Select Your Language

Notifications

webdunia
webdunia
webdunia
webdunia

ಸ್ನಾಪ್ ಡೀಲ್ ’ವೆಲ್‌ಕಮ್ 2017 ಸೇಲ್’ ಆಫರ್!

ಸ್ನಾಪ್ ಡೀಲ್ ’ವೆಲ್‌ಕಮ್ 2017 ಸೇಲ್’ ಆಫರ್!
New Delhi , ಭಾನುವಾರ, 8 ಜನವರಿ 2017 (14:21 IST)
ಆನ್‌ಲೈನ್ ರಿಟೇಲ್ ದಿಗ್ಗಜ ಕಂಪನಿ ಸ್ನಾಪ್‌ಡೀಲ್ ಎರಡು ದಿನಗಳ ವಿಶೇಷ ಮಾರಾಟ ಆರಂಭಿಸಿದೆ. ವೆಲ್‍ಕಮ್ 2017 ಹೆಸರಿನೊಂದಿಗೆ ಜನವರಿ 8, 9ರಂದು ಬಟ್ಟೆಗಳು, ಮೊಬೈಲ್ ಫೋನ್, ಗೃಹೋಪಕರಣ, ಇತರೆ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಸುಮಾರು ಶೇ.70ರಷ್ಟು ರಿಯಾಯಿತಿ ಪ್ರಕಟಿಸಿದೆ.
 
ಮುಖ್ಯವಾಗಿ ಮೊಬೈಲ್ ಫೋನ್ ವಿಭಾಗದಲ್ಲಿ ರೆಡ್ ಮಿ ನೋಟ್ 3 ರೂ.11,999, ಸ್ಯಾಂಸಂಗ್ ಜೆ2 ಪ್ರೋ (16ಜಿಬಿ) ರೂ.9,490, ಐಫೋನ್ 5ಎಸ್ (16ಜಿಬಿ) ರೂ.17,499, ಐಫೋನ್ 7 (32ಜಿಬಿ) ರೂ.52,999, ಐಫೋನ್ 6ಎಸ್ (32 ಜಿಬಿ) ರೂ.43,999ಕ್ಕೆ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದೆ.
 
ಇದಿಷ್ಟೇ ಅಲ್ಲದೆ ಬಳಕೆದಾರರು ಎಸ್‍ಬಿಐ ಕಾರ್ಡಿನ ಮೇಲೆ ಶೇ.15ರವರೆಗೂ ಹೆಚ್ಚುವರಿ ರಿಯಾಯಿತಿ ಸಿಗಲಿದೆ. ಇದರ ಜೊತೆಗೆ ಎಲ್ಲಾ ಪ್ರಮುಖ ಕ್ರೆಡಿಟ್ ಕಾರ್ಡುಗಳ ಮೇಲೆ ಬಡ್ಡಿ ರಹಿತ ಇಎಂಐ ಸೌಲಭ್ಯವನ್ನು ಕಲ್ಪಿಸುತ್ತಿದೆ. ವಿವಿಧ ಉತ್ಪನ್ನಗಳ ಮೇಲೆ ನಿರ್ದೇಶಿತ ಷರತ್ತುಗಳು ಅನ್ವಯಿಸುತ್ತವೆ ಎಂದು ತಿಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಧ್ಯ ರಾತ್ರಿ ಯುವತಿಯರ ಓಡಾಟವೇ ಲೈಂಗಿಕ ದೌರ್ಜನ್ಯಕ್ಕೆ ಕಾರಣ: ಮಾತೇ ಮಹಾದೇವಿ