Webdunia - Bharat's app for daily news and videos

Install App

16 ಜಿಬಿ ಸ್ಟೋರೇಜ್‌ನ ಕ್ಸಿಯೋಮಿ ಎಂಐ ಮ್ಯಾಕ್ಸ್ ಸ್ಮಾರ್ಟ್‌ಫೋನ್ ಬಿಡುಗಡೆ

Webdunia
ಬುಧವಾರ, 6 ಜುಲೈ 2016 (18:31 IST)
ಪ್ರಸಕ್ತ ಸಾಲಿನ ಮೇ ತಿಂಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿರುವ ಕ್ಸಿಯೋಮಿ ಎಂಐ ಮ್ಯಾಕ್ಸ್ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು ಆರಂಭದಲ್ಲಿ ಕೇವಲ 32 ಜಿಬಿ, 64ಜಿಬಿ ಮತ್ತು 128 ಜಿಬಿ ಸ್ಟೋರೇಜ್ ಸಾಮರ್ಥ್ಯದ ಆಯ್ಕೆಯನ್ನು ನೀಡಿತ್ತು. ಆದರೆ, ಇದೀಗ ಸಂಸ್ಥೆ ಸದ್ದಿಲ್ಲದೆ 2 ಜಿಬಿ ರ್ಯಾಮ್ ಜೊತೆಗೆ 16 ಜಿಬಿ ಸ್ಟೋರೇಜ್ ಸಾಮರ್ಥ್ಯ ಹೊಂದಿರುವ ಪೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
 
ಈ ಹೊಸ ಆವೃತ್ತಿಯ ಕ್ಸಿಯೋಮಿ ಎಂಐ ಮ್ಯಾಕ್ಸ್ ಸ್ಮಾರ್ಟ್‌ಪೋನ್‌ಗಳು ಮಾರುಕಟ್ಟೆಗಳಲ್ಲಿ ಗ್ರಾಹಕರಿಗೆ 12,100 ರೂಪಾಯಿ ಬೆಲೆಯಲ್ಲಿ ಲಭ್ಯವಾಗಲಿವೆ.
 
ಕ್ಸಿಯೋಮಿ ಎಂಐ ಮ್ಯಾಕ್ಸ್ ಆವೃತ್ತಿಯ 16 ಜಿಬಿ ಸ್ಮಾರ್ಟ್‌ಪೋನ್‌ಗಳನ್ನು ಸಂಸ್ಥೆ ಅಧಿಕೃತವಾಗಿ ಘೋಷಿಸಿಲ್ಲ. ಆದರೆ, ಚೀನಾ ಮೂಲದ ಗಿಜ್ಮೋ ವರದಿಯ ಪ್ರಕಾರ, ಈ ಹೊಸ ವೈಶಿಷ್ಟ್ಯದ ಪೋನ್‌ಗಳು 2ಜಿಬಿ ರ್ಯಾಮ್ ಜೊತೆಗೆ 1.8ಜಿಎಚ್‌ಝಡ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 650 ಹೆಕ್ಸಾ-ಕೋರ್ ಎಸ್‌ಓಸಿ ಹೊಂದಿದ್ದು, ಎಲ್ಲಾ ಇತರ ವಿಶಿಷ್ಟಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ತಿಳಿಸಿದೆ. 
 
ಕ್ಸಿಯೋಮಿ ಎಮ್‌ಐ ಆವೃತ್ತಿಯ ಪೋನ್‌ಗಳು ಮೂರು ಆವೃತ್ತಿಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಹೊಂದಿದ್ದು, 3 ಜಿಬಿ ರ್ಯಾಮ್, 32 ಜಿಬಿ ಸ್ಟೋರೇಜ್ ಸಾಮರ್ಥ್ಯ ಮತ್ತು 1.8 ಜಿಎಚ್‌ಝಡ್ ಹೆಕ್ಸಾ-ಕೋರ್ ಸ್ನಾಪ್ಡ್ರಾಗನ್ 650 ಪ್ರೊಸೆಸರ್ ವೈಶಿಷ್ಟ್ಯ ಹೊಂದಿರುವ ಪೋನ್‌ಗಳು ಗ್ರಾಹಕರಿಗೆ 15 ಸಾವಿರ ರೂಪಾಯಿಗಳಲ್ಲಿ ಲಭ್ಯವಿವೆ. 
 
3 ಜಿಬಿ ರ್ಯಾಮ್, 64 ಜಿಬಿ ಸ್ಟೋರೇಜ್ ಸಾಮರ್ಥ್ಯ ಮತ್ತು 1.8ಜಿಎಚ್‌ಝಡ್ ಆಕ್ಟಾ ಕೋರ್ ಸ್ನಾಪ್ಡ್ರಾಗನ್ 652 ಪ್ರೊಸೆಸರ್ ವೈಶಿಷ್ಟ್ಯ ಹೊಂದಿರುವ ಪೋನ್‌ಗಳು 17 ಸಾವಿರ ರೂಪಾಯಿ ಮತ್ತು 4 ಜಿಬಿ ರ್ಯಾಮ್, 128 ಜಿಬಿ ಸ್ಟೋರೇಜ್ ಸಾಮರ್ಥ್ಯ ಮತ್ತು ಸ್ನಾಪ್ಡ್ರಾಗನ್ 652  ಪ್ರೊಸೆಸರ್ ವೈಶಿಷ್ಟ್ಯ ಹೊಂದಿರುವ ಪೋನ್‌ಗಳು 20,500 ರೂಪಾಯಿ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments