Select Your Language

Notifications

webdunia
webdunia
webdunia
webdunia

ಮುನಿರತ್ನ ಕಾಂಡೋಂ ಹೇಳಿಕೆಗೆ ಲೂಸ್ ಯೋಗಿ ರಾಂಗ್!

ಮುನಿರತ್ನ ಕಾಂಡೋಂ ಹೇಳಿಕೆಗೆ ಲೂಸ್ ಯೋಗಿ ರಾಂಗ್!
PR


ನಮ್ಮ ನಾಯಕರಿಗೆ ಕಾಂಡೋಮ್ ಒಂದು ಬಿಟ್ಟು ಎಲ್ಲವನ್ನೂ ನಾವೇ ಕೊಡಬೇಕು. ನಮ್ಮಿಂದಲೇ ಎಲ್ಲವನ್ನೂ ಖರ್ಚು ಮಾಡಿಸುತ್ತಾರೆ. ಸ್ನೇಹಿತರು ಬಂದರೆ ಅವರಿಗೆ ಊಟವೂ ನಮ್ಮ ಖರ್ಚಲ್ಲೇ ಆಗಬೇಕು, ಅದೂ ದುಬಾರಿ ಹೊಟೇಲಿನಿಂದಲೇ ತರಿಸಿರಬೇಕು. ಹೀಗಿದ್ದರೆ ನಿರ್ಮಾಪಕ ಬದುಕೋದು ಹೇಗೆ? ಹೀಗಂತ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಖಾರವಾಗಿ ಮಾತನಾಡಿದ್ದಕ್ಕೆ ಲೂಸ್ ಮಾದ ಯೋಗೀಶ್ ತಿರುಗೇಟು ನೀಡಿದ್ದಾರೆ.

ನನ್ನ ಅಪ್ಪ ಸಿದ್ಧರಾಜು ಮೇಲಾಣೆ, ನಾನ್ಯಾವತ್ತೂ ಹಾಗೆ ಮಾಡಿಲ್ಲ. ನಾನೂ ಒಬ್ಬ ನಿರ್ಮಾಪಕನಾಗಿರುವುದರಿಂದ ನನಗೆ ನಿರ್ಮಾಪಕರ ಕಷ್ಟ ಏನೆಂದು ಗೊತ್ತು. ನನಗೆ ಅದೇ ಹೊಟೇಲ್ ಬೇಕು, ಅದೇ ಊಟ ಬೇಕು ಅಂತ ಯಾವತ್ತೂ ಪಟ್ಟು ಹಿಡಿದಿಲ್ಲ. ಸೆಟ್‌ನಲ್ಲಿ ಗೆಳೆಯರ ಗುಂಪನ್ನು ಜಮಾಯಿಸಿಯೂ ಇಲ್ಲ ಎಂದು ನಿರ್ಮಾಪಕ ಮುನಿರತ್ನ ಹೆಸರು ಹೇಳದೆ ಟಾಂಗ್ ನೀಡಿದ್ದಾರೆ.

ಅಷ್ಟಕ್ಕೂ ಅವಕಾಶಕ್ಕಾಗಿ ನಾವು ನಾಯಕರು ನಿರ್ಮಾಪಕರ ಮನೆ ಬಾಗಿಲನ್ನು ತಟ್ಟೋದಿಲ್ಲ. ನನ್ನ ಸಿನಿ ಜೀವನದ ಆರಂಭದಲ್ಲಿ ನನಗೆ 150 ರೂಪಾಯಿ ಬಾಡಿಗೆಯ ರೂಮನ್ನೇ ಕೊಡಲಾಗುತ್ತಿತ್ತು. ಈಗ ಸ್ಟಾರ್ ಹೊಟೇಲ್ ಸಿಗುತ್ತಿದೆ. ಅದರ ಅರ್ಥ ನಾನು ಬೆಳೆದಿದ್ದೇನೆ ಎಂದು. ಅದೇ ಕಾರಣದಿಂದ ಸೌಲಭ್ಯಗಳೂ ಉನ್ನತ ದರ್ಜೆಗೇರಿವೆ.

ಇನ್ನೂ ಒಂದು ವಿಷಯ ಹೇಳ್ತೀನಿ ಕೇಳಿ. ನಾನು ನಾಯಕನಾಗಿ ನಟಿಸಿದ ಚಿತ್ರಗಳಿಂದ ನನಗೆ ಇನ್ನೂ 90 ಲಕ್ಷ ರೂಪಾಯಿ ಬರಬೇಕಿದೆ. ಆ ನಿರ್ಮಾಪಕರು ಕೊಟ್ಟೇ ಇಲ್ಲ. ಇಷ್ಟೆಲ್ಲ ಮಾತನಾಡುವ ನಿರ್ಮಾಪಕ ಸಂಘವು ಈ ಹಣವನ್ನು ತೆಗೆಸಿಕೊಡುವುದೇ?

ದೊಡ್ಡ ದೊಡ್ಡ ನಟರು ಚಿತ್ರೀಕರಣದಲ್ಲಿರುವಾಗ, ಅವರ ಗೆಳೆಯರು ಅಲ್ಲಿಗೆ ಬರುವುದು ಸರಿ ಎಂದು ಹೇಳುತ್ತಿಲ್ಲ. ಆದರೆ ಅವರು ಸದಾ ಬ್ಯುಸಿ ಇರುವುದರಿಂದ, ಮನೆಯಲ್ಲಿ ಭೇಟಿ ಸಾಧ್ಯವಾಗುವುದಿಲ್ಲ. ಸುಮ್ಮನೆ ಆರೋಪ ಮಾಡುವ ಮೊದಲು ಹಿಂದೆ ಮುಂದೆ ನೋಡಬೇಕು. ಪ್ರಚಾರಕ್ಕಾಗಿ ಏನೇನೋ ಮಾತನಾಡಬಾರದು.

ತನ್ನ ತೂಕಕ್ಕಿಂತಲೂ ಹೆಚ್ಚು ಲೂಸ್ ಮಾದ ಮಾತನಾಡಲು ಕಾರಣ, ರಿಯಲ್ ಸ್ಟಾರ್ ಉಪೇಂದ್ರ - ಲಕ್ಕಿ ಸ್ಟಾರ್ ರಮ್ಯಾ ಪ್ರಮುಖ ಪಾತ್ರಗಳಲ್ಲಿರುವ 'ಕಠಾರಿ ವೀರ ಸುರಸುಂದರಾಂಗಿ' ಎಂಬ 15 ಕೋಟಿ ರೂಪಾಯಿ ವೆಚ್ಚದ ಚಿತ್ರದ ನಿರ್ಮಾಪಕ ಮುನಿರತ್ನ ಟಿವಿಯೊಂದಕ್ಕೆ ನೀಡಿದ ಹೇಳಿಕೆ. ನಿರ್ದೇಶಕ ಎಸ್. ನಾರಾಯಣ್ ವಿದಾಯದ ಕುರಿತಂತೆ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಮುನಿರತ್ನರನ್ನು ಸಂಪರ್ಕಿಸಿದಾಗ ಮೇಲಿನಂತೆ ನಾಯಕರ ಮೇಲೆ ಮುಗಿ ಬಿದ್ದಿದ್ದರು.

ಮುನಿರತ್ನ ವಿರುದ್ಧ ಲೂಸ್ ಮಾದನ ಜತೆ ಇನ್ನಿತರ ಹೀರೋಗಳೂ ದನಿ ಸೇರಿಸುವ ಸಾಧ್ಯತೆಗಳಿವೆ. ಜಸ್ಟ್ ಕಾದು ನೋಡಿ!

Share this Story:

Follow Webdunia kannada