ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಹೊಸ ಟಿವಿಎಸ್ NTORQ 125 ಸ್ಕೂಟರ್

ಗುರುಮೂರ್ತಿ
ಗುರುವಾರ, 8 ಫೆಬ್ರವರಿ 2018 (15:56 IST)
ಯುವಜನತೆಯನ್ನು ಗಮನದಲ್ಲಿರಿಸಿಕೊಂಡು ಟಿವಿಎಸ್ ಮೋಟಾರು ಸಂಸ್ಥೆ ತನ್ನ ಹೊಚ್ಚ ಹೊಸ NTORQ 125 ಸ್ಕೂಟರ್‌ನ್ನು ಬಿಡುಗಡೆ ಮಾಡಿದೆ. ಈ ಸ್ಕೂಟರ್ ಅನ್ನು ರೇಸಿಂಗ್ ಪೆಡಿಗ್ರಿಯನ್ನು ಆಧರಿಸಿ ತಯಾರಿಸಲಾಗಿದ್ದು ಮಾರುಕಟ್ಟೆಯಲ್ಲಿ ಸದ್ದುಮಾಡುತ್ತಿದೆ.
ಈ ಸ್ಕೂಟರ್ CVTi-REVV 124.8 cc ಎಂಜಿನ್ ಅನ್ನು ಹೊಂದಿದ್ದು 9.27 bhp @ 7500 rpm ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಸದ್ಯಕ್ಕೆ ಇದರ ಎಕ್ಸ್‌ಶೋ ರೂಂ ದರ 58750 ರೂಪಾಯಿ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ ಈಗಾಗಲೇ ಉತ್ಪಾದನೆಯನ್ನು ಪ್ರಾರಂಭಿಸಿ ಮಾರಾಟಕ್ಕೆ ಸಜ್ಜಾಗಿರುವ ಟಿವಿಎಸ್ ಸಂಸ್ಥೆ ವರ್ಷದೊಳಗೆ ಸುಮಾರು 2 ಲಕ್ಷಗಳಷ್ಚು ಸ್ಕೂಟರ್ ಅನ್ನು ಮಾರಾಟಮಾಡುವ ಗುರಿಯನ್ನು ಸಹ ಹೊಂದಿದೆ.
ಈಗಾಗಲೇ ಚೆನೈನಲ್ಲಿ ಈ ಸ್ಕೂಟರ್ ಅನ್ನು ಬಿಡುಗಡೆ ಮಾಡಿದ್ದು, ಟಿವಿಎಸ್ ಕಂಪನಿ ಅಧ್ಯಕ್ಷರು ಮತ್ತು ಸಿಇಓ ಆಗಿರುವ ಕೆಎನ್ ರಾಧಾಕೃಷ್ಣನ್ ಇದೊಂದು ಟಿವಿಎಸ್‌ನ ಆಕರ್ಷಕ ಆವೃತ್ತಿಯಾಗಿದ್ದು ಇದು ಯುವ ಪೀಳಿಗೆಯ ಆಸೆ ಆಕಾಂಕ್ಷೆಗಳನ್ನು ಗಮನದಲ್ಲಿರಿಸಿಕೊಂಡು ಈ ಸ್ಕೂಟರ್ ಅನ್ನು ವಿನ್ಯಾಸಪಡಿಸಲಾಗಿದೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಇದೇ ಮಾದರಿಯ ಹಲವು ಬೈಕುಗಳು ಈಗಾಗಲೇ ಮಾರುಕಟ್ಟೆಯಲ್ಲಿದ್ದರೂ ಇದು ತನ್ನ ವಿಶಿಷ್ಟವಾದ ವಿನ್ಯಾಸದಿಂದ ಮೊದಲ ನೋಟದಲ್ಲೇ ಗ್ರಾಹಕರ ಗಮನ ಸೆಳೆದಿದೆ ಎಂದೇ ಹೇಳಬಹುದಾಗಿದೆ. ಸದ್ಯ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಈ ಬೈಕ್ ತನ್ನ ಪ್ರತಿಸ್ಪರ್ಧಿ ಬೈಕುಗಳಿಗೆ ಟಕ್ಕರ್ ನೀಡುತ್ತಾ ಎನ್ನುವುದೇ ಸದ್ಯದ ಕುತೂಹಲವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನೂತನ ರಾಜ್ಯ ಮಾಹಿತಿ ಆಯುಕ್ತರಿಗೆ ಪ್ರಮಾಣ ವಚನ ಬೋಧಿಸಿದ ಥಾವರ್ ಚಂದ್ ಗೆಹ್ಲೋಟ್

ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಡಿ.ಕೆ. ಶಿವಕುಮಾರ್ ಬ್ಲ್ಯಾಕ್‍ಮೇಲ್: ಛಲವಾದಿ ನಾರಾಯಣಸ್ವಾಮಿ

ಪ್ರಚೋದನಕಾರಿ ಭಾಷಣ ಮಾಡಿದ ಕನ್ನೇರಿ ಕಾಡಸಿದ್ಧೇಶ್ವರ ಶ್ರೀಗಳಿಗೆ ಬಿಗ್‌ಶಾಕ್

ನಿಷೇಧ ಆರ್ ಎಸ್ಎಸ್ ಗೆ ಮಾತ್ರನಾ, ಬೇರೆ ಧರ್ಮಕ್ಕೂ ಇದೆಯಾ: ಪ್ರಿಯಾಂಕ್ ಖರ್ಗೆ ಹೇಳಿದ್ದೇನು

ಚಲಿಸುತ್ತಿದ್ದ ರೈಲ್ವಿನಲ್ಲಿ ಹೆರಿಗೆ ನೋವು, ಪ್ರಯಾಣಿಕನೊಬ್ಬನ ದೈರ್ಯಕ್ಕೆ ಭಾರೀ ಮೆಚ್ಚುಗೆ, Video

ಮುಂದಿನ ಸುದ್ದಿ
Show comments