Select Your Language

Notifications

webdunia
webdunia
webdunia
webdunia

ಡೆಲಿವರಿ ತಡವಾದರೆ...ಶೇ.100ರಷ್ಟು ಕ್ಯಾಶ್‌ಬ್ಯಾಕ್

ಡೆಲಿವರಿ ತಡವಾದರೆ...ಶೇ.100ರಷ್ಟು ಕ್ಯಾಶ್‌ಬ್ಯಾಕ್
New Delhi , ಶನಿವಾರ, 31 ಡಿಸೆಂಬರ್ 2016 (09:56 IST)
ಪ್ರಮುಖ ಆನ್‍ಲೈನ್ ಫುಡ್ ಡೆಲಿವರಿ ಸಂಸ್ಥೆ ಸ್ವಿಗ್ಗಿ ಹೊಸ ವರ್ಷಕ್ಕೆ ವಿಶೇಷ ಉಡುಗೊರೆಯನ್ನು ಪ್ರಕಟಿಸಿದೆ. ಸ್ವಿಗ್ಗಿ ಮೊಬೈಲ್ ಆಪ್ ಅಥವಾ ವೆಬ್‌ಸೈಟ್ ಮೂಲಕ ಡಿಸೆಂಬರ್ 31, ಜನವರಿ 1ರಂದು ಊಟ ಆರ್ಡರ್ ಮಾಡಿದ ಗ್ರಾಹಕರನ್ನು ಸಮಯಕ್ಕೆ ಸರಿಯಾಗಿ ತಲುಪದಿದ್ದರೆ ಶೇ.100ರಷ್ಟು ಕ್ಯಾಶ್‌ಬ್ಯಾಕ್ ಕೊಡುವುದಾಗಿ ಪ್ರಕಟಿಸಿದೆ.
 
ದೇಶದ ಎಂಟು ನಗರಗಳಲ್ಲಿ 1200 ರೆಸ್ಟೋರೆಂಟ್‍ಗಳಲ್ಲಿ ತಮ್ಮ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ ಎಂದು ಸ್ವಿಗ್ಗಿ ಮಾರ್ಕೆಟಿಂಗ್ ಪ್ರತಿನಿಧಿ ತಿಳಿಸಿದ್ದಾರೆ. ಆರ್ಡರ್‌ಗಳು ಕಡಿಮೆ ಇರುವ ರೆಸ್ಟೋರೆಂಟ್‍ಗಳನ್ನು ಗುರುತಿಸಿ ಅವಕ್ಕೆ ’ಆನ್‍ಟೈಮ್’ ಎಂಬ ಲೇಬಲ್ ಹಾಕಿರುವುದಾಗಿ ತಿಳಿಸಿದ್ದಾರೆ.
 
ಆನ್‌ಟೈಮ್ ಲೇಬಲ್ ಇರುವ ರೆಸ್ಟೋರೆಂಟ್‌ಗಳಲ್ಲಿ ಈ ಸೇವೆ ಲಭ್ಯವಿದೆ ಎಂದು ತಿಳಿಸಿದ್ದಾರೆ. 2014ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ ಅತಿಕಡಿಮೆ ಅವಧಿಯಲ್ಲಿ ಉನ್ನತ ಸ್ಥಾನ ತಲುಪಿತು. ಇನ್ಯಾಕೆ ತಡ ಇಂದೇ ಆನ್‍ಲೈನ್‍ನಲ್ಲಿ ಊಟ ಆರ್ಡರ್ ಮಾಡಿ. ಹೊಸ ವರ್ಷ ಎಂಜಾಯ್ ಮಾಡಿ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ತಯಾರಾಗಲಿದೆ ಆಪಲ್ ’ಐಫೋನ್’