Webdunia - Bharat's app for daily news and videos

Install App

ಹುದ್ದೆಯಲ್ಲಿ ತಂಗಲು ಬಯಸಿದ್ದೆ, ಆದರೆ ಸೂಕ್ತ ಒಪ್ಪಂದ ಕುದುರಲಿಲ್ಲ: ರಘುರಾಮ್ ರಾಜನ್

Webdunia
ಶುಕ್ರವಾರ, 2 ಸೆಪ್ಟಂಬರ್ 2016 (14:11 IST)
ಆರ್‌ಬಿಐನಿಂದ ನಿರ್ಗಮಿಸಲು ಕೆಲವು ದಿನಗಳಿರುವ ಮುಂಚೆ, ಗವರ್ನರ್ ರಘುರಾಮ್ ರಾಜನ್ ತಾವು ಇನ್ನೂ ಸ್ವಲ್ಪ ಕಾಲ ಹುದ್ದೆಯಲ್ಲಿ ತಂಗಲು ಬಯಸಿದ್ದರೂ ತಮ್ಮ ಅಧಿಕಾರಾವಧಿ ವಿಸ್ತರಣೆ ಕುರಿತು ಸರ್ಕಾರದೊಂದಿಗೆ ಸೂಕ್ತ ರೀತಿಯ ಒಪ್ಪಂದಕ್ಕೆ ಬರಲಾಗಲಿಲ್ಲ ಎಂದಿದ್ದಾರೆ.
 
ಅಪೂರ್ಣ ಕೆಲಸದ ಕಾರಣದಿಂದ  ಸೂಕ್ತ ರೀತಿಯ ಒಪ್ಪಂದವನ್ನು ಸರ್ಕಾರ ಮಾಡಿಕೊಂಡಿದ್ದರೆ ಹುದ್ದೆಯಲ್ಲಿ ಮುಂದುವರಿಯಲು ಬಯಸಿದ್ದೆ. ಆದರೆ ಅದು ನೆರವೇರದಿರುವುದರಿಂದ ಅಧಿಕಾರಾವಧಿ ಮುಗಿಯಿತು ಎಂದು ರಾಜನ್ ಹೇಳಿದರು. ವಿವಿಧ ವಿಷಯಗಳ ಬಗ್ಗೆ ರಾಜನ್ ಅವರ ಕೆಲವು ಬಿಚ್ಚುಮಾತಿನ ಅಭಿಪ್ರಾಯಗಳನ್ನು ಆರ್ಥಿಕ ಮತ್ತು ಆರ್ಥಿಕೇತರ ವಿಷಯಗಳಲ್ಲಿ ಸರ್ಕಾರದ ಅಭಿಪ್ರಾಯಗಳಿಗೆ ವಿರುದ್ಧವೆಂದು ಕಾಣಲಾಗಿತ್ತು.
 
ಹೆಸರಾಂತ ಪತ್ರಕರ್ತ ಕರಣ್ ಥಾಪರ್ ಅವರ ಜತೆ ಸಂದರ್ಶನದಲ್ಲಿ ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಕುರಿತ ವಿವಾದಾತ್ಮಕ ಭಾಷಣವನ್ನು  ರಾಜನ್ ಸಮರ್ಥಿಸಿಕೊಂಡರು.
 
 ಅನೇಕ ಸಂದರ್ಭಗಳಲ್ಲಿ ಅಸೂಕ್ತ ಕಾಲದಲ್ಲಿ ಮಾತನಾಡಿದ್ದೇನೆಂಬ ಟೀಕೆಯನ್ನು ನಿರಾಕರಿಸಿದ ರಾಜನ್, ಸಾರ್ವಜನಿಕ ಕ್ಷೇತ್ರದ ವ್ಯಕ್ತಿಗಳು ಒಳ್ಳೆಯ ಪೌರತ್ವವೇನೆಂದು ಯುವ ಮನಸ್ಸುಗಳಿಗೆ ಹೇಳುವುದು ಕಾನೂನುಬದ್ಧ ಕರ್ತವ್ಯ ಮತ್ತು ನೈತಿಕ ಹೊಣೆಗಾರಿಕೆ ಎಂದು ಪ್ರತಿಪಾದಿಸಿದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments