Webdunia - Bharat's app for daily news and videos

Install App

ಆಂಟಿಯಾದ ರಮ್ಯಾಗೀಗ ಪರ್ಸನಲ್ ಮ್ಯಾನೇಜರ್!

Webdunia
SUJENDRA
ಲೂಸ್ ಮಾದ ಯೋಗೀಶ್ ನಾಯಕನಾಗಿರುವ 'ಸಿದ್ಲಿಂಗು'ವಿನಲ್ಲಿ ರಮ್ಯಾರದ್ದು ಕನ್ನಡಕ ಹಾಕಿಕೊಂಡಿರುವ ಆಂಟಿ ಪಾತ್ರವಂತೆ. ಈಗ ಅದೇ ಆಂಟಿ ನಿಜ ಜೀವನದಲ್ಲಿ ಮ್ಯಾನೇಜರ್ ಇಟ್ಟುಕೊಂಡಿದ್ದಾರೆ. ಅದಕ್ಕೆ ಕಾರಣ, ಸಿನಿಮಾ ಹೊರತು ಪಡಿಸಿದ ಕ್ಷೇತ್ರಗಳಲ್ಲೂ ಸಿಕ್ಕಾಪಟ್ಟೆ ಬ್ಯುಸಿಯಾಗಿರುವುದು.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ರಮ್ಯಾ ಈಗ ಕೇವಲ ಸಿನಿಮಾ ನಟಿಯಲ್ಲ. ಅವರೀಗ ಕಾಂಗ್ರೆಸ್ ಯುವ ನಾಯಕಿ. ಸಮಾಜದಲ್ಲಿ ಪರಿವರ್ತನೆಗೆ ಕಾರಣವಾಗುತ್ತಿರುವುದರಿಂದ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಬೇರೆ ಬರುತ್ತಿವೆ. ಕನ್ನಡ, ತಮಿಳು ಚಿತ್ರರಂಗಗಳಲ್ಲಂತೂ ಬಿಡುವಿಲ್ಲದಷ್ಟು ಕೆಲಸಗಳು. ಹಾಗಾಗಿ ಎಲ್ಲವನ್ನೂ ಸ್ವತಃ ನಿಭಾಯಿಸುವುದು ಕಷ್ಟವಾಗುತ್ತಿದೆ. ಹಾಗಾಗಿ ಮ್ಯಾನೇಜರ್ ಒಬ್ಬರನ್ನು ನೇಮಕ ಮಾಡಿಕೊಂಡಿದ್ದಾರೆ.

ಇದುವರೆಗೆ ರಮ್ಯಾರನ್ನು ಪತ್ರಕರ್ತರು ಅಥವಾ ಸಿನಿಮಾ ರಂಗದವರು ಸಂಪರ್ಕಸಬೇಕೆಂದರೆ ಸುಲಭವಾಗಿ ಸಿಕ್ಕಿ ಬಿಡುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಮೊದಲು ಮ್ಯಾನೇಜರ್ ಉಷಾ ಅವರನ್ನು ಸಂಪರ್ಕಿಸಿದ ನಂತರವಷ್ಟೇ ರಮ್ಯಾರನ್ನು ಮಾತನಾಡಿಸಬಹುದು. ಮ್ಯಾನೇಜರ್ ಉಷಾ ಅವರು ರಮ್ಯಾರ ಸಾರ್ವಜನಿಕ ಸಮಾರಂಭಗಳು, ಸಂದರ್ಶನಗಳು, ಭೇಟಿಗಳು ಸೇರಿದಂತೆ ಎಲ್ಲವನ್ನೂ ನಿರ್ವಹಿಸಲಿದ್ದಾರೆ.

ಇನ್ನು ರಮ್ಯಾ 'ಸಿದ್ಲಿಂಗು'ವಿನಲ್ಲಿ ಆಂಟಿಯಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಮೇಲ್ನೋಟಕ್ಕೆ ಅವರ ಪಾತ್ರ ಶಿಕ್ಷಕಿಯಂತಿದೆ. ಮೇಕಪ್ ಇಲ್ಲದ ಮುಖ, ಗ್ಲಾಮರ್ ಅಂತೂ ಇಲ್ಲವೇ ಇಲ್ಲ. ಮೂಗಿನ ಮೇಲೊಂದು ಕನ್ನಡಕ ಬೇರೆ. ಪಕ್ಕನೆ ಸುಹಾಸಿನಿಯಂತಹ ನಟಿಯರ ಹಳೆಯ ಚಿತ್ರಗಳನ್ನು ನೆನಪಿಸುತ್ತಾರೆ. ಆದರೆ ನಿರ್ದೇಶಕ ವಿಜಯ ಪ್ರಸಾದ್ ಸೇರಿದಂತೆ ಚಿತ್ರದ ಯಾರೊಬ್ಬರೂ ಪಾತ್ರದ ಗುಟ್ಟು ಬಿಟ್ಟು ಕೊಡುತ್ತಿಲ್ಲ.

ಟಿ.ಪಿ. ಸಿದ್ಧರಾಜು ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಅಚ್ಚುತ್ತ ರಾವ್, ಗಿರಿಜಾ ಲೋಕೇಶ್ ಮುಂತಾದವರೂ ನಟಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಎಲ್ಲವೂ ನಿರ್ದೇಶಕರದ್ದು. ಅನೂಪ್ ಸಿಳೀನ್ ಸಂಗೀತ, ಡಿಫರೆಂಟ್ ಡ್ಯಾನಿ ಸಾಹಸ, ಜ್ಞಾನಮೂರ್ತಿ ಛಾಯಾಗ್ರಹಣ, ಉದಯ ಹೆಗಡೆ ಸಂಕಲನ ಚಿತ್ರಕ್ಕಿದೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments