ಇತ್ತೀಚಿಗಷ್ಟೇ ತ್ವರಿತ ಸಂದೇಶ ಸೇವೆ ವಾಟ್ಸಪ್, ಬಳಕೆದಾರರ ಡೇಟಾ ಮಾಹಿತಿಯನ್ನು ಮಾತೃ ಸಂಸ್ಥೆ ಫೇಸ್‌ಬುಕ್‌ನೊಂದಿಗೆ ಹಂಚಿಕೊಳ್ಳುವ ನಿರ್ಧಾರ ಮಾಡಿರುವ ಕುರಿತು ನ್ಯಾಯಾಲಯದಲ್ಲಿ ಸಲ್ಲಿಸಲಾದ ದೂರಿಗೆ ಪ್ರತಿಕ್ರಿಯೆ ನೀಡುವಂತೆ ದೆಹಲಿ ಹೈಕೋರ್ಟ್ ಸರಕಾರಕ್ಕೆ ಸೂಚನೆ ನೀಡಿದೆ.
ಕಂಪೆನಿಯ ಹೊಸ ನಿಯಮವಾದ ಬಳಕೆದಾರರ ಹಕ್ಕುಗಳನ್ನು ಹೊಂದಾಣಿಕೆ ವಿರುದ್ಧ ವಾಟ್ಸಪ್ ಬಳಕೆದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಈ ಕುರಿತು ಸೆಪ್ಟೆಂಬರ್ 14ರೊಳಗಾಗಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಹಿರಿಯ ವಕೀಲ ಸಂದೀಪ್ ಸೇಥಿ ಮತ್ತು ಪ್ರತಿಭಾ ಎಂ ಸಿಂಗ್, ಅರ್ಜಿದಾರರ ಪರ ವಕಾಲತ್ತು ವಹಿಸಿದ್ದು, ಸಂಸ್ಥೆ ರೂಪಿಸಿರುವ ಹೊಸ ನೀತಿ ಗಂಭೀರವಾದ ಉಲ್ಲಂಘನೆ ಎಂದು ವಾದಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ