Webdunia - Bharat's app for daily news and videos

Install App

ತಾಜ್ ಮಹಲ್, ಸಾರಾನಾಥ್ ಸೇರಿ ಎಲ್ಲಾ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ವೈ-ಫೈ ಸೌಲಭ್ಯ

Webdunia
ಶುಕ್ರವಾರ, 22 ಮೇ 2015 (16:02 IST)
ಭಾರತದಾದ್ಯಂತ ಎಲ್ಲಾ ಪ್ರಮುಖ ಪ್ರವಾಸಿ ತಾಣಗಳಲ್ಲಿ ವೈ-ಫೈ ಸೌಲಭ್ಯವನ್ನು ಸರ್ಕಾರ ಶೀಘ್ರದಲ್ಲೇ ಒದಗಿಸುತ್ತದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್ ಗುರುವಾರ ತಿಳಿಸಿದ್ದಾರೆ. 
 
 ವಿಶ್ವಪ್ರಸಿದ್ಧ ತಾಜ್ ಮಹಲ್, ಸಾರಾನಾಥ್, ಬೋಧ್ ಗಯಾ ಮುಂತಾದ ಪ್ರವಾಸಿ ಆಕರ್ಷಣೆಯ ಸ್ಥಳಗಳಲ್ಲಿ ವೈ-ಫೈ ಸೌಲಭ್ಯವನ್ನು ಶೀಘ್ರದಲ್ಲೇ ಒದಗಿಸಲಾಗುತ್ತದೆ. ವಾರಣಾಸಿ ಘಟ್ಟಗಳಲ್ಲಿ ಉಚಿತ ವೈ-ಫೈ ಸೇವೆಗಳನ್ನು ನಾವು ಈಗಾಗಲೇ ಆರಂಭಿಸಿದ್ದೇವೆ. ಪ್ರವಾಸಿಗಳಿಗೆ ಇ-ವೀಸಾ ನೀಡುವ ಸೌಲಭ್ಯವನ್ನು ಕೂಡ ಸರ್ಕಾರ ಆರಂಭಿಸಿದೆ ಎಂದು ಮಂಥನ್ ಸಮಾವೇಶದಲ್ಲಿ ಪ್ರಸಾದ್ ಹೇಳಿದರು. 
 
ಹಂತ-2 ಮತ್ತು ಹಂತ-3 ನಗರಗಳನ್ನು ಐಟಿ ಕೇಂದ್ರಗಳಾಗಿ ಮಾಡಲು ಸಚಿವಾಲಯವು ಹೊಸ ನೀತಿಯನ್ನು ರೂಪಿಸಿದೆ ಎಂದು ಅವರು ಹೇಳಿದರು.  ಸಣ್ಣ ಪಟ್ಟಣಗಳಲ್ಲಿ ಕಾಲ್ ಸೆಂಟರ್‌ಗಳು ಮತ್ತು ಬಿಪಿಒಗಳನ್ನು ಸ್ಥಾಪಿಸುವ ಮೂಲಕ  ಮೊದಲ ಹಂತದಲ್ಲಿ 48,000 ಉದ್ಯೋಗಗಳನ್ನು ಸೃಷ್ಟಿಸುತ್ತೇವೆ. ಐಟಿ ಕ್ರಾಂತಿಯನ್ನು ಸಣ್ಣ ಪಟ್ಟಣಗಳಿಗೆ ಹರಡಲು ಸಹಾಯಧನ ನೀಡುತ್ತೇವೆ ಎಂದು ಅವರು ನುಡಿದರು. 
 
ಈ ವಾಣಿಜ್ಯ ದೊಡ್ಡ ಅವಕಾಶವಾಗಿದ್ದು, ಸಣ್ಣ ಪಟ್ಟಣಗಳಿಗೆ ಮತ್ತು ಗ್ರಾಮಗಳಿಗೆ ಸರಕುಗಳ ರವಾನೆಗೆ ಅಂಚೆ ಇಲಾಖೆಯನ್ನು  ನಾವು ಬಳಸಿಕೊಳ್ಳುತ್ತಿದ್ದೇವೆ. ಅಂಚೆ ಇಲಾಖೆಯು ದೊಡ್ಡ ಇ-ವಾಣಿಜ್ಯ ಕಂಪನಿಗಳಿಗೆ ತಮ್ಮ ಸರಕುಗಳ ಸಾಗಣೆಗೆ ವಿಶ್ವಾಸಾರ್ಹ ಸಂಗಾತಿಯಾಗಿದೆ ಎಂದು ಸಚಿವರು ಹೇಳಿದರು. 
ಭಾರತದಲ್ಲಿ ಶೀಘ್ರದಲ್ಲಿ 100 ಕೋಟಿ ಮೊಬೈಲ್ ಗ್ರಾಹಕರಿರುತ್ತಾರೆ ಮತ್ತು ಎರಡು ವರ್ಷಗಳಲ್ಲಿ ಅಂತರ್ಜಾಲ ಸಂಪರ್ಕಗಳು 30 ಕೋಟಿಯಿಂದ 50 ಕೋಟಿ ರೂ.ಗಳಿಗೆ ಬೆಳೆಯುತ್ತದೆ ಎಂದು ಪ್ರಸಾದ್ ಹೇಳಿದರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments