Select Your Language

Notifications

webdunia
webdunia
webdunia
webdunia

ಗೃಹಸಾಲದ ಮೇಲಿನ ಬಡ್ಡಿದರ ಕಡಿತಕ್ಕೆ ಏರಿದ ಧ್ವನಿ

ಗೃಹಸಾಲದ ಮೇಲಿನ ಬಡ್ಡಿದರ ಕಡಿತಕ್ಕೆ ಏರಿದ ಧ್ವನಿ
ನವದೆಹಲಿ , ಬುಧವಾರ, 4 ಮಾರ್ಚ್ 2015 (16:07 IST)
ರಿಸರ್ವ್ ಬ್ಯಾಂಕ್ ಎರಡು ತಿಂಗಳ ಅಂತರದಲ್ಲಿ ಎರಡನೇ ಬಾರಿ ರೆಪೊ ರೇಟ್ ಕಡಿತಮಾಡಿದ್ದರಿಂದ ಗೃಹ ಸಾಲ ಮತ್ತು ವಾಹನ ಸಾಲಗಳ ಮೇಲೆ ಬಡ್ಡಿದರ ಕಡಿತಕ್ಕೆ ಗಟ್ಟಿ ಧ್ವನಿ ಕೇಳಿಬಂದಿದೆ. ರೆಪೋ ದರವು ವಾಣಿಜ್ಯ ಬ್ಯಾಂಕ್‌ಗಳಿಗೆ ರಿಸರ್ವ್ ಬ್ಯಾಂಕ್ ನೀಡುವ ಸಾಲದ ದರ. ಈ ದರವನ್ನು 25 ಮೂಲಾಂಕಗಳಿಗೆ ಕಡಿತ ಮಾಡಿ ಶೇ. 7.5ಕ್ಕೆ ಇಳಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.

ಹಿಂದಿನ ಬಾರಿ ರೆಪೊ ದರ ಕಡಿತಮಾಡಿದಾಗ ಗ್ರಾಹಕರಿಗೆ ಕೆಲವೇ ಬ್ಯಾಂಕ್ ವರ್ಗಾಯಿಸಿವೆ. ಬ್ಯಾಂಕ್‌ಗಳು ಗ್ರಾಹಕರಿಗೆ ವಿಧಿಸುವ ಕನಿಷ್ಠ ದರವು ಅನೇಕ ವರ್ಷಗಳವರೆಗೆ ಬದಲಾವಣೆಯಾಗದೇ ಉಳಿದಿವೆ. ಸಾಲದ ಬಡ್ಡಿದರದಲ್ಲಿ ಶೀಘ್ರದಲ್ಲೇ ಕಡಿತದಿಂದ ಹೊಸ ಮನೆಗಳಿಗೆ ವಾಹನಗಳಿಗೆ ಬೇಡಿಕೆ ಹೆಚ್ಚುತ್ತದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಬಡ್ಡಿದರ ಕಡಿತದಿಂದ ಗ್ರಾಹಕರ ಕೈಯಲ್ಲಿ ಹೆಚ್ಚಿನ ಹಣ ಉಳಿದು ಆರ್ಥಿಕತೆಯ ಪುನಶ್ಚೇತನಕ್ಕೆ ನೆರವಾಗಬಹುದು. ಮೂಲ ದರ ಶೇ. 25 ಮೂಲಾಂಕ ಕಡಿತದಿಂದ 50 ಲಕ್ಷ ಗೃಹಸಾಲ ತೆಗೆದುಕೊಂಡವರು ತಿಂಗಳಿಗೆ 831 ರೂ.ಉಳಿತಾಯ ಮಾಡಲು ಸಾಧ್ಯವಾಗುತ್ತದೆ.

Share this Story:

Follow Webdunia kannada