Select Your Language

Notifications

webdunia
webdunia
webdunia
webdunia

ಕೊಳ್ಳುವವರಿಲ್ಲ ಕಿಂಗ್ ಫಿಷರ್ ಹೌಸ್; ವ್ಯರ್ಥವಾಯ್ತು ಮೂರನೇ ಹರಾಜು

ಕೊಳ್ಳುವವರಿಲ್ಲ ಕಿಂಗ್ ಫಿಷರ್ ಹೌಸ್; ವ್ಯರ್ಥವಾಯ್ತು ಮೂರನೇ ಹರಾಜು
ನವದೆಹಲಿ , ಮಂಗಳವಾರ, 20 ಡಿಸೆಂಬರ್ 2016 (10:35 IST)
ಸಾವಿರಾರು ಕೋಟಿ ಸಾಲ ತೀರಿಸದೇ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರು ಪಡೆದುಕೊಂಡಿದ್ದ ಸಾಲದ ಹಣವನ್ನು ವಾಪಸ್ ಪಡೆಯಲು ಬ್ಯಾಂಕ್‌ಗಳು ದೇಶದಲ್ಲಿರುವ ಅವರ ಆಸ್ತಿಯನ್ನು ಹರಾಜಿಗಿಡುತ್ತಿವೆ. ಕಿಂಗ್ ಫಿಶರ್ ಹೌಸ್‌ನ್ನು ಕೊಳ್ಳುವವರು ಯಾರು ಇಲ್ಲವಾಗಿದೆ. ಅವರ ಹೌಸ್‌ನ್ನು ಮೂರನೆಯ ಬಾರಿಗೆ ಹರಾಜಿಗ್ಗಿಟ್ಟಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಮತ್ತೆ ನಿರಾಶೆಯಾಗಿದೆ.

 
ಮುಂಬೈನ ಪ್ಲಶ್ ವಿಲ್ಲೆ ಪಾರ್ಲೆ ಏರಿಯಾದಲ್ಲಿ ಈ ಬಂಗಲೆ ಇದ್ದು ಕಳೆದ ಮಾರ್ಚ್ ತಿಂಗಳಲ್ಲಿ ಎಸ್‌ಬಿಐ ಇದನ್ನು 1500ಕೋಟಿ ಮೊತ್ತಕ್ಕೆ ಹರಾಜಿಗಿಟ್ಟಿತ್ತು. ಆದರೆ ಯಾರು ಕೂಡ ಬಂಗಲೆ ಖರೀದಿಸಲು ಮುಂದೆ ಬಂದಿರಲಿಲ್ಲ. ಹೀಗಾಗಿ ಬೆಲೆಯನ್ನು 10% ತಗ್ಗಿಸಿ 130ಕೋಟಿಗೆ ಎರಡನೆಯ ಬಾರಿಗೆ ಹರಾಜು ಕೂಗಿತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಮತ್ತೀಗ 15% ಪ್ರತಿಶತ ತಗ್ಗಿಸಿ 115ಕೋಟಿಗೆ ಹರಾಜಿಗಿಟ್ಟಿತ್ತು. ಆದರೆ ಹಿಂದಿನಂತೆ ವಿಫಲತೆ ಕಂಡಿದೆ. ಬಂಗಲೆಯನ್ನು ಕೊಳ್ಳುವವರೇ ಇಲ್ಲವಾಗಿದೆ.
 
ಪ್ರತಿಷ್ಠಿತ ಬಂಗಲೆಯನ್ನು ಕೊಳ್ಳಲು ಯಾರು ಮುಂದೆ ಬರದೇ ಇರುವುದಕ್ಕೆ ನೋಟ್ ಬ್ಯಾನ್ ಇಫೆಕ್ಟ್ ಕೂಡ ಕಾರಣವಾಗಿರಬಹುದೆಂದು ಊಹಿಸಲಾಗಿದೆ. ಈ ಬಂಗಲೆ ಮಾರುಕಟ್ಟೆ ಮೌಲ್ಯ 60ರಿಂದ 70ಕೋಟಿ. ಆದರೆ ಬ್ಯಾಂಕ್ ದುಪ್ಪಟ್ಟು ಮೊತ್ತಕ್ಕೆ ಇದನ್ನು ಹರಾಜು ಮಾರ ಹೊರಟಿದೆ ಇದು ಕೂಡ ಬಂಗಲೆ ಮೇಲೆ ಆಸಕ್ತಿ ಕೆರಳದಿರಲು ಕಾರಣವಾಗಿರಬಹುದು. 
 
ಜತೆಗೆ ಈ ಬಂಗಲೆ ಸಮುದ್ರ ತೀರದಲ್ಲಿರುವುದರಿಂದ ಮಳೆಗಾಲದಲ್ಲಿ ನೀರು ನುಗ್ಗತ್ತೆ. ಅಷ್ಟೇ ಅಲ್ಲದೆ ಒಂದೇ ವೇಳೆ ಮಲ್ಯ ಬ್ಯಾಂಕ್ ಸಾಲ ಮರುಪಾವತಿ ಮಾಡಿ ತನ್ನ ಆಸ್ತಿ ತನಗೆ ಕೊಡಬೇಕು ಎಂದು ಕಟಕಟೆ ಹತ್ತಿದ್ರೆ ಕೋರ್ಟ್ ವ್ಯಾಜ್ಯದಲ್ಲಿ ಸಿಲುಕಬಹುದೆಂಬ ಭೀತಿಯಿಂದ ಯಾರು ಕೂಡ ಈ ಬಂಗಲೆಯನ್ನು ಕೊಳ್ಳುವ ಸಾಹಸಕ್ಕೆ ಕೈ ಹಾಕುತ್ತಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ರಷ್ಯಾ ರಾಯಭಾರಿಯ ಲೈವ್ ಹತ್ಯೆ (ವಿಡಿಯೋ)