ಷೇರುಪೇಟೆಯಲ್ಲಿ ಹಣ ಹೂಡಿಕೆ ಮಾಡುವುದು ಎರಡು ಮಾರ್ಗದ ಆಟ. ಒಮ್ಮೆ ಹೂಡಿಕೆದಾರ ಭಾರೀ ಲಾಭ ಗಳಿಸಬಹುದು, ಇನ್ನೊಮ್ಮೆ ಭಾರೀ ನಷ್ಟ ಅನುಭವಿಸಿ ಕೈಸುಟ್ಟುಕೊಳ್ಳಬಹುದು. ಐದು ಕಂಪನಿಗಳ ಷೇರುಗಳ ಮೌಲ್ಯ ಕೇವಲ ಒಂದು ತಿಂಗಳ ಅವಧಿಯಲ್ಲಿ ಶೇ. 80ರಷ್ಟು ಕುಸಿದು ಷೇರುದಾರರಿಗೆ ವಿಪರೀತ ನಷ್ಟವಾಗಿದೆ. ಆದ್ದರಿಂದ ನಿಮ್ಮ ಷೇರುಗಳನ್ನು ಬುದ್ದಿವಂತಿಕೆಯಿಂದ ಆಯ್ಕೆ ಮಾಡಬೇಕು.