Select Your Language

Notifications

webdunia
webdunia
webdunia
webdunia

ಹೆಚ್ಚು ಸ್ಪೆಕ್ಟ್ರಮ್ ಪಡೆಯಲು ವೊಡಾಫೋನ್ ಚಿಂತನೆ!

ಹೆಚ್ಚು ಸ್ಪೆಕ್ಟ್ರಮ್ ಪಡೆಯಲು ವೊಡಾಫೋನ್ ಚಿಂತನೆ!
ನವದೆಹಲಿ , ಗುರುವಾರ, 12 ಮೇ 2016 (12:04 IST)
ದೇಶದ ಎರಡನೆ ಅತಿದೊಡ್ಡ ಮೊಬೈಲ್ ಸಂಪರ್ಕ ಸೇವೆಯನ್ನು ನೀಡುತ್ತಿರುವ ವೊಡಾಫೋನ್ ಇಂಡಿಯಾ, ತನ್ನ ನೆಟ್ವರ್ಕ್ ಹೆಚ್ಚಿಸಲು ಹೆಚ್ಚು ಸ್ಪೆಕ್ಟ್ರಮ್ ಪಡೆಯಲು ಯೋಜಿಸಿದೆ ಎಂದು ತಿಳಿಸಿದೆ.
ವೊಡಾಫೋನ್ ಇಂಡಿಯಾ ಹೆಚ್ಚು ಸ್ಪೆಕ್ಟ್ರಮ್ ಪಡೆಯಲು ಯೋಜನೆ ರೂಪಿಸುತ್ತಿದೆ. ಆದರೆ ವ್ಯಾಪಾರ ಮಾರ್ಗ, ಹಂಚಿಕೆ ಮಾರ್ಗ ಅಥವಾ ಕ್ರಿಯಾ ಮಾರ್ಗದ ಕುರಿತು ಸಂಸ್ಥೆ ಯಾವುದೆ ಅಧಿಕೃತ ಮಾಹಿತಿಯನ್ನು ಘೋಷಿಸಿಲ್ಲವಾದರು, ಬಂಡವಾಳ ಹೆಚ್ಚಿಸುವ ಅಗತ್ಯವಿದ್ದ ಹಿನ್ನಲೆಯಲ್ಲಿ ಹೆಚ್ಚು ಸ್ಪೆಕ್ಟ್ರಮ್ ಪಡೆಯಲು ಯೋಜಿಸಲಾಗುತ್ತಿದೆ ಎಂದು ವೊಡಾಫೋನ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸುನಿಲ್ ಸೂದ್ ತಿಳಿಸಿದ್ದಾರೆ.
 
ವೊಡಾಫೋನ್ ಇಂಡಿಯಾ, ಪ್ರಸ್ತುತವಾಗಿ ದೆಹಲಿ, ಕೋಲ್ಕತಾ, ಮುಂಬೈ, ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ  4ಜಿ ಸೇವೆಯನ್ನು ನೀಡುತ್ತಿದ್ದು, ಶೀಘ್ರದಲ್ಲಿ ಗುಜರಾತ್, ಹರಿಯಾಣ, ಯುಪಿ (ಪೂರ್ವ) ಮತ್ತು ಪಶ್ಚಿಮ ಬಂಗಾಳದ ನಾಲ್ಕು ವಲಯಗಳಲ್ಲಿ ಸೇವೆಯನ್ನು ಪ್ರಾರಂಭಿಸುವುದಾಗಿ ಸಂಸ್ಥೆ ತಿಳಿಸಿದೆ.
 
ಪ್ರಸಕ್ತ ವರ್ಷದ ಅಂತ್ಯದೊಳಗೆ ವೊಡಾಫೋನ್ ಇಂಡಿಯಾ 1000 ಪಟ್ಟಣಗಳಲ್ಲಿ 4ಜಿ ಸೇವೆಯನ್ನು ನೀಡಲಿದೆ ಎಂದು ಸಂಸ್ಥೆಯ ಡೇಟಾ ರೆವೆನ್ಯೂ, ಮುಖ್ಯ ಕಾರ್ಯನಿರ್ವಾಹಕ ಸುನಿಲ್ ಸೂದ್ ಹೇಳಿದ್ದಾರೆ.
 
ಮುಂಬೈ, ದೆಹಲಿ, ಕೋಲ್ಕತಾ, ಕರ್ನಾಟಕ, ಕೇರಳ, ಹರಿಯಾಣ, ಗುಜರಾತ್, ಯುಪಿ (ಪೂರ್ವ) ಮತ್ತು ಪಶ್ಚಿಮ ಬಂಗಾಳದ ಒಂಬತ್ತು ವಲಯಗಳಲ್ಲಿ 4ಜಿ ಸೇವೆ ನೀಡುವುದರಿಂದ ವೊಡಾಫೋನ್ ಇಂಡಿಯಾ ಡೇಟಾ ಆದಾಯದಲ್ಲಿ 70 ಪ್ರತಿಶತ ಆದಾಯ ಹೊಂದಲಿದೆ ಎಂದು ಸೂದ್ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೀಟರ್ ಬಡ್ಡಿ ದಂಧೆ: ರೌಡಿ ಶೀಟರ್ ಮಹಿಳೆಯಿಂದ ಹಲ್ಲೆ