Webdunia - Bharat's app for daily news and videos

Install App

ಹೊಸಬರ ಚಿತ್ರ ರಂಗನ್ ಸ್ಟೈಲ್ ಕಾರ್ಯಾರಂಭ

Webdunia
ಮಂಗಳವಾರ, 17 ಸೆಪ್ಟಂಬರ್ 2013 (10:15 IST)
PR
ರಂಗನ್ ಸ್ಟೈಲ್ ಚಿತ್ರ ಶೀರ್ಷಿಕೆಯ ಕಾರಣಕ್ಕೆ ಗಮನ ಸೆಳೆದಿದೆ. ಈಗಾಗಲೇ ಚಿತ್ರತಂಡ ಯಶಸ್ಸಿಗಾಗಿ ಕಸರತ್ತು ಆರಂಭಿಸಿದೆ. ನಟ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಹೊಸಬರ ಚಿತ್ರಕ್ಕೆ ಬಲ ತಂದಿದ್ದರೆ, ಝಲಕ್ ದಿಕ್ಲಾಜಾ ಖ್ಯಾತಿಯ ನೃತ್ಯಪಟು ಭಾರತಿ ಸಿಂಗ್ ಗಂಗಮ್ಮನ ಸ್ಟೈಲ್ ಹಾಡಿಗೆ ಮೈ ಮರೆತು ಕುಣಿದಿದ್ದಾರೆ. ಈ ಹಾಡಿನ ಪರಿಕಲ್ಪನೆ, ಸಾಹಿತ್ಯ, ಸಂಗೀತ ನ ಿರ್ದ ೇಶನ ಗುರುಕಿರಣ್ ಅವರದ್ದು. ಹೊಸಬರ ಚಿತ್ರಕ್ಕೆ ಅನಗತ್ಯ ವೆಚ್ಚ ಮಾಡುವುದು ಬೇಡ ಎಂದುಕೊಂಡಿದ್ದ ಗುರುಕಿರಣ್ ನಿರ್ಮಾಪಕರ ಒತ್ತಾಯಕ್ಕೆ ಬಿದ್ದು ಶ್ರೇಯಾ ಘೋಷಾಲ್, ಸೋನು ನಿಗಮ್ ಅವರಿಂದ ಹಾಡಿಸಿದ್ದಾರಂತೆ.

ಪ್ರಶಾಂತ್ ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕರಾಗಿದ್ದಾರೆ. ಸೀಡಿ ಅಂಗಡಿಯಲ್ಲಿ ಕೆಲಸ ಮಾಡುವ ಯುವಕನೊಬ್ಬನ ಪ್ರೇಮಕಥೆಯನ್ನು ಅವರು ಚಿತ್ರದಲ್ಲಿ ಹೇಳಿದ್ದಾರಂತೆ. ನಾಯಕ ಪ್ರದೀಪ್ಗಾಗಿಯೇ ಚಿತ್ರದ ಸಂಭಾಷಣೆಯಲ್ಲಿ ಹೊಸ ಪ್ರಯೋಗ ಮಾಡಿದ್ದಾರಂತೆ. ತಬಲಾ ನಾಣಿ ಚಿತ್ರದಲ್ಲಿ ನಾಯಕನೊಂದಿಗೆ ಕಾಣಿಸಿಕೊಳ್ಳುತ್ತಾರೆ. ಈ ಬಗೆಯ ಪಾತ್ರ ನನಗೆ ಹೊಸತೇನಲ್ಲ ಎನ್ನುವ ಅವರಿಗೆ ಚಿತ್ರದಲ್ಲಿ ಜೋಡಿಯೇ ಇಲ್ಲವಂತೆ. ನನಗೆ ಜೋಡಿಯೇ ಇಲ್ಲ, ಕೊಟ್ಟರೂ ಮುಖ ಮುಚ್ಚಿರುತ್ತಾರೆ ಎಂದು ವಿಕ್ಟರಿ ಚಿತ್ರದ ತಮ್ಮ ಪಾತ್ರವನ್ನು ನೆನಪಿಸಿಕೊಂಡು ನಾಣಿ ನಕ್ಕರು. ಕರಾವಳಿ ತೀರದ ಮೂವರು ಸಹೋದರರು ಅರೇಂಜ್ ಬ್ರದರ್ಸ ಹೆಸರಿನಲ್ಲಿ ಚಿತ್ರ ನಿರ್ಮಿಸಿದ್ದಾರೆ. ನವೆಂಬರ್ ಮೊದಲ ವಾರದಲ್ಲಿ ಚಿತ್ರ ತೆರೆಕಾಣಲಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments