Select Your Language

Notifications

webdunia
webdunia
webdunia
webdunia

ದೇಶದಲ್ಲಿರುವ ಕಪ್ಪು ಹಣ ಬಯಲಿಗೆಳೆಯಲು ಕ್ರಮಕ್ಕೆ ಸಲಹೆ

ದೇಶದಲ್ಲಿರುವ  ಕಪ್ಪು ಹಣ ಬಯಲಿಗೆಳೆಯಲು  ಕ್ರಮಕ್ಕೆ ಸಲಹೆ
ನವದೆಹಲಿ , ಸೋಮವಾರ, 25 ಮೇ 2015 (17:34 IST)
ಸ್ಥಳೀಯವಾಗಿ  ಕಪ್ಪು ಹಣ ಬಯಲಿಗೆಳೆಯಲು ಆದಾಯ ತೆರಿಗೆ ಇಲಾಖೆಯು ಕ್ರಮ ಕೈಗೊಳ್ಳಬೇಕು ಮತ್ತು ಪಾಂಝಿ ಯೋಜನೆಗಳು, ನಕಲಿ ಐಪಿಒ ಮತ್ತಿತರ ಹಣವನ್ನು ಸಂಗ್ರಹಿಸುವ ಅಕ್ರಮ ಮಾರ್ಗಗಳ ಬಗ್ಗೆ ಸೂಕ್ಷ್ಮ ನಿಗಾವಹಿಸಬೇಕು ಎಂದು ಸರ್ಕಾರ ಆದಾಯ ತೆರಿಗೆ ಇಲಾಖೆಗೆ ಸೂಚಿಸಿದೆ. 
 
ವಿದೇಶಗಳಲ್ಲಿ ಮತ್ತು ದೇಶದ ಒಳಗೆ ಕಪ್ಪು ಹಣದ ಪಿಡುಗಿನ ನಿವಾರಣೆಗೆ ಹೋರಾಟಕ್ಕೆ ಸರ್ಕಾರ ಸಂಕಲ್ಪಿಸಿದೆ ಎಂದು ಕಂದಾಯ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಹೇಳಿದರು. 
 
ವಿದೇಶದಲ್ಲಿರುವ ಕಪ್ಪು ಹಣವನ್ನು ನಿಭಾಯಿಸಲು ಸಂಸತ್ತು ಇತ್ತೀಚೆಗೆ ಕಪ್ಪು ಹಣ( ಬಹಿರಂಗ ಮಾಡದ ವಿದೇಶಿ ಆದಾಯ ಮತ್ತು ಆಸ್ತಿ) ಮತ್ತು ತೆರಿಗೆ ಮಸೂದೆ 2015ರ ಜಾರಿಯನ್ನು ಅಂಗೀಕರಿಸಿದೆ.
 
ಸ್ಥಳೀಯ ಕಪ್ಪು ಹಣಕ್ಕೆ ಸಮಾನ ಮಹತ್ವವನ್ನು ಎಲ್ಲಾ ಅಧಿಕಾರಿಗಳು ನೀಡುವುದು ಗುರಿಯಾಗಿದೆ. ಪಾಂಝಿ ಯೋಜನೆಗಳಿದ್ದರೆ ನಾವು ಎಚ್ಚರವಹಿಸಬೇಕು ಮತ್ತು ನಿಯಂತ್ರಣವಿಲ್ಲದ ಕೆಲವು ಯೋಜನೆಗಳು ದೇಶದ ಬಡವರನ್ನು ವಂಚಿಸುವುದಾಗಿದ್ದರೆ  ಎಚ್ಚರವಹಿಸಬೇಕು ಎಂದು ದಾಸ್ ಹೇಳಿದರು. 

Share this Story:

Follow Webdunia kannada