Select Your Language

Notifications

webdunia
webdunia
webdunia
webdunia

ನಿಮ್ಹಾನ್ಸ್ ಚಿತ್ರದ ಟೈಟಲ್ ಬದಲಿಸಲು ಚಲನಚಿತ್ರ ವಾಣಿಜ್ಯ ಮಂಡಳಿ ಸೂಚನೆ

ನಿಮ್ಹಾನ್ಸ್ ಚಿತ್ರದ ಟೈಟಲ್ ಬದಲಿಸಲು ಚಲನಚಿತ್ರ ವಾಣಿಜ್ಯ ಮಂಡಳಿ ಸೂಚನೆ
, ಸೋಮವಾರ, 6 ಜನವರಿ 2014 (18:54 IST)
PR
PR
ನಿಮ್ಹಾನ್ಸ್ ಚಿತ್ರದ ಟೈಟಲ್ ಬದಲಿಸುವಂತೆ ಚಲನಚಿತ್ರ ವಾಣಿಜ್ಯ ವಾಣಿಜ್ಯ ಮಂಡಳಿ ಸೂಚಿಸಿದೆ. ಸೂರ್ಯಕಿರಣ್ ನಟಿಸಿ ನಿರ್ದೇಶಿಸುತ್ತಿರುವ ನಿಮ್ಹಾನ್ಸ್ ಚಿತ್ರ ಬಿಡುಗಡೆಯಾಗುತ್ತಿರುವ ವೇಳೆಯಲ್ಲಿ ನಿಮ್ಹಾನ್ಸ್ ಸಂಸ್ಥೆ ತಮ್ಮ ಸಂಸ್ಥೆಗೆ ಅಗೌರವ ಉಂಟಾಗುತ್ತದೆ, ತಮ್ಮ ಸಂಸ್ಥೆಯ ಹೆಸರು ದುರುಪಯೋಗ ಆಗುತ್ತದೆ . ಆದ್ದರಿಂದ ಆ ಹೆಸರನ್ನು ಬದಲಾಯಿಸುವಂತೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಹೆಸರು ಬದಲಾಯಿಸುವಂತೆ ಚಲನಚಿತ್ರ ವಾಣಿಜ್ಯಮಂಡಳಿ ಸೂಚಿಸಿದೆ. ಈಗ ಟೈಟಲ್‌ಗಾಗಿ ಕಾನೂನು ಹೋರಾಟ ಮಾಡಲು ಸೂರ್ಯಕಿರಣ್ ಸಜ್ಜಾಗಿದ್ದಾರೆ. ಬಿಡುಗಡೆಗೆ ಸಿದ್ದವಾಗುತ್ತಿರುವ ವೇಳೆಗೆ ಚಿತ್ರದ ಟೈಟಲ್ ಬದಲಾಯಿಸಬೇಕೆಂದು ವಾಣಿಜ್ಯ ಮಂಡಳಿ ಸೂಚಿಸಿರುವುದು ಚಿತ್ರತಂಡಕ್ಕೆ ಆತಂಕವನ್ನುಂಟುಮಾಡಿದೆ.

Share this Story:

Follow Webdunia kannada