Webdunia - Bharat's app for daily news and videos

Install App

ವೈಷ್ಣವಿ ಗ್ರೂಪ್ ಮುಡಿಗೆ ಪ್ರತಿಷ್ಠಿತ ಮೂರು ಪ್ರಶಸ್ತಿ ಕಿರೀಟ

Webdunia
ಗುರುವಾರ, 12 ಜನವರಿ 2017 (21:12 IST)
ಬೆಂಗಳೂರು ನಗರದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ ಒಂದಾಗಿರುವ ವೈಷ್ಣವಿ ಗ್ರೂಪ್‍ನ ಮುಕುಟಕ್ಕೆ ಮತ್ತೆ ಮೂರು ಪ್ರಶಸ್ತಿಗಳ ಕಿರೀಟ ಬಂದಿದೆ. ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಭಾರತದ 8 ನೇ ರಿಯಾಲ್ಟಿ ಪ್ಲಸ್ ಕಾನ್‍ಕ್ಲೇವ್ ಅಂಡ್ ಎಕ್ಸಲೆನ್ಸ್ ಅವಾರ್ಡ್ 2016 ಸಮಾರಂಭದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ವಿತರಿಸಲಾಯಿತು. 
 
ವೈಷ್ಣವಿ ಗ್ರೂಪ್‍ನ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಗೋವಿಂದರಾಜು ಅವರು ಈ ಪ್ರಶಸ್ತಿಗಳನ್ನು ಸ್ವೀಕರಿಸಿದರು. ಬೆಂಗಳೂರಿನ ಹೊಟೇಲ್ ಆರ್ಚಿಡ್‍ನಲ್ಲಿ ನಡೆದ ಅದ್ಧೂರಿ ಸಮಾರಂಭಕ್ಕೆ ದೇಶದ ಖ್ಯಾತ ಆರ್ಕಿಟೆಕ್ಟ್ ಶೈಲಾ ಶ್ರೀ ಪ್ರಕಾಶ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
 
ಕಮರ್ಷಿಯಲ್ ಪ್ರಾಪರ್ಟಿ ಆಫ್ ದಿ ಇಯರ್: ಈ ಪ್ರಶಸ್ತಿಯನ್ನು ಕಬ್ಬನ್ ರಸ್ತೆಯಲ್ಲಿರುವ ವೈಷ್ಣವಿಯ ಅತ್ಯುತ್ತಮ ಕಮರ್ಷಿಯಲ್ ಪ್ರಾಪರ್ಟಿ ಆಗಿರುವ ಯೂನಿಯನ್ 29 ಪಡೆದುಕೊಂಡಿದೆ. ಈ ಪ್ರಾಪರ್ಟಿಯಲ್ಲಿ ಕಂಪನಿಯ ಕಲಾತ್ಮಕ ಎಂಜಿನಿಯರಿಂಗ್, ವಿನ್ಯಾಸ ಮತ್ತು ಆರ್ಕಿಟೆಕ್ಟ್ ಮೇಳೈಸಿದೆ. ಅತ್ಯಾಕರ್ಷಕವಾಗಿ ಕಾಣಲಿರುವ ಇದೊಂದು ಕಲ್ಪನಾತೀತ ಪ್ರಾಪರ್ಟಿ ಆಗಿದ್ದು, ಅಭಿವೃದ್ಧಿ ವಿಚಾರದಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ.
 
ಲಕ್ಷುರಿ ಪ್ರಾಜೆಕ್ಟ್ ಆಫ್ ದಿ ಇಯರ್ ಪ್ರಶಸ್ತಿಯನ್ನು ವೈಷ್ಣವಿ ಟೆರೇಸಸ್ ಬಾಚಿಕೊಂಡಿದೆ. ಐಷಾರಾಮದ ಸಂಗ್ರಹ ಇದಾಗಿದ್ದು, ಸೌಂದರ್ಯ ಮತ್ತು ಅತ್ಯುತ್ತಮವಾದ ವಿನ್ಯಾಸ ಇಲ್ಲಿ ಮನೆ ಮಾಡಿದೆ. ಇದರೊಂದಿಗೆ ಮೂಲಸೌಕರ್ಯಗಳು ಉತ್ತಮವಾಗಿವೆ. ಈ ಅತ್ಯದ್ಭುತವಾದ ಯೋಜನೆ ಇಂತಹ ಪ್ರಶಸ್ತಿಗೆ ಹೇಳಿ ಮಾಡಿಸಿದಂತಿದೆ. ಇದೇ ಕಾರಣಕ್ಕೆ ಯೋಜನೆಗೆ ಅತ್ಯುತ್ತಮ ಲಕ್ಷುರಿ ಪ್ರಾಜೆಕ್ಟ್ ಎಂಬ ಪ್ರಶಸ್ತಿ ಸಂದಿದೆ.
 
ಅದೇರೀತಿ ವರ್ಷದ ರಿಯಲ್ ಎಸ್ಟೇಟ್ ವೆಬ್‍ಸೈಟ್ ಪ್ರಶಸ್ತಿಗೂ ವೈಷ್ಣವಿ ಗ್ರೂಪ್ ಪಾತ್ರವಾಗಿದೆ. ವೆಬ್‍ಸೈಟ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿನ್ಯಾಸ ಮಾಡಲಾಗಿದ್ದು, ಇದರ ಮೂಲಕವೇ ಗ್ರಾಹಕರು ವೈಷ್ಣವಿ ಗ್ರೂಪ್‍ನ ಪ್ರಾಜೆಕ್ಟ್‌ಗಳ ಬಗ್ಗೆ ಆನ್‍ಲೈನ್ ಅನುಭವವನ್ನು ಪಡೆಯಲಿದ್ದಾರೆ. ಮನೆ ಖರೀದಿಸುವವರಿಗೆ ಸುಲಭವಾಗಿ ದೊರೆಯುವ ಮತ್ತು ಅತ್ಯುತ್ತಮವಾದ ಮನೆಗಳನ್ನು ಆನ್‍ಲೈನ್ ಮೂಲಕ ಎಲ್ಲಾ ಮಾಹಿತಿಗಳನ್ನು ಒದಗಿಸಲಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments