ಭಾರತೀಮ ಮೂಲದ ಕಂಪೆನಿಯಾದ ವಿಡಿಯೋಕಾನ್ ಕಡಿಮೆ ಬೆಲೆಯ ಉತ್ತಮ ಲಕ್ಷಣಗಳಿರುವ ಡ್ಯುವೆಲ್ ಸಿಮ್ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಫೋನ್ ವಿನ್ಯಾಸ ಸ್ಟೈಲಿಶ್ ಆಗಿದೆ. ಇದರ ಬೆಲೆ ಕೇವಲ 6,000 ರೂಪಾಯಿಗಿಂತ ಕಡಿಮೆ ಇರಲಿದೆ. ವಿಡಿಯೋಕಾನ್ನ ಈ ಮಾಡೆಲ್ನ ಹೆಸರು ಎ29 ಎಂದಿದೆ.
ಈ ಸ್ಮಾರ್ಟ್ಫೋನ್ನಲ್ಲಿ ಡ್ಯುವೆಲ್ ಕೊರ್ ಪ್ರೊಸೆಸರ್ ಇದೆ ಮತ್ತು ಇದು 3ಜಿ ಸಪೋರ್ಟ್ ನೀಡುತ್ತದೆ. ಈ ಸ್ಮಾರ್ಟ್ಫೋನ್ ಆಂಡ್ರೈಡ್ ಜೆಲಿಬಿನ್ 4.2.2 ಮೂಲಕ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿ ಡ್ಯುವೆಲ್ ಸಿಮ್ ಬಳಕೆಯ ಅವಕಾಶವಿದೆ. ಇದರ ಟಿಎಫ್ಟಿ ಎಲ್ಸಿಡಿ ಸ್ಕ್ರೀನ 4 ಇಂಚಿನದ್ದಾಗಿದ್ದು , ಇದರ ರೆಜ್ಯುಲ್ಯೂಶನ್ 800X480 ಪಿಕ್ಸಲ್ ಇದೆ. ಈ ಫೋನ್ ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಲಭ್ಯವಿವೆ. ಇದರಲ್ಲಿ 4ಜಿಬಿ ಸ್ಟೋರೇಜ್ ಸಾಮರ್ಥ್ಯವಿದೆ ಮತ್ತು 32 ಜಿಬಿ ವರೆಗಿನ ಮೆಮೊರಿ ಕಾರ್ಡ್ ಬಳಸಬಹುದಾಗಿದೆ. ಇದರಲ್ಲಿ 512 ಎಮ್ಬಿ ರ್ಯಾಮ್ ಇದೆ.
ಈ ಹ್ಯಾಂಡ್ಸೆಟ್ನಲ್ಲಿ 2 ಕ್ಯಾಮೆರಾಗಳಿವೆ. ಇದರ ಹಿಂದುಗಡೆಯಲ್ಲಿ 3.2 ಎಮ್ಪಿ ಮತ್ತು ಎದುರುಗಡೆ 0.3 ಎಮ್ಪಿ ಕ್ಯಾಮೆರಾ ಇದೆ. ಹಿಂಬದಿಯ ಕ್ಯಾಮೆರಾಗಾಗಿ ಎಲ್ಇಡಿ ಫ್ಲ್ಯಾಶ್ ಸಪೋರ್ಟ್ ಇದೆ. ಇದರಲ್ಲಿ 4.0 ಬ್ಲ್ಯೂಟೂಥ್ , 3ಜಿ, ವೈಫೈ ಮತ್ತು ಜಿಪಿಎಸ್ ಸೌಲಭ್ಯಗಳಿವೆ.