Select Your Language

Notifications

webdunia
webdunia
webdunia
webdunia

ಡಾಲರ್ ವಿರುದ್ಧ 17 ಪೈಸೆ ಕುಸಿದ ರೂಪಾಯಿ

ಡಾಲರ್ ವಿರುದ್ಧ 17 ಪೈಸೆ ಕುಸಿದ ರೂಪಾಯಿ
ಮುಂಬೈ , ಸೋಮವಾರ, 30 ಮಾರ್ಚ್ 2015 (10:23 IST)
ಅಂತರಬ್ಯಾಂಕ್ ವಿದೇಶಿ ವಿನಿಮಯದಲ್ಲಿ ಸೋಮವಾರ ಆರಂಭದ ವಹಿವಾಟಿನಲ್ಲೇ ಅಮೆರಿಕದ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 62.58ಕ್ಕೆ ದಾಟಿ 17 ಪೈಸೆ ಕುಸಿದಿದೆ.
ಡಾಲರ್‌ಗೆ ಆಮದುದಾರರಿಂದ  ಮಾಸಾಂತ್ಯದ ಬೇಡಿಕೆ ನಡುವೆ ಇತರೆ ಕರೆನ್ಸಿಗಳ ವಿರುದ್ಧ ಅಮೆರಿಕ ಡಾಲರ್ ಮೌಲ್ಯ ಏರಿಕೆಯಾಗಿದ್ದರಿಂದ ಈ ಬೆಳವಣಿಗೆ ಉಂಟಾಗಿದೆ.

ಇತರೆ ಕರೆನ್ಸಿಗಳ ವಿರುದ್ಧ ಡಾಲರ್ ಬಲ ಮತ್ತು ಸುಸ್ಥಿರ ಬಂಡವಾಳ ಹರಿವಿನಿಂದ  ರೂಪಾಯಿ ಮೌಲ್ಯದಲ್ಲಿ ಕುಸಿತ ಉಂಟಾಯಿತು ಎಂದು ಫಾರೆಕ್ಸ್ ವಹಿವಾಟುದಾರರು ತಿಳಿಸಿದ್ದಾರೆ.

ಕಳೆದ ಶುಕ್ರವಾರ ರೂಪಾಯಿ 26 ಪೈಸೆ ಚೇತರಿಕೆ ಕಂಡು ಡಾಲರ್‌ ವಿರುದ್ಧ 62.41 ರೂ.ನಲ್ಲಿ ಮುಕ್ತಾಯವಾಗಿತ್ತು. 

Share this Story:

Follow Webdunia kannada