Select Your Language

Notifications

webdunia
webdunia
webdunia
webdunia

ಭಾರತದ ತಂಡದ ಡ್ರೆಸ್ಸಿಂಗ್ ರೂಂನಲ್ಲಿ ಸಿಡಿಮಿಡಿಯ ವಾತಾವರಣ

ಭಾರತದ ತಂಡದ ಡ್ರೆಸ್ಸಿಂಗ್ ರೂಂನಲ್ಲಿ ಸಿಡಿಮಿಡಿಯ ವಾತಾವರಣ
ಬ್ರಿಸ್ಬೇನ್ , ಶನಿವಾರ, 20 ಡಿಸೆಂಬರ್ 2014 (17:46 IST)
ಬ್ರಿಸ್ಬೇನ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಎರಡನೇ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಭಾರತದ ಡ್ರೆಸಿಂಗ್ ರೂಂನಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿತ್ತು. ಶನಿವಾರದ ಬ್ಯಾಟಿಂಗ್ ಕುಸಿತಕ್ಕೆ ಮುಂಚೆ ವಿರಾಟ್ ಕೊಹ್ಲಿ ಜೊತೆ ಸಂಪರ್ಕದ ಕೊರತೆಯೇ ಈ ಅಸಹನೆಗೆ ಕಾರಣವೆಂದು ಹೇಳಲಾಗಿದೆ.
 
ಶಿಖರ್ ಧವನ್ ಅವರು ನೆಟ್ ಅಭ್ಯಾಸದ ಸಂದರ್ಭದಲ್ಲಿ ಮುಂಗೈಗೆ ಗಾಯಗೊಂಡು ಆಟ ಆರಂಭವಾಗುವುದಕ್ಕೆ ಕೆಲವೇ ಕ್ಷಣಗಳ ಮುಂಚಿತವಾಗಿ ಬಹಿರಂಗಮಾಡಿದ್ದರಿಂದ ಡ್ರೆಸ್ಸಿಂಗ್ ರೂಂನಲ್ಲಿ ಈ ನಾಟಕೀಯ ವಿದ್ಯಮಾನ ನಡೆಯಿತು. ಪ್ರವಾಸಿ ತಂಡ ಆಡಲಿಳಿಯುವುದಕ್ಕೆ ಕೇವಲ 7 ನಿಮಿಷಗಳ ಮುಂಚೆ ವಿರಾಟ್ ಕೊಹ್ಲಿಗೆ ಧವನ್ ಬದಲಿಗೆ ಆಡುವಂತೆ ಸೂಚಿಸಲಾಯಿತು.  

ಈ ಕುರಿತು ಧೋನಿ ಕೂಡ ಬಾಯಿಬಿಟ್ಟಿದ್ದು, ಮೊದಲ ಸೆಷನ್‌ನಲ್ಲಿ ಡ್ರೆಸ್ಗಿಂಗ್ ರೂಂನಲ್ಲಿ ಸಂಪರ್ಕದ ಕೊರತೆಯಿಂದ ಶಿಖರ್ ಬ್ಯಾಟಿಂಗ್ ಆಡುತ್ತಾರೋ ಅಥವಾ ಕೊಹ್ಲಿ ಆಡುತ್ತಾರೋ ಎಂದು ತಿಳಿಯಲಿಲ್ಲ. ನಾವು ಆ ಪರಿಸ್ಥಿತಿ
ಯನ್ನು ಸರಿಯಾಗಿ ನಿರ್ವಹಿಸಲಿಲ್ಲ ಎಂದು ಪಂದ್ಯದ ನಂತರ ಧೋನಿ ಪ್ರತಿಕ್ರಿಯಿಸಿದ್ದಾರೆ. 

Share this Story:

Follow Webdunia kannada