Webdunia - Bharat's app for daily news and videos

Install App

ಉಪೇಂದ್ರ-ಪ್ರೇಮ್ ಚಿತ್ರ ಮಾಡೇ ಮಾಡ್ತೇನೆ: ಮುನಿರತ್ನಂ

Webdunia
ಸೋಮವಾರ, 7 ಫೆಬ್ರವರಿ 2011 (18:21 IST)
PR
ಯಾವುದನ್ನು ನಂಬಬೇಕು, ಯಾವುದನ್ನು ನಂಬಬಾರದು ಎನ್ನುವ ಸ್ಥಿತಿಯಿದು. ಮೊನ್ನೆಯಷ್ಟೇ, ಸದ್ಯಕ್ಕೆ 'ಡೈರೆಕ್ಟರ್ಸ್' ಚಿತ್ರ ಮಾಡೋದಿಲ್ಲ ಎಂದು ಹೇಳಿದ್ದ ನಿರ್ಮಾಪಕ ಮುನಿರತ್ನಂ ಈಗ ವರಸೆಯನ್ನು ಕೊಂಚ ಬದಲಾಯಿಸಿಕೊಂಡಿದ್ದಾರೆ. ಏಪ್ರಿಲ್‌ನಲ್ಲಿ ಈ ಚಿತ್ರ ಸೆಟ್ಟೇರುತ್ತದೆ ಎಂದು ಹೇಳಿದ್ದಾರೆ.

ನಿರ್ದೇಶಕರಾದ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರೇಮ್ ನಟಿಸಲಿರುವ ಈ ಚಿತ್ರವನ್ನು ಕೈ ಬಿಡಲಾಗಿದೆ ಎಂದು ಮುನಿರತ್ನಂ ಹೇಳಿದ್ದರು. ಆದರೆ, ಇಬ್ಬರು ನಿರ್ದೇಶಕರು ಒಂದೇ ಚಿತ್ರದಲ್ಲಿ ನಟಿಸುವುದು ಖಚಿತ. ಏಪ್ರಿಲ್ ನಂತರ ಈ ಚಿತ್ರ ಆರಂಭವಾಗುತ್ತದೆ ಎಂದು ಈಗ ಸ್ಪಷ್ಟನೆ ನೀಡಿದ್ದಾರೆ.

ಈ ಹಿಂದೆ ಅಂದುಕೊಂಡ ಪ್ರಕಾರ ಉಪೇಂದ್ರ ನಟಿಸುವ ಭಾಗವನ್ನು ಮೊದಲು ಅಂದರೆ ಈಗಲೇ ಚಿತ್ರೀಕರಣ ನಡೆಸಬೇಕಾಗಿತ್ತು. ನಂತರ ಪ್ರೇಮ್ ನಟನೆಯ ಭಾಗವನ್ನು ಶೂಟಿಂಗ್ ಮಾಡಬೇಕಿತ್ತು. ಆದರೆ ಈ ಸಂಬಂಧ ಕೊಂಚ ಗೊಂದಲಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸದ್ಯಕ್ಕೆ ಚಿತ್ರೀಕರಣ ನಡೆಸದೇ ಇರಲು ನಿರ್ಧರಿಸಲಾಗಿದೆ. ಆದರೆ ಪ್ರೊಜೆಕ್ಟ್ ರದ್ದಾಗಿಲ್ಲ.

ಉಪೇಂದ್ರ 'ಸೂಪರ್' ಚಿತ್ರದ ತೆಲುಗು-ತಮಿಳು ಡಬ್ಬಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅತ್ತ ಪ್ರೇಮ್ ಅವಸ್ಥೆಯೂ ಅದೇ ಆಗಿದೆ. ಅವರು ಶಿವರಾಜ್ ಕುಮಾರ್ ನಾಯಕನಾಗಿರುವ 'ಜೋಗಯ್ಯ'ದ ಹಾಡುಗಳ ಚಿತ್ರೀಕರಣದಲ್ಲಿ ಮಗ್ನರಾಗಿದ್ದಾರೆ. ನಂತರ ಬಿಡುಗಡೆಯಾಗುವ ತನಕ ಅವರಂತೂ ಕೈಗೆ ಸಿಗುವುದು ಕಷ್ಟ.

ಹಾಗಾಗಿ ಸದ್ಯಕ್ಕೆ ಚಿತ್ರೀಕರಣ ನಡೆಸುವುದು ಸಾಧ್ಯವೇ ಇಲ್ಲ. ಆದರೆ ಚಿತ್ರ ನಿರ್ಮಾಣದಿಂದ ಹಿಂದಕ್ಕೆ ಸರಿದಿಲ್ಲ. ಆ ಚಿತ್ರದ ನಿರ್ದೇಶಕರು ಮತ್ತು ನಾಯಕಿಯರು ಯಾರು ಎಂಬುದನ್ನು ಇದುವರೆಗೆ ನಿರ್ಧರಿಸಿಲ್ಲ. ನಾಯಕರಿಬ್ಬರೂ ನಿರ್ದೇಶಕರೇ ಆಗಿರುವ ಕಾರಣ ಆ ಆಯ್ಕೆ ಅವರಿಗೆ ಬಿಡುತ್ತೇನೆ ಎಂದು ಮುನಿರತ್ನ ತಿಳಿಸಿದ್ದಾರೆ.

ಮಲಯಾಳಂನಲ್ಲಿ ಮೋಹನ್‌ಲಾಲ್-ಶ್ರೀನಿವಾಸನ್ ನಟಿಸಿದ್ದ 'ಉದಯನಾನ್ ತಾರಂ' ಕನ್ನಡದಲ್ಲಿ 'ಡೈರೆಕ್ಟರ್ಸ್' ಎಂಬ ಹೆಸರಿನಲ್ಲಿ ಬರಲಿದೆ. ವರ್ಷಾಂತ್ಯದೊಳಗೆ ಈ ಚಿತ್ರವನ್ನು ಬಿಡುಗಡೆ ಮಾಡುತ್ತೇನೆ ಎಂದು ನಿರ್ಮಾಪಕರು ಖಚಿತಪಡಿಸಿದ್ದಾರೆ.

ಈ ಚಿತ್ರವನ್ನು ಸಾಧುಕೋಕಿಲಾ ನಿರ್ದೇಶಿಸಲಿದ್ದಾರೆ, ಗುರುಕಿರಣ್ ಸಂಗೀತ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments