು ಶ್ರೀನಿ. ಇಬ್ಬರೂ ಸೇರಿ ಸಿನಿಮಾ ಮಾಡಿರುವುದರಿಂದ, ಉಪ್ಪಿ ಹೆಚ್ಚಿನ ಶ್ರಮ ಹಾಕಿರುವುದರಿಂದ ಚಿತ್ರದ ಬಗ್ಗೆ ಒಂದಷ್ಟು ಹೆಚ್ಚೇ ನಿರೀಕ್ಷೆಗಳಿವೆ.

ಉಪ್ಪಿಗೆ ಇಲ್ಲಿ ಭಾವನಾ ಮತ್ತು ಮೈತ್ರೇಯಿ ನಾಯಕಿಯರು. ಪ್ರಮುಖ ಪಾತ್ರಗಳಲ್ಲಿ ರಾಜು ತಾಳಿಕೋಟೆ, ರಂಗಾಯಣ ರಘು, ರವಿಶಂಕರ್, ರಾಕ್‌ಲೈನ್ ಸುಧಾಕರ್, ಮುಕ್ತಿ ಮೋಹನ್ ಮುಂತಾದವರು ನಟಿಸಿದ್ದಾರೆ. ಮಾರ್ಚ್ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಪೂರ್ವಭಾವಿಯಾಗಿ ಈಗ ಆಡಿಯೋ ಮಾರುಕಟ್ಟೆಗೆ ಬಂದಿದೆ. ಜತೆಗೆ ಚಿತ್ರದ ಅಧಿಕೃತ ಟ್ರೇಲರ್ ಕೂಡ ರಿಲೀಸ್ ಆಗಿದೆ.

ಯಾವುದೋ ನಿರೀಕ್ಷೆಯಲ್ಲಿ ಟ್ರೇಲರ್ ನೋಡಿದವರಿಗೆ ಅಚ್ಚರಿ ಕಾದಿದೆ. ಇಡೀ ಟ್ರೇಲರ್‌ನಲ್ಲಿ ಟೋಪಿವಾಲ ಚಿತ್ರದ ಶೀರ್ಷಿಕೆ ಬಿಟ್ಟರೆ ಬೇರೇನೂ ಕಾಣಿಸುತ್ತಿಲ್ಲ. ಬದಲಿಗೆ ಬೇರೆಯದೇ ಟ್ರಿಕ್ಸ್ ಅನುಸರಿಸಿ ತಲೆಗೆ ಹುಳ ಬಿಡಲಾಗಿದೆ. ಚಿತ್ರದ ಬಗ್ಗೆ ಕುತೂಹಲ ಹುಟ್ಟಿಸಲು ದೃಶ್ಯದ ಬದಲು, ಮಾತನ್ನು ನೆಚ್ಚಿಕೊಳ್ಳಲಾಗಿದೆ. ಹೇಗಿದ್ದರೂ ಉಪ್ಪಿ ಮಾತಿಗೇ ಹೆಸರುವಾಸಿಯಲ್ಲವೇ?

ಟ್ರೇಲರ್‌ನಿಂದ ನಿರಾಸೆಯಾಗಿಲ್ಲ. ಈಗಾಗಲೇ ಕೆಲವು ಹಾಡುಗಳು ಕೂಡ ಹಿಟ್ ಆಗಿವೆ. ಹಾಗಾಗಿ ಚಿತ್ರದಲ್ಲೂ ಯಾರಿಗೂ ನಿರಾಸೆಯಾಗುವುದಿಲ್ಲ. ಸಿನಿಮಾ ಮಂದಿರಕ್ಕೆ ಬಂದು ಚಿತ್ರ ನೋಡಿ ಎಂದು ಚಿತ್ರತಂಡ ಹೇಳುತ್ತಿದೆ.

ಈ ಟ್ರೇಲರ್ ನೋಡಿದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ಶಿವರಾಜ್ ಕುಮಾರ್, ಡಿ.ಕೆ. ಶಿವಕುಮಾರ್ ಸೇರಿದಂತೆ ಬಹುತೇಕ ಮಂದಿ ಕಣ್ಣರಳಿಸಿದ್ದಾರೆ. ಈಗಲೇ ಇಷ್ಟಾದರೆ, ಇನ್ನು ಸಿನಿಮಾದಲ್ಲಿ ಎಷ್ಟೆಲ್ಲ ಅಚ್ಚರಿಗಳಿರಬಹುದು ಎಂದು ಲೆಕ್ಕಾಚಾರ ಶುರುವಿಟ್ಟಿದ್ದಾರೆ.

ಹಾಗಿದ್ದರೆ ನಿಮಗೆ ಟ್ರೇಲರ್ ಹೇಗನ್ನಿಸಿತು? ಸಾಧ್ಯವಾದರೆ ಪ್ರತಿಕ್ರಿಯಿಸಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments