Webdunia - Bharat's app for daily news and videos

Install App

ಅಪ್ಪು @38: ಹುಟ್ಟುಹಬ್ಬದ ನೆಪದಲ್ಲಿ ಅಭಿಮಾನಿಗಳ ಸಂಭ್ರಮ

Webdunia
ಸೋಮವಾರ, 18 ಮಾರ್ಚ್ 2013 (16:07 IST)
PR
ಶನಿವಾರ ಕೆಲಸ ಮುಗಿಸಿ ರಾತ್ರಿ ಮನೆಗೆ ಲೇಟಾಗಿ ಬಂದಿದ್ದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿದ್ದೆಯೂ ಮಾಡಲಿಲ್ಲ. ಕಾರಣ, ಅಭಿಮಾನಿಗಳು. ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ಪುನೀತ್‌ರ ಸದಾಶಿವ ನಗರದ ಮನೆಯ ಸುತ್ತ ಜಮಾಯಿಸಿದ್ದರು. ಆಗಾಗ ಬಂದು ಅಭಿಮಾನಿಗಳಿಗೆ ಕೈ ಬೀಸಿದರೂ, ನೇರ ದರ್ಶನ ಕೊಟ್ಟದ್ದು ಬೆಳಗ್ಗೆಯೇ!

ಆದರೂ ಅಭಿಮಾನಿಗಳು ದಣಿದಿರಲಿಲ್ಲ. ಪವರ್ ಸ್ಟಾರ್‌ಗೇ ಜೈ.. ಅಣ್ಣಾ ಬಾಂಡ್‌ಗೇ ಜೈ.. ಎಂಬಂತಹ ಘೋಷಣೆಗಳು ಮೊಳಗುತ್ತಿದ್ದವು. ಅಲ್ಲಲ್ಲಿ ಪುನೀತ್‌ಗೆ ಹುಟ್ಟುಹಬ್ಬದ ಪೋಸ್ಟರುಗಳು ರಾರಾಜಿಸುತ್ತಿದ್ದವು. ನೂರಾರು ಮಂದಿಯ ಕೈಯಲ್ಲಿ ಹೂಮಾಲೆ, ಪುಷ್ಪಗುಚ್ಚ, ಹತ್ತಾರು ಅಭಿಮಾನಿಗಳು ಪ್ರೀತಿಯಿಂದ ಕೇಕ್ ತಂದಿದ್ದರು. ಹೀಗೆ ತಂಡೋಪತಂಡವಾಗಿ ಬಂದ ಅಭಿಮಾನಿಗಳು ತಮ್ಮ ಪ್ರೀತಿಯ ನಟನ ಕೈ ಕುಲುಕಲು ಮೈಲುಗಟ್ಟಲೆ ಸಾಲಿನಲ್ಲಿ ನಿಂತಿದ್ದರು.

ಇದು ಪುನೀತ್ 38ನೇ ಹುಟ್ಟುಹಬ್ಬದ (ಮಾರ್ಚ್ 17) ಸಂಭ್ರಮಕ್ಕೆ ಅಭಿಮಾನಿ ದೇವರುಗಳ ಹಾರೈಕೆಯ ಪರಿ. ಸ್ವತಃ ಪುನೀತ್‌ಗಿಂತ ಅಭಿಮಾನಿಗಳ ಸಡಗರವೇ ಜೋರಾಗಿತ್ತು. ಚಿತ್ರರಂಗದ ಗಣ್ಯರೂ ಮನೆಗೆ ಬಂದು ಹಾರೈಸಿ ಹೋದರು. ರಾಘವೇಂದ್ರ ರಾಜ್‌ಕುಮಾರ್, ಶಿವರಾಜ್ ಕುಮಾರ್ ಸಹೋದರರು ಪ್ರೀತಿಯಿಂದ ಅಪ್ಪಿಕೊಂಡು ಶುಭ ಕೋರಿದರು. ಅಣ್ಣ-ಅತ್ತಿಗೆಯರ ಕಾಲಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆದದ್ದನ್ನು ನೋಡಿದ ಅಭಿಮಾನಿಗಳಿಗೆ ಪುನೀತ್ ಮೇಲಿನ ಗೌರವ ಇಮ್ಮಡಿಯಾಯಿತು.

ಅಭಿಮಾನಿ ಸಂಘದವರು 35 ಕೆ.ಜಿ.ಯ ಕೇಕ್ ತಂದದ್ದು, ಪುತ್ರಿಯರಾದ ವಂದನಾ ಮತ್ತು ಧೃತಿ ಗ್ರೀಟಿಂಗ್ ಕಾರ್ಡ್ ಕೊಟ್ಟು ಮುದ್ದಿಸಿದ್ದು ಇಡೀ ಕಾರ್ಯಕ್ರಮವನ್ನು ರಂಗೇರಿಸಿತು.

ಈ ಸಂದರ್ಭ ಮಾತನಾಡಿದ ಪುನೀತ್, ನನ್ನ ಮಕ್ಕಳು ನನಗೆ ಗ್ರೀಟಿಂಗ್ ಕಾರ್ಡ್ ನೀಡಿದ್ದಾರೆ. ನಾನು ಹಾಕಿಕೊಂಡಿರುವ ಹೊಸ ಬಟ್ಟೆಗಳು ಗೆಳೆಯರು ನೀಡಿದ ಉಡುಗೊರೆ. ನಮ್ಮನ್ನು ಪ್ರೀತಿಸುವವರ ನಡುವೆ ಹುಟ್ಟುಹಬ್ಬ ಆಚರಿಸುವುದಕ್ಕಿಂತ ನನಗೆ ದೊಡ್ಡದೇನಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಪುನೀತ್ ಮನೆಯ ಸುತ್ತ ಅಭಿಮಾನಿಗಳನ್ನು ನಿಯಂತ್ರಿಸಲು ಹತ್ತಾರು ಪೊಲೀಸರನ್ನು ನಿಯೋಜಿಸಲಾಗಿತ್ತು. ಶನಿವಾರ ರಾತ್ರಿಯಿಂದ ಭಾನುವಾರ ರಾತ್ರಿಯವರೆಗೆ ಆವರಣದಲ್ಲಿ ಬಿಗು ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments