Select Your Language

Notifications

webdunia
webdunia
webdunia
webdunia

ಅಮೂಲ್ಯಾ ಲವ್ ಮ್ಯಾರೇಜ್ ಗಡಿಬಿಡಿ ಮರೆತು ಬಿಡಿ!

ಅಮೂಲ್ಯಾ ಲವ್ ಮ್ಯಾರೇಜ್ ಗಡಿಬಿಡಿ ಮರೆತು ಬಿಡಿ!
SUJENDRA
ಹಾಲ್ಗೆನ್ನೆ ಚೆಲುವೆ ಅಮೂಲ್ಯಾಗೆ ಯಾರದೋ ಜತೆ ಕುಚ್ ಕುಚ್ ಅನ್ನೋ ಸುದ್ದಿ ಬೋಗಸ್ ಅನ್ನೋದು ಯಾವತ್ತೋ ಸಾಬೀತಾಗಿತ್ತು. ಈಗ ಇನ್ನೊಂದು ಅಚಾತುರ್ಯ. ಅದು ಅಮೂಲ್ಯಾ ಲವ್ ಮ್ಯಾರೇಜ್ ಆಗೇ ಬಿಟ್ಟರು ಅನ್ನೋದು. ಅದೂ ಯಾರನ್ನು ಅಂದುಕೊಂಡಿರಾ? ತಮಿಳು ಹೀರೋನನ್ನಂತೆ!

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಹಾಗಂತ ಭಾವಚಿತ್ರ ಸಮೇತ ವರದಿ ಮಾಡಿರೋದು ತಮಿಳಿನ ಜನಪ್ರಿಯ ವೆಬ್ ಪತ್ರಿಕೆ. ಸಹಜವಾಗಿಯೇ ಅಮೂಲ್ಯಾ ಅಭಿಮಾನಿಗಳು ಗೊಂದಲಕ್ಕೆ ಬಿದ್ದಿದ್ದರು. ಸುದ್ದಿ ನಿಜವೇ ಅಂತ ಅಲ್ಲಿ ಇಲ್ಲಿ ತಡಕಾಡಲಾರಂಭಿಸಿದ್ದರು. ಕೊನೆಗೂ ಅದು ವದಂತಿ, ವೆಬ್‌ಸೈಟ್ ಕಣ್ತಪ್ಪಿನಿಂದ ಹೀಗಾಗಿದೆ ಎಂದು ಗೊತ್ತಾಗಿದೆ. ಅಭಿಮಾನಿಗಳು ಸುಮ್ಮನಾಗಿದ್ದು ನಂತರವೇ.

ವಾಸ್ತವದಲ್ಲಿ ಹೀಗೆ ಲವ್ ಮ್ಯಾರೇಜ್ ನಡೆದಿರುವುದು ಹೌದು. ಆದರೆ ಅದು ನಮ್ಮ ಅಮೂಲ್ಯಾ ಅಲ್ಲ. ತಮಿಳಿನ ನವನಟಿ ಅಮುಲು ಎಂಬಾಕೆ. ಆಕೆ 'ಉಯಿರೆ ಎನ್ನೊಡು ಕಲಂದುವಿಡು' ಎಂಬ ಚಿತ್ರದಲ್ಲಿ ಅಂತೋಣಿ ಎಂಬ ಹೊಸ ಹೀರೋಗೆ ನಾಯಕಿಯಾಗಿದ್ದಳು. ಈ ಚಿತ್ರವನ್ನು ನಿರ್ಮಾಪಕ ಅಂತೋಣಿ ತಂದೆ ಪೀಟರ್.

ಹೀಗಿದ್ದಾಗ ಚಿತ್ರೀಕರಣವಾಗುತ್ತಿರುವಾಗಲೇ ನಾಯಕ-ನಾಯಕಿ ನಡುವೆ ನಿಜ ಜೀವನದಲ್ಲಿ ಪ್ರೇಮಾಂಕುರವಾಗಿತ್ತು. ಇದಕ್ಕೆ ತಡೆಯಾಗಿದ್ದು ಅಂತೋಣಿ ತಂದೆ ಪೀಟರ್. ಇದನ್ನು ಸಹಿಸದ ಅಮುಲು, ಅಂತೋಣಿ ತಂದೆ ಪೀಟರ್ ವಿರುದ್ಧ ತಮಿಳುನಾಡು ಪೊಲೀಸರಿಗೆ ದೂರು ನೀಡಿದ್ದರು.

ಅಂತೋಣಿ ಮತ್ತು ಅಮುಲು ಇಬ್ಬರೂ ವಯಸ್ಕರಾಗಿರುವುದರಿಂದ ಪೊಲೀಸರೇ ಮದುವೆ ಮಾಡಿ ಬಿಟ್ಟರು. ತಮಿಳು ವೆಬ್‌ಸೈಟ್ ಇದೇ ಸುದ್ದಿಯನ್ನು ಪ್ರಕಟಿಸಿತ್ತು. ಆದರೆ ಭಾವಚಿತ್ರಗಳನ್ನು ಪ್ರಕಟಿಸುವಾಗ ಅಮುಲು ಬದಲಿಗೆ, ನಮ್ಮ ಅಮೂಲ್ಯಾ ಫೋಟೋವನ್ನು ಹಾಕಿತ್ತು. ತಮಿಳಿನ ಜನಪ್ರಿಯ ವೆಬ್‌ಸೈಟ್ ಆಗಿದ್ದುದರಿಂದ ಲಕ್ಷಾಂತರ ಮಂದಿ ಕನ್ನಡದ ಅಮೂಲ್ಯಾ ಎಂದೇ ಭಾವಿಸಿದ್ದರು.

ಕೊನೆಗೂ ತಪ್ಪು ತಿದ್ದಿಕೊಂಡಿರುವ ವೆಬ್‌ಸೈಟ್ ಭಾವಚಿತ್ರವನ್ನು ಕಿತ್ತು ಹಾಕಿದೆ. ಅಭಿಮಾನಿಗಳೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ!

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada