Select Your Language

Notifications

webdunia
webdunia
webdunia
webdunia

ಟ್ವಿಟರ್‌ನಿಂದ ಭಾರತದ ಮೊಬೈಲ್ ಮಾರುಕಟ್ಟೆ ಕಂಪನಿ ಜಿಪ್‌ಡಯಲ್ ಖರೀದಿ

ಟ್ವಿಟರ್‌ನಿಂದ ಭಾರತದ ಮೊಬೈಲ್ ಮಾರುಕಟ್ಟೆ ಕಂಪನಿ ಜಿಪ್‌ಡಯಲ್ ಖರೀದಿ
ಬೆಂಗಳೂರು , ಬುಧವಾರ, 21 ಜನವರಿ 2015 (17:23 IST)
ಅಂತಿಮವಾಗಿ ಭಾರತದ ಸಂಸ್ಥೆ  ಜಿಪ್‌ಡಯಲ್   ಖರೀದಿ ಮಾಡಿರುವುದಾಗಿ ಟ್ವಿಟರ್  ಅಧಿಕೃತವಾಗಿ ಘೋಷಿಸಿದೆ. ಜಿಪ್ ಡಯಲ್ ಮೊಬೈಲ್ ಮಾರುಕಟ್ಟೆ ಸಂಸ್ಥೆಯಾಗಿದ್ದು, ಈ ಸ್ವಾಧೀನದಿಂದ ಭಾರತದಂತ ಉದಯೋನ್ಮುಖ ಮಾರುಕಟ್ಟೆಯಲ್ಲಿ ಹೆಜ್ಜೆಗುರುತು ಮೂಡಿಸಲು ಟ್ವಿಟರ್ ಯೋಜಿಸಿದೆ. ಇದರ ಜೊತೆಗೆ ಬೆಂಗಳೂರಿನಲ್ಲಿ ಹೊಸ ಎಂಜಿನಿಯರಿಂಗ್ ಕಚೇರಿ ನಿರ್ಮಿಸಲು ಅದು ಯೋಜಿಸಿದೆ.
 
ಟ್ವಿಟರ್ ಉಪಾಧ್ಯಕ್ಷ ಕ್ರಿಶ್ಚಿಯನ್ ಒಸ್ಟೆಲಿಯನ್  ವಿವರಣೆ ನೀಡುತ್ತಾ, ಮುಂದಿನ ಕೆಲವು ವರ್ಷಗಳಲ್ಲಿ, ಬ್ರೆಜಿಲ್, ಭಾರತ ಮತ್ತು ಇಂಡೋನೇಶಿಯಾದಲ್ಲಿ ಕೋಟ್ಯಂತರ ಜನರು ಮೊದಲ ಬಾರಿಗೆ ಆನ್‌ಲೈನ್‌ನಲ್ಲಿ ಬರಲಿದ್ದಾರೆ. ಅನೇಕ ಮಂದಿಗೆ ಅವರ ಆನ್ಲೈನ್ ಅನುಭವ ಮೊಬೈಲ್ ಉಪಕರಣದಲ್ಲಾಗುತ್ತದೆ.

ಆದರೆ ದತ್ತಾಂಶದ ವೆಚ್ಚವು ಅಂತರ್ಜಾಲದ ನಿಜವಾದ ಶಕ್ತಿಯನ್ನು ಅನುಭವಿಸಲು ತಡೆಯಾಗಬಹುದು. ಜಿಪ್‌ಡಯಲ್ ಜತೆ ಟ್ವಿಟರ್ ಪಾಲುದಾರಿಕೆಯಿಂದ ಎಲ್ಲರೂ ಅಂತರ್ಜಾಲದ ಅನುಭವ ಪಡೆಯಲು ಸಾಧ್ಯವಾಗುತ್ತದೆ ಎಂದಿದ್ದಾರೆ. 
 
 ಜಿಪ್ ಡಯಲ್ ಬಗ್ಗೆ ನಿಮಗೆ ತಿಳಿದಿರದ ಐದು ಸಂಗತಿಗಳು ಕೆಳಗಿವೆ
1. ಹಿಂದೆ ಜಿಪ್‌ಡಯಲ್ ಟ್ವಿಟರ್ ಜತೆ ಕೆಲಸ ಮಾಡಿತ್ತು.ಭಾರತದ ಚುನಾವಣೆ, ಬಾಲಿವುಡ್ ಚಿತ್ರ ಪ್ರಮೋಷನ್ ಮತ್ತು ಎಂಟಿವಿ ಇಂಡಿಯಾದ ರಾಕ್‌ ದ ಓಟ್, ಡಯಲ್ ದಿ ಹ್ಯಾಶ್‌ಟ್ಯಾಂಗ್ ಅಭಿಯಾನದಲ್ಲಿ ಜೊತೆಗೂಡಿದ್ದವು. 
 
2. ಜಿಪ್ ಡಯಲ್ ವೇದಿಕೆಯನ್ನು 60 ದಶಲಕ್ಷ ಬಳಕೆದಾರರು ಉಪಯೋಗಿಸಿದ್ದಾರೆ.
3. ಭಾರತದಾದ್ಯಂತ ಜಿಪ್ ಡಯಲ್ ವೇದಿಕೆಯನ್ನು ಕ್ರಿಕೆಟ್ ಸ್ಕೋರ್, ಆಡಿಯೋ ಕಾರ್ಯಕ್ರಮ, ನೆಚ್ಚಿನ ಬಾಲಿವುಡ್ ತಾರೆಯರ ಟ್ವೀಟ್‌ಗಳಿಗೆ ಅವರ ಮೊಬೈಲ್‌ಗಳಿಂದ ಪ್ರವೇಶ ಪಡೆಯಲು ಸಾಧ್ಯವಾಗಿದೆ. 
 
4.ಟೆಕ್ಸ್ಟ್ ಮತ್ತು ವಾಯ್ಸ್ ಮೆಸೇಜ್‌ಗಳ ಮೂಲಕ ನಟರು, ರಾಜಕಾರಣಿಗಳು ಮತ್ತು ಅಥ್ಲೇಟ್‌ಗಳು ಲಕ್ಷಾಂತರ ಜನರನ್ನು ಮುಟ್ಟಲು ಈ ವೇದಿಕೆಯನ್ನು ಬಳಸಿಕೊಳ್ಳುತ್ತದೆ. 

Share this Story:

Follow Webdunia kannada