Select Your Language

Notifications

webdunia
webdunia
webdunia
webdunia

ಕೇವಲ 39 ನಿಮಿಷದಲ್ಲಿ ಮಾರಾಟವಾದ ಜಿಯೋಮಿ ಎಮ್‌‌‌ಐ3

ಕೇವಲ 39 ನಿಮಿಷದಲ್ಲಿ ಮಾರಾಟವಾದ ಜಿಯೋಮಿ ಎಮ್‌‌‌ಐ3
ನವದೆಹಲಿ , ಬುಧವಾರ, 23 ಜುಲೈ 2014 (18:33 IST)
ಚೀನಾದ ಕಂಪೆನಿ ಜಿಯೋಮಿ ಅಧ್ಬುತ್ ಸ್ಮಾರ್ಟ್‌‌‌ಫೋನ್‌ ಎಮ್‌‌‌ಐ3 ಗ್ರಾಹಕರ ಕೈಗೆ ನೀಡಿದೆ. ಕಳೆದ ವಾರ ಕಂಪೆನಿ ಈ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿತ್ತು ಮತ್ತು ಇದರ ಬೆಲೆ 13,999 ರೂಪಾಯಿಗಳಿಷ್ಟಿತ್ತು.  
 
ಮೊದಲೇ ಫ್ಲಿಪ್‌‌ಕಾರ್ಟ್‌‌ನ ಗ್ರಾಹಕರು ಮತ್ತು ಇತರ ಗ್ರಾಹಕರು ಇದನ್ನು ಖರೀಧಿ ಮಾಡುವ ಉತ್ಸುಕತೆ ಹೊಂದಿದ್ದರು. ಈಗ ಈ ಜನರಿಗಾಗಿ ಮಾರಾಟ ಪ್ರಾರಂಭವಾಗಿದೆ. ಜುಲೈ 21 ರವರೆಗೆ ಬುಕ್ಕಿಂಗ್‌‌ ಮಾಡಿದವರಿಗಾಗಿ ಮಾರಾಟ ಪ್ರಾರಂಭವಾಗಿದೆ. ಜಿಯೋಮಿ ಮೊದಲೇ ತಿಳಿಸಿದ ಪ್ರಕಾರ ಈ ಸ್ಮಾರ್ಟ್‌‌ಫೋನ್‌‌‌‌ನ ಸ್ಟಾಕ್‌ ಕಡಿಮೆ ಇವೆ. ನಿನ್ನೆಯವರೆಗೆ ಒಂದು ಲಕ್ಷ ಜನರು ಇಂದಿನ ಸೆಲ್‌‌ಗಾಗಿ ರಿಜಿಸ್ಟರ್‌‌ ಮಾಡಿದ್ದರು.
 
ಎಮ್‌‌ಐ3 ಯ ಎಲ್ಲಾ ಸ್ಟಾಕ್‌ ಕೇವಲ 38ನಿಮಿಷ ಮತ್ತು 50 ಸೆಕೆಂಡ್‌ನಲ್ಲಿ ಮಾರಾಟವಾಗಿವೆ ಎಂದು ‌ ಕಂಪೆನಿ ಕೆಲ ಸಮಯದ ಮೊದಲೆ ಟ್ವಿಟ್‌ ಮಾಡಿತ್ತು. ಕೆಲ ಗ್ರಾಹಕರು ವೆಬ್‌‌‌ಸೈಟ್‌‌‌ನಲ್ಲಿ ಈ ಸ್ಮಾರ್ಟ್‌‌ಫೋನ್‌ ಖರೀಧಿಸುವಲ್ಲಿ ಅಸಮರ್ಥರಾಗಿದ್ದಾರೆ, ಏಕೆಂದರೆ ವೆಬ್‌‌ಸೈಟ್‌‌‌‌ಮೇಲೆ ಬಹಳಷ್ಟು ಒತ್ತಡ ಇತ್ತು. ಕಂಪೆನಿ ಗ್ರಾಹಕರಿಗಾಗಿ ಮತ್ತೊಂದು ಬಾರಿ ರಿಜಿಸ್ಟೆಶನ್‌ ಪ್ರಾರಂಭ ಮಾಡಿದೆ.  
 
ಇದು ಜುಲೈ 28ರವರೆಗೆ ಇರುವುದು. ಮುಂದಿನ ಮಾರಾಟ ಜುಲೈ 29ಕ್ಕೆ ಇರಲಿದೆ. ಈ ಬಾರಿ ಕೂಡ ಸೀಮಿತ ಸ್ಟಾಕ್‌‌‌ಗಳಿವೆ ಎಂದು ಕಂಪೆನಿ ತಿಳಿಸಿದೆ.

Share this Story:

Follow Webdunia kannada