Select Your Language

Notifications

webdunia
webdunia
webdunia
webdunia

ಸ್ವಿಸ್ ಬ್ಯಾಂಕ್ ಖಾತೆ : ಇಬ್ಬರು ಭಾರತೀಯ ಮಹಿಳೆಯರ ಹೆಸರು ಬಹಿರಂಗ

ಸ್ವಿಸ್ ಬ್ಯಾಂಕ್ ಖಾತೆ : ಇಬ್ಬರು ಭಾರತೀಯ ಮಹಿಳೆಯರ ಹೆಸರು ಬಹಿರಂಗ
ಬರ್ನ್ , ಮಂಗಳವಾರ, 26 ಮೇ 2015 (13:31 IST)
ಸ್ವಿಜರ್ಲೆಂಡ್ ತನ್ನ ಅಧಿಕೃತ ಗೆಜೆಟ್‌ನಲ್ಲಿ ಬಹಿರಂಗಪಡಿಸಿದ ಸ್ವಿಸ್ ಬ್ಯಾಂಕ್ ಖಾತೆ ಹೊಂದಿರುವ ಅನೇಕ ಮಂದಿ ವಿದೇಶಿ ಪೌರರ ಹೆಸರುಗಳ ಪೈಕಿ ಇಬ್ಬರು ಭಾರತೀಯ ಮಹಿಳೆಯರ ಹೆಸರು ಕೂಡ ಕಾಣಿಸಿಕೊಂಡಿದೆ..ಈ ಹೆಸರುಗಳನ್ನು ಬಹಿರಂಗ ಮಾಡಿದ ಸ್ವಿಸ್ ಫೆಡರಲ್ ತೆರಿಗೆ ಆಡಳಿತವು,   ಭಾರತದ ಅಧಿಕಾರಿಗಳೊಂದಿಗೆ ಈ ವಿವರಗಳನ್ನು ಹಂಚಿಕೊಳ್ಳುವುದು ಅವರಿಗೆ ಇಷ್ಟವಿಲ್ಲವಾದರೆ ಈ ಕುರಿತು ಫೆಡರಿಲ್ ಆಡಳಿತ ಕೋರ್ಟ್ ಎದುರು 30 ದಿನಗಳೊಳಗೆ ಮೇಲ್ಮನವಿ ಸಲ್ಲಿಸುವಂತೆ ಸೂಚಿಸಿದೆ. 
 
ಆದಾಗ್ಯೂ ಅವರ ಜನ್ಮ ದಿನಾಂಕ ಬಿಟ್ಟರೆ ಇಬ್ಬರು ಭಾರತೀಯ ಪೌರರಾದ ಸ್ನೆಹ ಲತಾ ಸಾವ್‌ನಿ ಮತ್ತು ಸಂಗೀತಾ ಸಾವ್‌ನಿ ಅವರ ಇನ್ನಿತರ ವಿವರಗಳನ್ನು ಬಹಿರಂಗ ಮಾಡಲಾಗಿಲ್ಲ. 
 
ಬ್ರಿಟಿಷ್, ಸ್ಪೇನ್ ಮತ್ತು ರಷ್ಯನ್ ಮಹಿಳೆಯರು ಸೇರಿದಂತೆ ಇತರೆ ವಿದೇಶಿ ಪೌರರ ಪ್ರಕರಣದಲ್ಲೂ ಇದೇ ರೀತಿಯಾಗಿದೆ. ಆದಾಗ್ಯೂ ಅಮೆರಿಕ ಮತ್ತು ಇಸ್ರೇಲಿ ಪೌರರ ಪ್ರಕರಣದಲ್ಲಿ ಅವರ ಪೂರ್ಣ ಹೆಸರನ್ನು ತಡೆಹಿಡಿಯಲಾಗಿದ್ದು, ಅವರ ಇನಿಷಿಯಲ್ ಮತ್ತು ಜನ್ಮದಿನಾಂಕದ ಮೂಲಕ ಗುರುತಿಸಲಾಗಿದೆ. 
 
ಸ್ವಿಸ್ ಫೆಡರಲ್ ಗೆಜೆಟ್‌ನಲ್ಲಿ ಇನ್ನೂ ಅಂತಹ ಅನೇಕ ಹೆಸರುಗಳನ್ನು ಪ್ರಕಟಿಸಲಾಗುತ್ತದೆಂದು ನಿರೀಕ್ಷಿಸಲಾಗಿದೆ. ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ಭಾರತೀಯರು ಅಕ್ರಮ ಕಪ್ಪು ಹಣವನ್ನು ಇರಿಸಿರುವ ವಿಷಯ ಭಾರತದಲ್ಲಿ ತೀವ್ರ ಚರ್ಚೆಗೆ ಆಸ್ಪದ ಕಲ್ಪಿಸಿದೆ.  ಭಾರತ ಸರ್ಕಾರ ಶಂಕಿತ ತೆರಿಗೆ ವಂಚಕರ ಮಾಹಿತಿ ನೀಡುವಂತೆ ಸ್ವಿಸ್ ಅಧಿಕಾರಿಗಳಿಗೆ ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿದೆ. 

Share this Story:

Follow Webdunia kannada