Select Your Language

Notifications

webdunia
webdunia
webdunia
webdunia

ಅಂದು ಬಿಕಿನಿ ಬೇಡವೆಂದ ನಿಧಿ ಇಂದು ಹಾಕಿದ್ಯಾಕೆ?

ಅಂದು ಬಿಕಿನಿ ಬೇಡವೆಂದ ನಿಧಿ ಇಂದು ಹಾಕಿದ್ಯಾಕೆ?
SUJENDRA
ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ ಬದಲಾಗಿದ್ದಾರೆ. ಅದೂ ಕೇವಲ ಮೂರ್ನಾಲ್ಕು ವರ್ಷಗಳಲ್ಲಿ. ಅದು ಅಂದಿನ ಕತೆ, ಇದು ಇಂದಿನ ಕತೆ ಅಂತ ಕಿವಿ ಮೇಲೆ ಹೂ ಇಡಲು ಯತ್ನಿಸುತ್ತಿದ್ದಾರೆ. ಅಂದು ಕೋಮಲ್ ಕುಮಾರ್ ಮೇಲೆ ಯಾವ ಬಿಕಿನಿಗಾಗಿ ಎದ್ದು ಬಿದ್ದು ಸಿಡಿದಿದ್ದರೋ, ಇಂದು ಅದೇ ಬಿಕಿನಿಯನ್ನು ಹಾಕಿಕೊಂಡು ಚೆಂದನೆ ಪೋಸ್ ಕೊಟ್ಟಿದ್ದಾರೆ. ಯಾಕೆ ಹೀಗೆ? ನಿಧಿಗೆ ಮತ್ತೆ ಬಿಕಿನಿ ಮೋಹ ಹುಟ್ಟಿಕೊಳ್ಳಲು ಕಾರಣವೇನು?

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ನಿಧಿ ಬಿಕಿನಿ ಸ್ಟೋರಿಯನ್ನು ಪೂರ್ತಿಯಾಗಿ ತಿಳಿದುಕೊಳ್ಳಲು ಕೊಂಚ ಹಿಂದಕ್ಕೆ ಹೋಗಬೇಕು. ಅದು ಕೋಮಲ್ ನಾಯಕರಾಗಿದ್ದ 'ಚಮ್ಕಾಯ್ಸಿ ಚಿಂದಿ ಉಡಾಯ್ಸಿ' ಚಿತ್ರದ ಶೂಟಿಂಗ್. ಈ ಚಿತ್ರದ ಹಾಡೊಂದರಲ್ಲಿ ನಾಯಕಿ ಬಿಕಿನಿ ಹಾಕಿಕೊಳ್ಳಬೇಕಿತ್ತು. ಅದನ್ನು ಕೋಮಲ್ ಮೊದಲೇ ಹೇಳಿದ್ದರು. ಚಿತ್ರರಂಗಕ್ಕೆ ಆಗಷ್ಟೇ ಬಂದಿದ್ದ ನಿಧಿ ಅದಕ್ಕೆ ಒಪ್ಪಿಕೊಂಡಿದ್ದರು ಕೂಡ. ಅದರಂತೆ ಬ್ಯಾಂಕಾಕಿನಲ್ಲಿ ಹಾಡಿನ ಚಿತ್ರೀಕರಣವೂ ನಡೆದಿತ್ತು. ಅದಕ್ಕೂ ಮೊದಲು ಫೋಟೋ ಶೂಟ್ ನಡೆದಿತ್ತು. ಅಲ್ಲೂ ನಿಧಿ ಬಿಕಿನಿ ಹಾಕಿಕೊಂಡು ಎಗ್ಗಿಲ್ಲದೆ ಪೋಸ್ ಕೊಟ್ಟಿದ್ದರು. ಫೋಟೋಗ್ರಾಫರುಗಳಿಗೆ ಯಾವ ಕಿರಿಕ್ಕೂ ಮಾಡಿರಲಿಲ್ಲ.

ಆದರೆ ಅದು ಕೆಲವು ದಿನ ಮಾತ್ರ. ಅದೇನಾಯ್ತೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ನಿಧಿ ಬದಲಾಗಿದ್ದರು. ಫೋಟೋ ಶೂಟ್‌ನಲ್ಲಿ ತೆಗೆದ ಗ್ಲಾಮರಸ್ ಚಿತ್ರಗಳನ್ನು ಬಳಸದಂತೆ ಮಾಧ್ಯಮ ಕಚೇರಿಗಳಿಗೆ ದುಂಬಾಲು ಬಿದ್ದರು. ಈ ಚಿತ್ರದಲ್ಲಿ ಬಿಕಿನಿ ಹಾಕಬೇಕೆಂದು ಒಪ್ಪಂದದ ಸಂದರ್ಭದಲ್ಲಿ ಕೋಮಲ್ ಹೇಳಿರಲಿಲ್ಲ ಎಂದು ಆರೋಪಿಸಿದರು. ಹಾಡಿನಲ್ಲಿ ಬಿಕಿನಿ ಹಾಕಿದ್ದು ಹೌದಾದರೂ, ಅದಕ್ಕೆ ಕಾರಣ ಕೋಮಲ್ ಬಲವಂತ ಅಂತ ಸಿಡಿದರು.

'ಚಮ್ಕಾಯ್ಸಿ ಚಿಂದಿ ಉಡಾಯ್ಸಿ' ಬಂದು ಹೋಯ್ತು. ವಿವಾದ ತಣ್ಣಗಾಯ್ತು. ಆದರೆ ನಿಧಿಗೆ ಅವಕಾಶಗಳು ಸಿಕ್ಕಿರಲಿಲ್ಲ. ಕೆಲ ಕಾಲ ಸುಮ್ಮನಿದ್ದರು. ನಂತರ ಸ್ಟಾರ್ ನಿರ್ದೇಶಕರ ಚಿತ್ರಗಳು (ಪಂಚರಂಗಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ) ಸಿಕ್ಕಿದವು. ಆ ಚಿತ್ರಗಳು ಬಾಕ್ಸಾಫೀಸಿನಲ್ಲಿ ಯಶಸ್ಸೂ ಕಂಡವು. ಆಗ ಮತ್ತೆ ಸಿಡಿದರು ನಿಧಿ ಸುಬ್ಬಯ್ಯ. ನನ್ನ ಮೊದಲ ಚಿತ್ರ ಚಮ್ಕಾಯ್ಸಿ ಚಿಂದಿ ಉಡಾಯ್ಸಿ ಅಲ್ಲ, ಅದು ನನ್ನ ಸಿನಿ ಜೀವನದ ಕಹಿ ಅನುಭವ ಅಂತ ಅಣಿಮುತ್ತು ಉದುರಿಸಿದರು. ಇನ್ಯಾವತ್ತೂ ಆ ತಪ್ಪು ಮಾಡೋದಿಲ್ಲ, ಆಯ್ಕೆಯ ಸಂದರ್ಭದಲ್ಲಿ ಎಚ್ಚರಿಕೆ ವಹಿಸೋದಾಗಿ ಹೇಳಿದರು.

ಎಲ್ಲವೂ ಹಣಕ್ಕಾಗಿ: ಕೋಮಲ್
ಅಂದು ನನ್ನ ಚಿತ್ರದಲ್ಲಿ ಬಿಕಿನಿ ಹಾಕಿದ್ದಕ್ಕೆ ಅತ್ತೂ ಕರೆದು ವಿವಾದ ಸೃಷ್ಟಿಸಿದ್ದು ಕೇವಲ ಹಣಕ್ಕಾಗಿ. ಅದೇ ನಿಧಿ ಸುಬ್ಬಯ್ಯ ಕೆಲವು ಸಮಯದ ನಂತರ ತಮಿಳು ಚಿತ್ರವೊಂದರಲ್ಲಿ ತೀರಾ ಮಾದಕ ಮತ್ತು ಪ್ರಚೋದನಾಕಾರಿ ಬಟ್ಟೆ ಹಾಕಿದ್ದನ್ನು ನಾನು ಗಮನಿಸಿದ್ದೇನೆ. ಈಗ ಸಿಸಿಎಲ್ ಕ್ಯಾಲೆಂಡರಿಗೆ ಬಿಕಿನಿ ಹಾಕಿದ್ದಾರೆ. ಹಾಗಿದ್ರೆ ಅಂದು ನನ್ನ ಚಿತ್ರದಲ್ಲಿ ಬಿಕಿನಿ ವಿವಾದ ಸೃಷ್ಟಿಸಿದ್ದು ಯಾಕೆ? ಇದಕ್ಕೆ ನಿಧಿ ಉತ್ತರಿಸಬೇಕು.

ತಪ್ಪೊಪ್ಪಿಕೊಂಡ ನಿಧಿ...
ಚಮ್ಕಾಯ್ಸಿ ಚಿಂದಿ ಉಡಾಯ್ಸಿ ಚಿತ್ರ ಮೂರ್ನಾಲ್ಕು ವರ್ಷ ಹಿಂದಿನದ್ದು. ಆಗ ನಾನು ತಕರಾರು ಎತ್ತಿದ್ದು ಹೌದು. ಕೋಮಲ್ ಕುಮಾರ್ ಅವರ ಪ್ರತಿಭೆ ಮತ್ತು ವೃತ್ತಿಪರತೆ ಬಗ್ಗೆ ನನಗೆ ಅಪಾರ ಗೌರವವಿದೆ. ಅವರು ಈಗ ಹಾಕಿರುವ ಪ್ರಶ್ನೆ ಸಹಜ. ಅವರ ಟೀಕೆಗೆ ಸಮರ್ಥನೆಯಿದೆ. ಆ ಬಗ್ಗೆ ನಾನು ಏನೂ ಪ್ರತಿಕ್ರಿಯೆ ನೀಡುವುದಿಲ್ಲ. ನನ್ನ ಮೊದಲ ಹಿಟ್ ಚಿತ್ರದ ಬಗ್ಗೆ ಹೆಮ್ಮೆಯಿದೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada