Webdunia - Bharat's app for daily news and videos

Install App

ಇನ್ನೊಮ್ಮೆ ಅದೇ 'ಮೈನಾ', ಹೆಸರು ಮಾತ್ರ 'ಒಮ್ಮೊಮ್ಮೆ'..!

Webdunia
ಶುಕ್ರವಾರ, 31 ಮೇ 2013 (14:33 IST)
PR
PR
ಒಮ್ಮೊಮ್ಮೆ ಹೀಗೂ ಆಗುವುದು.. ಎಲ್ಲಿಯೋ ಮನಸು ಓಡುವುದು... ಈ ಸಾಲಿನ ಮೇಲೆ ನಾಗಶೇಖರ್‌ಗೆ ಮೋಹ ಬೆಳೆದಂತಿದೆ. ಅಪ್ಪಟ ಪ್ರೇಮಕಥೆಗಳನ್ನೇ ಸಿನಿಮಾ ಮಾಡುವ ಪ್ರೇಮಿಗಳ ನಿರ್ದೇಶಕ ನಾಗಶೇಖರ್ ಈಗ ತನ್ನ ಹೊಸ ಚಿತ್ರಕ್ಕೆ ಇಟ್ಟಿರುವ ಹೆಸರು 'ಒಮ್ಮೊಮ್ಮೆ'!

ಅರಮನೆ, ಸಂಜು ವೆಡ್ಸ್ ಗೀತಾ ಮತ್ತು ಮೈನಾ ಚಿತ್ರಗಳ ಖ್ಯಾತಿ ನಾಗಶೇಖರ್‌ಗಿದ್ದರೂ, ಅವರಿಗೆ ನಿರ್ಮಾಪಕರ ಕೊರತೆ ಸದಾ ಕಾಡುವ ಸಮಸ್ಯೆ. ಬೇರೆ ನಿರ್ದೇಶಕರಿಗಾದರೆ ಬೆನ್ನು ಬಿದ್ದು ಸಿನಿಮಾ ಮಾಡುವಂತೆ ನಿರ್ಮಾಪಕರು ದುಂಬಾಲು ಬೀಳುತ್ತಾರೆ. ಆದರೆ ಒಂದೇ ಒಂದು ನಿರ್ಮಾಪಕ ನನ್ನನ್ನು ಇದುವರೆಗೆ ಸಂಪರ್ಕಿಸಿಲ್ಲ ಎಂದು ಕೆಲ ದಿನಗಳ ಹಿಂದಷ್ಟೇ ಸ್ವತಃ ನಾಗಶೇಖರ್ ಹೇಳಿಕೊಂಡಿದ್ದರು.

ಅಷ್ಟೇ ಅಲ್ಲ, ಮೈನಾ ಚಿತ್ರ ನಿರೀಕ್ಷೆಯಷ್ಟು ಹಣ ಮಾಡದೇ ಇರುವುದರಿಂದ ಮೈನಾ ಭಾಗ-2 ಮಾಡುವ ಪ್ರಸ್ತಾಪವನ್ನು ಕೈ ಬಿಟ್ಟಿರುವುದಾಗಿ 'ಮೈನಾ' ನಿರ್ಮಾಪಕ ವಜ್ರೇಶ್ವರಿ ಕುಮಾರ್ ಹೇಳಿದ್ದರು. ವರಸೆ ನೋಡುವಾಗ ಮತ್ತೆ ನಾಗಶೇಖರ್ ನಿರ್ದೇಶನದಲ್ಲಿ ಕುಮಾರ್ ಯಾವುದೇ ಸಿನಿಮಾ ಮಾಡುತ್ತಾರೆ ಎಂಬ ಲಕ್ಷಣಗಳು ಕಂಡಿರಲಿಲ್ಲ.

ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಮೈನಾ ಟೀಮ್ ರಿಪೀಟ್ ಆಗುತ್ತಿದೆ. ಅದೇ ಚೇತನ್, ಅದೇ ನಿತ್ಯಾ ಮೆನನ್ ತಾರಾಗಣದಲ್ಲಿ ಹೊಸದೊಂದು ಸಿನಿಮಾ ಬರಲಿದೆ. ನಿರ್ದೇಶಕ ನಾಗಶೇಖರ್ ಆಗಿದ್ದರೆ, ವಜ್ರೇಶ್ವರಿ ಕುಮಾರ್ ನಿರ್ಮಿಸಲಿದ್ದಾರೆ. ಈ ಚಿತ್ರ ನಾಲ್ಕು ಭಾಷೆಗಳಲ್ಲಿ ಬರಲಿದೆ ಎನ್ನುವುದು ವಿಶೇಷ.

ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂಗಳಲ್ಲಿ 'ಒಮ್ಮೊಮ್ಮೆ' ಚಿತ್ರೀಕರಣವಾಗಲಿದೆ. ಎಲ್ಲ ನಾಲ್ಕೂ ಭಾಷೆಗಳಲ್ಲಿ ನಿತ್ಯಾ ಮೆನನ್ ಹೀರೋಯಿನ್. ಕನ್ನಡದಲ್ಲಿ ಚೇತನ್ ಕುಮಾರ್ ಹೀರೋ. ಉಳಿದ ಭಾಷೆಗಳಲ್ಲಿ ಅಲ್ಲಿನ ನಾಯಕರೇ ಹೀರೋ ಆಗಿರುತ್ತಾರೆ ಎಂದು ಪ್ರಾಜೆಕ್ಟ್ ಬಗ್ಗೆ ನಿರ್ಮಾಪಕ ಕುಮಾರ್ ವಿವರಣೆ ನೀಡಿದ್ದಾರೆ.

' ಮೈನಾ' ಚಿತ್ರದ ಮೂಲಕ ನಿರ್ದೇಶಕ ನಾಗಶೇಖರ್ ಮತ್ತು ಅವರ ಟೀಮ್ ಅದ್ಭುತ ಸಾಧನೆ ಮಾಡಿದೆ. ಹಾಗಾಗಿ ಅದೇ ತಂಡದೊಂದಿಗೆ ಇನ್ನೊಂದು ಸಿನಿಮಾ ಮಾಡಲು ನನಗೆ ಪ್ರೇರಣೆ ಸಿಕ್ಕಿದೆ. ಈ ಚಿತ್ರದ ಶೂಟಿಂಗ್ ಕರ್ನಾಟಕ ಮತ್ತು ಅಮೆರಿಕಾದಲ್ಲಿ ನಡೆಯಲಿದೆ ಎಂದಿದ್ದಾರೆ.

ಮೈನಾ ಗೆದ್ದರೂ ಯಾರೂ ಹತ್ತಿರ ಬರದಿರುವುದು ನೋವಾಗಿತ್ತು. ಇಡೀ ಚಿತ್ರರಂಗದ ಬಗ್ಗೆಯೇ ಬೇಸರವಾಗಿತ್ತು. ಆದರೆ ಈಗ ಕುಮಾರ್ ಮತ್ತೆ ಮುಂದೆ ಬಂದಿದ್ದಾರೆ. ಚಿತ್ರಕಥೆಯಲ್ಲಿ ಕೊನೆಯ ಕ್ಷಣದ ಬದಲಾವಣೆಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ ಎಂದು ನಾಗಶೇಖರ್ ಪ್ರತಿಕ್ರಿಯಿಸಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments