Webdunia - Bharat's app for daily news and videos

Install App

'ಆರ್ಯನ್'ನಲ್ಲಿ ಜೋಡಿಯಾದ್ರೂ ಜತೆಗೆ ಕೂರದ ಶಿವಣ್ಣ-ರಮ್ಯಾ!

Webdunia
ಶುಕ್ರವಾರ, 26 ಏಪ್ರಿಲ್ 2013 (13:48 IST)
PR
ವಿಜಯ ಪ್ರಸಾದ್ ನಿರ್ದೇಶನದ 'ನೀರ್ ದೋಸೆ' ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್‌ಗೆ ರಮ್ಯಾ ಹೀರೋಯಿನ್ ಅಲ್ಲ. ಆ ಕಾರಣಕ್ಕಾಗಿ ಇಬ್ಬರೂ ಎಲ್ಲೂ ಜತೆಯಾಗಿ ಫೋಟೊಗೆ ಪೋಸ್ ಕೊಟ್ಟಿಲ್ಲ. ಬಹುಶಃ ಅಂತಹುದೇ ಕಾರಣ ಇಲ್ಲೂ ಇರಬಹುದೇ ಎಂದು ಯಾರಾದರೂ ಲೆಕ್ಕಾಚಾರ ಹಾಕಬಹುದು. ಆದರೆ ಅದು ನಿಜವಲ್ಲ!

' ಆರ್ಯನ್' ಚಿತ್ರದಲ್ಲಿ ಸೆಂಚುರಿ ಸ್ಟಾರ್‌ ಶಿವರಾಜ್ ಕುಮಾರ್ ಅವರಿಗೆ ಲಕ್ಕಿ ಸ್ಟಾರ್ ರಮ್ಯಾ ಹೀರೋಯಿನ್. ಇದೇ ಮೊದಲ ಬಾರಿ ಚಿತ್ರರಂಗದ ಪ್ರಮುಖರಿಬ್ಬರು ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇಷ್ಟೆಂದ ಮೇಲೆ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಸಹಜ. ಆ ಕುತೂಹಲವನ್ನು ಉಳಿಸಿಕೊಳ್ಳಬೇಕು ಎನ್ನುವುದು ನಿರ್ಮಾಪಕರ ಪ್ಲಾನ್.

ಮೊನ್ನೆ ನಿರ್ದೇಶಕ ಡಿ. ರಾಜೇಂದ್ರ ಬಾಬು ಮತ್ತು ನಿರ್ಮಾಪಕ ಕಮಾರ್ ಉಪಸ್ಥಿತಿಯಲ್ಲಿ ತುಂಬಾ ಲೇಟಾಗಿ 'ಆರ್ಯನ್' ಮುಹೂರ್ತ ನಡೆಯಿತು. ಈ ಸಂದರ್ಭ ಶಿವಣ್ಣ ಮತ್ತು ರಮ್ಯಾರನ್ನು ಜತೆಗೆ ನೋಡಬೇಕು, ಅವರ ಫೋಟೊ ಕ್ಲಿಕ್ಕಿಸಬೇಕು ಎಂದು ರೆಡಿಯಾಗಿದ್ದ ಕ್ಯಾಮರಾಮ್ಯಾನ್‌ಗಳು ಒಬ್ಬಿಬ್ಬರಲ್ಲ. ಆದರೆ ಎಲ್ಲರಿಗೂ ನಿರಾಸೆ. ಶಿವಣ್ಣ-ರಮ್ಯಾ ಎಲ್ಲೂ ಜತೆಗೆ ಕಾಣಿಸಿಕೊಳ್ಳಲೇ ಇಲ್ಲ.

ಸಾಮಾನ್ಯವಾಗಿ ಸಿನಿಮಾಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳಲ್ಲಿ ನಾಯಕ-ನಾಯಕಿ ಜತೆಯಾಗಿ ಕುಳಿತುಕೊಳ್ಳುವುದು, ಫೋಟೊ-ವಿಡಿಯೋಗೆ ಪೋಸ್ ಕೊಡುವುದು ಮಾಮೂಲಿ. ಆದರೆ ಇಲ್ಲಿ ಇಬ್ಬರ ನಡುವೆ ಬಂದವರು ನಿರ್ಮಾಪಕ ಕಮಾರ್. ಎಲ್ಲೂ ಶಿವಣ್ಣ ಮತ್ತು ರಮ್ಯಾ ಜತೆಯಾಗಲು ಅವರು ಬಿಡಲಿಲ್ಲ. ಬೇಕೆಂದೇ ಜೋಡಿ ಜತೆಗಿರುವುದನ್ನು ತಪ್ಪಿಸಿದರು.

ಇದಕ್ಕಿರುವ ಕಾರಣವನ್ನು ನಿರ್ಮಾಪಕ ಕಮಾರ್ ವಿವರಿಸಿದ್ದಾರೆ. ಇದೇ ಮೊದಲ ಬಾರಿ ಶಿವಣ್ಣ-ರಮ್ಯಾ ಜೋಡಿಯಾಗಿ ನಟಿಸುತ್ತಿದ್ದಾರೆ. ಅವರಿಬ್ಬರನ್ನು ಜತೆಯಾಗಿ ನೋಡಬೇಕೆಂದು ಪ್ರೇಕ್ಷಕರು ಬಯಸುತ್ತಿದ್ದಾರೆ ಎನ್ನುವುದು ಗೊತ್ತಿದೆ. ಆ ಬಗೆಗಿನ ಕುತೂಹಲ ಇರಲಿ ಎಂಬ ಕಾರಣಕ್ಕೆ ಇಬ್ಬರ ನಡುವೆ ನಾನು ಕುಳಿತಿದ್ದೇನೆ. ಈಗಲೇ ಅವರು ಜತೆಯಾಗಿರುವ ಫೋಟೊಗಳು ಪ್ರಕಟಾವಾದರೆ ಆಸಕ್ತಿ ಉಳಿದಿರುವುದಿಲ್ಲ ಎಂದು ತಿಳಿಸಿದ್ದಾರೆ.

ಚಿತ್ರಕ್ಕೆ ಎರಡನೇ ನಾಯಕಿಯಾಗಿ ಅರ್ಚನಾ ಗುಪ್ತಾ ಆಯ್ಕೆಯಾಗಿದ್ದಾರೆ. ಅವರೇನೂ ಹೊಸಬರಲ್ಲ. ಈ ಹಿಂದೆ ಸರ್ಕಸ್, ಕಾರ್ತಿಕ್ ಮುಂತಾದ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡವರು. 25 ದಿನ ವಿದೇಶಗಳಲ್ಲಿ ಚಿತ್ರೀಕರಣ, ಕೆಲವೇ ಕೆಲವು ಭಾಗ ಮಾತ್ರ ಭಾರತದಲ್ಲಿ ಎಂದು ನಿರ್ದೇಶಕ ರಾಜೇಂದ್ರ ಬಾಬು ತಿಳಿಸಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments