Select Your Language

Notifications

webdunia
webdunia
webdunia
webdunia

ಡಾ. ವಿಷ್ಣುವರ್ಧನ್ ಪುಣ್ಯತಿಥಿಯಂದು ಉಚಿತ ಆರೋಗ್ಯ ಬಡವರಿಗೆ ತಪಾಸಣೆ

ಡಾ. ವಿಷ್ಣುವರ್ಧನ್ ಪುಣ್ಯತಿಥಿಯಂದು ಉಚಿತ ಆರೋಗ್ಯ ಬಡವರಿಗೆ ತಪಾಸಣೆ
, ಮಂಗಳವಾರ, 24 ಡಿಸೆಂಬರ್ 2013 (10:24 IST)
PR
ಮತ್ತೊಂದು ಪುಣ್ಯ ತಿಥಿ ಬಂದಿದೆ ಡಾ.ವಿಷ್ಣು ವರ್ಧನ್ ಅವರದ್ದು. ನಟ ಡಾ.ವಿಷ್ಣುವರ್ಧನ್ ಇಹಲೋಕ ತ್ಯಜಿಸಿ ಆಗಲೇ ನಾಲ್ಕು ವರ್ಷಗಳಾಗುತ್ತದೆ ಡಿಸೆಂಬರ್ 30 ನೇ ತಾರೀಖಿಗೆ. ಪ್ರತಿಬಾರಿಯಂತೆ ಈ ಬಾರಿಯೂ ಸಹ ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಸೇವೆ ಉಚಿತವಾಗಿ ನಡೆಯುತ್ತದೆ ವಿಷ್ಣು ಅವರ ಪುಣ್ಯ ತಿಥಿಯಂದು.

ನಿನ್ನೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯವನ್ನು ಅನೇಕ ವೈದ್ಯರುಗಳ ಮತ್ತು ತಮ್ಮ ಅಳಿಯ ಹಾಗೂ ನಟ ಅನಿರುದ್ಧ್ ಸಹಯೋಗದಲ್ಲಿ ತಿಳಿಸಿದ್ದಾರೆ ಭಾರತಿ ವಿಷ್ಣುವರ್ಧನ್.ಡಾ. ವಿಷ್ಣುವರ್ಧನ್ ಅವರ ಕಾಮಿಕ್ಸ್ ಸಹ ಅಂದು ಬಿಡುಗಡೆ ಆಗಲಿದೆ.

ಅದರಲ್ಲಿ ಅವರ ಮೊಮ್ಮಗ ಮತ್ತು ಮೊಮ್ಮಗಳು ಸಹ ವಿಷ್ಣು ಜೊತೆ ಇರುತ್ತಾರಂತೆ. ಅದನ್ನು ಪುಣ್ಯತಿಥಿಯಂದು ಬಿಡುಗಡೆ ಮಾಡಲಾಗುತ್ತದೆ ಎಂದು ಭಾರತಿ ವಿಷ್ಣುವರ್ಧನ್ ತಿಳಿಸಿದ್ದಾರೆ. ಇದರ ಹೆಸರು ಸಾಹಸ ಸಿಂಹ ಪತ್ತೇದಾರ.

Share this Story:

Follow Webdunia kannada