Select Your Language

Notifications

webdunia
webdunia
webdunia
webdunia

ಅವಕಾಶಕ್ಕಾಗಿ ಬಟ್ಟೆ ಬಿಚ್ಚಿದ ಅನಿತಾ ಭಟ್ Dirty Picture!

ಅವಕಾಶಕ್ಕಾಗಿ ಬಟ್ಟೆ ಬಿಚ್ಚಿದ ಅನಿತಾ ಭಟ್ Dirty Picture!
, ಸೋಮವಾರ, 10 ಜೂನ್ 2013 (15:09 IST)
PR
ಇನ್ನು ಕಾಯುವುದು ತರವಲ್ಲ ಎಂಬ ನಿರ್ಧಾರಕ್ಕೆ ಅನಿತಾ ಭಟ್ ಬಂದಾಗಿದೆ. ಕಾದು ಕುಳಿತರೆ ಇಲ್ಲೇ ಮುದುಕಿಯಾಗಿ ಬಿಡುತ್ತೇನೆ, ನಂತರ ದೇಹಸೌಂದರ್ಯವನ್ನಾದರೂ ಯಾರು ನೋಡುತ್ತಾರೆ? ಮತ್ತೆಲ್ಲಿಯ ಅವಕಾಶ? ಅದೇನಿದ್ದರೂ ಈಗ ಮಾತ್ರ. ಹಾಗಾಗಿ ನೋಡಿದರು ಅವಕಾಶ ಕೊಟ್ಟರೆ ಕೊಡುತ್ತಾರೆ ಎಂದುಕೊಂಡೇ ಬಟ್ಟೆ ಬಿಚ್ಚಿದ್ದಾರೆ!

ಬರೀ ಅನಿತಾ ಭಟ್ ಅಂದ ಕೂಡಲೇ ಯಾರಿಗೂ ಈ ಬೆಡಗಿಯ ಪರಿಚಯವಾಗಲಿಕ್ಕಿಲ್ಲ. ಹಾಗೊಮ್ಮೆ ಪರಿಚಯವಾಗುವ ಅವಕಾಶವನ್ನು ತಪ್ಪಿಸಿದವರು ನಿರ್ದೇಶಕ ದೇವದತ್ತ. ಅವರ ನಿರ್ದೇಶನದ 'ಸೈಕೋ' ಚಿತ್ರದಲ್ಲಿ ನಾಯಕ ಧನುಷ್‌ಗೆ ಇದೇ ಅನಿತಾ ಭಟ್ ಹೀರೋಯಿನ್ ಆಗಿದ್ದರು. ಆದರೆ ದೇವದತ್ತ ಯಾರನ್ನೂ ಪೋಸ್ಟರುಗಳಲ್ಲಿ ತೋರಿಸಿರಲಿಲ್ಲ. ಹಾಡುಗಳನ್ನೂ ಚಾನೆಲ್‌ಗಳಿಗೆ ಬಿಟ್ಟಿರಲಿಲ್ಲ. ಪರಿಣಾಮ ಚಿತ್ರ ಬಿಡುಗಡೆಯಾಗುವವರೆಗೆ ಚಿತ್ರದ ಹೆಸರು 'ಸೈಕೋ' ಎಂದು ಗೊತ್ತಿತ್ತೇ ವಿನಃ ನಾಯಕ-ನಾಯಕಿಯರು ಯಾರು ಎನ್ನುವುದು ಬಹಿರಂಗವಾಗಿರಲಿಲ್ಲ. ನಂತರ ಬಹಿರಂಗವಾದರೂ ಜನರಿಗೆ ಬೇಕಿರಲಿಲ್ಲ.

ಹೀಗೆ ಮೊದಲ ಚಿತ್ರದಲ್ಲಿ ಯಶಸ್ಸು ಕಂಡೂ ಕಾಣದಂತಾದ ಅನಿತಾ ಭಟ್‌ರದ್ದು ನಗುವುದೋ ಅಳುವುದೋ ಎನ್ನುವ ಪರಿಸ್ಥಿತಿ. ನಂತರ ವೆಂಕಟೇಶ್ ಪಂಚಾಂಗ ಎಂಬವರ ನಿರ್ದೇಶನದ 'ಕ್ರ್ಯಾಕ್' ಚಿತ್ರದಲ್ಲಿ ತಿಲಕ್‌ಗೆ ನಾಯಕಿಯಾಗಿದ್ದಾಯ್ತು. ಆದರೆ ಆ ಚಿತ್ರ ಬಿಡುಗಡೆಯಾಗಲೇ ಇಲ್ಲ. ನಂತರ ಶಿವರಾಜ್ ಕುಮಾರ್ ನಾಯಕನಾಗಿದ್ದ 'ಸುಗ್ರೀವ' ಚಿತ್ರದಲ್ಲಿ ನಟಿಸಿದರೂ ಜನರಿಗೆ ಗೊತ್ತಾಗಲಿಲ್ಲ. ರವಿಶಂಕರ್ ನಾಯಕನಾಗಿರುವ 'ನಗೆಬಾಂಬ್'ನಲ್ಲಿ ನಾಯಕಿ. ಅದೂ ತೆರೆಗೆ ಬಂದಿಲ್ಲ.

ನಾಲ್ಕೈದು ವರ್ಷಗಳಿಂದ ಚಿತ್ರರಂಗದಲ್ಲಿದ್ದರೂ ಅವಕಾಶಗಳೇ ಸಿಗುತ್ತಿಲ್ಲ ಎಂದು ಕುಳಿತಿದ್ದಾಗ, ತ್ರಿಶೂಲ್ ನಿರ್ದೇಶನದ 'ಡರ್ಟಿ ಪಿಕ್ಚರ್: ಸಿಲ್ಕ್ ಸಖತ್ ಮಗಾ' (ಈಗ ಹೆಸರು ಬದಲಾಗಿದೆ) ಆಫರ್ ಬಂದಿತ್ತು. ಚಿತ್ರದಲ್ಲಿ ಅಕ್ಷಯ್ ಮತ್ತು ವೀಣಾ ಮಲಿಕ್ ಪ್ರಮುಖ ಪಾತ್ರಗಳಲ್ಲಿದ್ದರೂ, ಇನ್ನೊಂದು ಮುಖ್ಯ ಪಾತ್ರ ಅನಿತಾ ಭಟ್‌ಗೆ ಸಿಕ್ಕಿತ್ತು. ಪಾಲಿಗೆ ಬಂದ ಪಂಚಾಮೃತವನ್ನು ಸರಿಯಾಗಿಯೇ ಬಳಸಿಕೊಂಡಿದ್ದಾರೆ. ಚಿತ್ರದಲ್ಲಿ ಸಖತ್ ಹಾಟ್ ದೃಶ್ಯಗಳಲ್ಲಿ ಭಾಗವಹಿಸಿದ್ದಾರೆ. ಇಲ್ಲಿ ಅನಿತಾ ಭಟ್‌ರದ್ದು ಹೈಪ್ರೊಫೈಲ್ ವೇಶ್ಯೆ ಪಾತ್ರ.

ಇಷ್ಟಾದರೂ ಅವಕಾಶಗಳು ಮನೆ ಬಾಗಿಲಿಗೆ ಹುಡುಕಿಕೊಂಡು ಬರುತ್ತಿಲ್ಲ ಎನ್ನುವುದು ಅನಿತಾ ಭಟ್‌ಗೆ ಖಚಿತವಾಗಿದೆ. ಹಾಗಾಗಿ ಒಂದು ಹಾಟ್ ಫೋಟೊ ಶೂಟ್ ಮಾಡಿಸಿದ್ದಾರೆ. ಆ ಫೋಟೊಗಳನ್ನು ಫೇಸ್‌ಬುಕ್‌ಗೂ ಅಪ್ಲೋಡ್ ಮಾಡಿದ್ದಾರೆ. 'ಚಿತ್ರಸಂತೆ' ಸಿನಿಮಾ ಮ್ಯಾಗಜಿನ್‌ಗೂ ನೀಡಿದ್ದಾರೆ. ಈ ಸಂಚಿಕೆಯ ಮುಖಪುಟದಲ್ಲೊಂದು ಹಾಟ್ ಫೋಟೊ ಪ್ರಕಟವಾಗಿದೆ. ಅದನ್ನು ಖುಷಿಯಿಂದಲೇ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದಾರೆ ಅನಿತಾ ಭಟ್.

ಅನಿತಾ ಭಟ್ ಈ ಪರಿಯಲ್ಲಿ ಬಟ್ಟೆ ಬಿಚ್ಚಿ ಅರೆಬೆತ್ತಲೆ ಪೋಸ್ ಕೊಟ್ಟಿರುವುದಕ್ಕೆ ಸಾಕಷ್ಟು ವಿರೋಧವೂ ವ್ಯಕ್ತವಾಗಿದೆ. ಇನ್ನು ಕೆಲವರು ಬೋಲ್ಡ್ ಮೂವ್ ಎಂದು ಬೆನ್ನು ತಟ್ಟಿದ್ದಾರೆ. ಆದರೆ ಟೀಕೆಗಳಿಗೆ ಅನಿತಾ ತಲೆ ಕೆಡಿಸಿಕೊಂಡಿಲ್ಲ. ಬಾಲಿವುಡ್ ನಟಿಯರು ಬಿಚ್ಚಿದಾಗ ನೋಡುತ್ತೀರಿ, ನನ್ನನ್ನು ಯಾಕೆ ಟೀಕಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ತಮ್ಮ ಸಿನಿಮಾಗಳಿಗೆ ಹಾಟ್ ಹುಡುಗಿಯರು ಬೇಕೆನ್ನುವ ಕನ್ನಡದ ನಿರ್ಮಾಪಕರು ಸಂಪರ್ಕಿಸಬಹುದು ಎಂದು ಅನಿತಾ ಭಟ್ ಮುಕ್ತ ಆಹ್ವಾನ ನೀಡಿದ್ದಾರೆ.

Share this Story:

Follow Webdunia kannada