Select Your Language

Notifications

webdunia
webdunia
webdunia
webdunia

ಈ ವಾರ ದುನಿಯಾ ವಿಜಿ-ಐಂದ್ರಿತಾ 'ರಜನಿ ಕಾಂತ' ರಿಲೀಸ್

ಈ ವಾರ ದುನಿಯಾ ವಿಜಿ-ಐಂದ್ರಿತಾ 'ರಜನಿ ಕಾಂತ' ರಿಲೀಸ್
PR
ದುನಿಯಾ ವಿಜಯ್ ನಾಯಕನಾಗಿರುವ, ಐಂದ್ರಿತಾ ರೇ ನಾಯಕಿಯಾಗಿರುವ 'ರಜನಿ ಕಾಂತ' ಚಿತ್ರ ಇದೇ ವಾರ (ಮಾ.1, ಶುಕ್ರವಾರ) ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ.

ವಿಜಿ ಮೊದಲ ಬಾರಿ ದ್ವಿಪಾತ್ರದಲ್ಲಿ ನಟಿಸಿರುವ ಚಿತ್ರ 'ರಜನಿ ಕಾಂತ' ನಿರ್ದೇಶಿಸಿರುವುದು ಪ್ರದೀಪ್ ರಾಜ್. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಕೆ. ಮಂಜು ನಿರ್ಮಾಪಕರು. 'ಜಂಗ್ಲಿ' ಹಿಟ್ ಜೋಡಿಯ ಚಿತ್ರವಾಗಿರುವುದರಿಂದ ಮತ್ತು ಕೆಲವು ಹಾಡುಗಳು ಈಗಾಗಲೇ ಹಿಟ್ ಆಗಿರುವುದರಿಂದ ಪ್ರೇಕ್ಷಕರಲ್ಲಿ ಒಂದು ಹಂತದ ನಿರೀಕ್ಷೆಯಿದೆ.

ಚಿತ್ರದಲ್ಲಿ ರಜನಿ ಮತ್ತು ಕಾಂತಾ ಎಂಬ ಎರಡೂ ಪಾತ್ರಗಳಲ್ಲಿ ವಿಜಿ ನಟಿಸಿದ್ದಾರೆ. ರಜನಿ ಇಲ್ಲಿ ಕ್ಲಾಸ್ ಆದರೆ, ಕಾಂತಾ ಮಾಸ್ ಅಂತೆ. ಭರಪೂರ ಮನರಂಜನೆಯನ್ನೇ ಗುರಿಯಾಗಿಟ್ಟುಕೊಂಡು ಕಥೆ ಹೆಣೆಯಲಾಗಿದೆ. ಪ್ರೇಕ್ಷಕರು ಚಿತ್ರಮಂದಿರದಲ್ಲಿ ಇದ್ದಷ್ಟು ಹೊತ್ತು ಖುಷಿಯಿಂದ ಇರುವಂತೆ ಮಾಡುವ ಚಿತ್ರವಿದು ಎಂದು ನಿರ್ದೇಶಕ ಪ್ರದೀಪ್ ರಾಜ್ ಹೇಳಿಕೊಂಡಿದ್ದಾರೆ.

ಎಲ್ಲಕ್ಕೂ ಹೆಚ್ಚಾಗಿ ಇದು ಯಾವುದೇ ಪರಭಾಷೆಯ ರಿಮೇಕ್ ಅಥವಾ ರಿಮಿಕ್ಸ್ ಅಲ್ಲ. ಪಕ್ಕಾ ಸ್ವಮೇಕ್. ಚಿತ್ರದ ಗ್ರಾಫಿಕ್ಸ್ ಕೆಲಸಕ್ಕಾಗಿ 25 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಸೀಳು ತುಟಿ ಪಾತ್ರದ ಡಬ್ಬಿಂಗ್‌ಗಾಗಿ 15 ದಿನ ವ್ಯಯಿಸಿದರಂತೆ ವಿಜಯ್. ಬುಲೆಟ್ ಪ್ರಕಾಶ್ ಪಾತ್ರ ತುಂಬಾ ಭಿನ್ನವಾಗಿದೆಯಂತೆ.

ಒಂದು ಕಮರ್ಷಿಯಲ್ ಚಿತ್ರದಲ್ಲಿರಬೇಕಾದ ಎಲ್ಲ ಅಂಶಗಳು ರಜನಿ ಕಾಂತದಲ್ಲಿವೆ. ಜಂಗ್ಲಿ ಚಿತ್ರದ ನಂತರ ವಿಜಯ್ ಜತೆ ನಟಿಸಲು ಕೆಲವು ಚಿತ್ರಗಳ ಆಫರುಗಳು ಬಂದಿದ್ದವು. ಆದರೆ ಯಾವುದೂ ಇಷ್ಟವಾಗಿರಲಿಲ್ಲ. ಆದರೆ ರಜನಿ ಕಾಂತ ನನಗೆ ಹಿಡಿಸಿತ್ತು ಎಂದು ತಿಳಿಸಿದ್ದಾರೆ ನಾಯಕಿ ಐಂದ್ರಿತಾ ರೇ.

ಚಿತ್ರವನ್ನು ಪ್ರಸಾದ್ ತನ್ನ ಸಂಸ್ಥೆಯ ಮೂಲಕ ರಾಜ್ಯದ 125ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.

Share this Story:

Follow Webdunia kannada