Webdunia - Bharat's app for daily news and videos

Install App

ಟಿವಿಎಸ್ ಮೋಟಾರ್‌ ಕಂಪೆನಿಯಿಂದ ನೂತನ ಆವೃತ್ತಿಯ ವಿಕ್ಟರ್ ಮಾರುಕಟ್ಟೆಗೆ ಬಿಡುಗಡೆ

Webdunia
ಮಂಗಳವಾರ, 19 ಏಪ್ರಿಲ್ 2016 (13:06 IST)
ಟಿವಿಎಸ್‌ ಮೋಟಾರ್ಸ್ ಸಂಸ್ಥೆ, ತನ್ನ ಹೊಸ ಆವೃತ್ತಿಯ ಟಿವಿಎಸ್ ವಿಕ್ಟರ್ ದ್ವಿಚಕ್ರ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ದೆಹಲಿ ಶೋರೂಮ್ ಹೊರತು ಪಡಿಸಿ ಈ ಆವೃತ್ತಿಯ ಬೆಲೆ 49,490 ಎಂದು ಮೂಲಗಳು ತಿಳಿಸಿವೆ.
2002 ರ ಸಾಲಿನಲ್ಲಿ ಟಿವಿಎಸ್ ವಿಕ್ಟರ್ ಆವೃತ್ತಿಯ ಬೈಕ್‌ಗಳು ಬಿಡುಗಡೆಯಾಗಿದ್ದವು. ಈ ಆವೃತ್ತಿಯ ಬೈಕ್‌ಗಳು ಭಾರತದ ಮಾರುಕಟ್ಟೆಯಲ್ಲಿ ಹೊಸ ಸಂಚಲವನ್ನು ಮೂಡಿಸಿದ್ದವು. ಸಂಸ್ಥೆ, ಉತ್ತಮ ತಂತ್ರಜ್ಞಾನ ಮತ್ತು ಆಕರ್ಷಕ ವಿನ್ಯಾಸ ಹೊಂದಿರುವ ಬೈಕ್‌ಗಳನ್ನು ತನ್ನ ಗ್ರಾಹಕರಿಗಾಗಿ ನಿರಂತರವಾಗಿ ನೀಡುತ್ತಿದೆ ಎಂದು ಟಿವಿಎಸ್‌ ಮೋಟಾರ್ಸ್ ಸಂಸ್ಥೆಯ ಮಾರಾಟದ & ಸೇವೆ ವಿಭಾಗದ ಉಪಾಧ್ಯಕ್ಷರಾದ ಜೆಎಸ್ ಶ್ರೀನಿವಾಸನ್ ಹೇಳಿದ್ದಾರೆ.
 
ಹೊಸ ಆವೃತ್ತಿಯ ಟಿವಿಎಸ್‌ ವಿಕ್ಟರ್ ಬೈಕ್‌ಗಳು ಗ್ರಾಹಕರನ್ನು ಆಕರ್ಷಿಸಲಿದ್ದು, ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಹೊಂದುತ್ತವೆ ಎಂದು ಶ್ರೀನಿವಾಸನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
 
ಹೊಸ ಆವೃತ್ತಿಯ ಟಿವಿಎಸ್‌ ಬೈಕ್‌ಗಳು ವಾಲ್ವೆ ಇಕೋಟ್ರಸ್ಟ್ ಎಂಜಿನ್, ಇಲೆಕ್ಟ್ರಿಕ್ ಸ್ಟಾರ್ಟ್ ಮತ್ತು ಪ್ರತಿ ಲೀಟರ್ ಪೆಟ್ರೋಲ್‌ನಲ್ಲಿ 76 ಕಿ.ಮೀಟರ್ ದೂರ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.
 
ಹೊಸ ಆವೃತ್ತಿಯ ಬೈಕ್‌ಗಳು ಮಾರುಕಟ್ಟೆಯಲ್ಲಿ ಡ್ರಮ್ ಮತ್ತು ಡಿಸ್ಕ್ ಎಂಬ ಎರಡು ವಿಧಗಳಲ್ಲಿ ಲಭ್ಯವಿದ್ದು, ದೆಹಲಿ ಶೋರೂಮ್ ದರ ಹೊರತು ಪಡಿಸಿ ಕ್ರಮವಾಗಿ 49,490 ರೂಪಾಯಿ ಮತ್ತು 51,490 ರೂಪಾಯಿಗಳಲ್ಲಿ ಲಭ್ಯವಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments