Webdunia - Bharat's app for daily news and videos

Install App

ಅಂಬರೀಶ್ ಚಿತ್ರದಲ್ಲಿ ಉಮಾಶ್ರೀ, ಅಂಬರೀಶ್ ನಟನೆ

Webdunia
ಗುರುವಾರ, 10 ಅಕ್ಟೋಬರ್ 2013 (13:27 IST)
PR
ಮಹೇಶ್ ಸುಖಧರೆ ರೆಬೆಲ್ ಸ್ಟಾರ್ ಅಂಬರೀಶ್ ಹೆಸರಿನ ಚಿತ್ರವೊಂದು ಸೆಟ್ಟೇರಿದೆ. ವಿಶೇಷವೆಂದರೆ ದರ್ಶನ್, ಪ್ರಿಯಾಮಣಿ ಜೊತೆ ಅಂಬರೀಶ್ ಹಾಗೂ ಉಮಾಶ್ರೀ ನಟಿಸುತ್ತಿದ್ದಾರೆ. ವಿಶೇಷವೆಂದರೆ ಇವರಿಬ್ಬರೂ ಸಚಿವರು. ಉಮಾಶ್ರೀ ಇತ್ತೀಚಿನ ಹಲವು ದಿನಗಳಿಂದ ಯಾವುದೇ ಚಿತ್ರವನ್ನು ಒಪ್ಪಿಕೊಂಡಿರಲಿಲ್ಲ. ಛತ್ರಿಗಳು ಸಾರ್ ಛತ್ರಿಗಳು ಅವರು ನಟಿಸಿದ ಕೊನೆಯ ಚಿತ್ರವಾಗಿತ್ತು. ಆ ಬಳಿಕ ಎಷ್ಟೇ ಆಫರ್ ಬಂದರೂ ಅವರು ಒಕೆ ಎಂದಿರಲಿಲ್ಲ. ಅದನ್ನೆಲ್ಲಾ ಬದಿಗೊತ್ತಿ ರಾಜಕೀಯದ ಕೆಲಸದಲ್ಲಿ ತೊಡಗಿಕೊಂಡಿದ್ದರು.

ಈಗ ಅಂಬರೀಶ ಚಿತ್ರದ ಮೂಲಕ ಮತ್ತೆ ಇಬ್ಬರು ಸಚಿವರು ಒಂದೇ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ದರ್ಶನ್ ಅವರ ತಾಯಿಯಾಗಿ ಉಮಾಶ್ರೀ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಲಾಲಿಹಾಡು, ಸುಂಟರಗಾಳಿ, ಸಂಗೊಳ್ಳಿ ರಾಯಣ್ಣ, ಚಿತ್ರದಲ್ಲಿ ಉಮಾಶ್ರೀ ದರ್ಶನ್‌ಗೆ ತಾಯಿಯಾಗಿ ನಟಿಸಿದ್ದರು. ಇಡೀ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಅಂಬರೀಶ್ ಕಾಣಿಸಿಕೊಂಡಿದ್ದು ಅದು ಚಿತ್ರಕ್ಕೆ ಟರ್ನಿಂಗ್ ಪಾಯಿಂಟ್ ನೀಡಲಿದೆಯಂತೆ. ಎರಡು ರಿಮೇಕ್ ಚಿತ್ರಗಳ ನಂತರ ದರ್ಶನ್ ನಟಿಸುತ್ತಿರುವ ಮೊದಲ ಸ್ವಮೇಕ್ ಚಿತ್ರವಿದು. ದರ್ಶನ್ ಕೂಡಾ ಇಲ್ಲಿ ಬೇರೆಯದೇ ಶೇಟ್‌ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಪ್ರಿಯಾಮಣಿ ಜೊತೆ ನಿಶಾ ಯೋಗೇಶ್ವರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಾಧುಕೋಕಿಲ, ರಾಜೇಂದ್ರ ಕಾರಂತ್, ಶರತ್ ಲೋಹಿತಾಶ್ವ, ಬುಲೆಟ್ ಪ್ರಕಾಶ್, ರವಿಶಂಕರ್ ತಾರಾಗಣದಲ್ಲಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments