ಇದೇನಿದು, ಹೀಗೇಕೆ ಅನ್ನೋ ಪ್ರಶ್ನೆ, ಗೊಂದಲ ಈಗಾಗಲೇ ನಿಮ್ಮನ್ನು ಸತಾಯಿಸಲು ಪ್ರಾರಂಭಿಸಿರಬಹುದು. ಹೌದು ಒಂದು ನಿರ್ದಿಷ್ಟ ಬೆಕ್ಕಿನ ಫೋಟೋವನ್ನು ಹಂಚಿದರೆ ತತ್‌ಕ್ಷಣ ನಿಮ್ಮ ಖಾತೆ ಡಿಎಕ್ಟಿವೇಟ್ ಆಗಬಹುದು ಎಂಬ ಪೋಸ್ಟ್ ಫೇಸ್‌ಬುಕ್‌ನಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.
ವರದಿಯೊಂದರ ಪ್ರಕಾರ ಈ ಫೋಟೋವನ್ನು ಹಂಚಿದ ಕೂಡಲೇ ಅನೇಕ ಜನರ ಫೇಸ್‌ಬುಕ್ ಖಾತೆ ತತ್‌ಕ್ಷಣಕ್ಕೆ ಡಿಲಿಟ್ ಆಗಿದೆ. ಸೂಟ್ ಧರಿಸಿದ ಬೆಕ್ಕಿನ ಫೋಟೋವೇ ಖಾತೆ ನಿಷ್ಕ್ರಿಯವಾಗಲು ಕಾರಣವಾಗುತ್ತಿದೆ. 24 ರಿಂದ 48 ಗಂಟೆಗಳ ಬಳಿಕ ಡಿಲಿಟ್ ಆದ ಖಾತೆ ಮತ್ತೆ ರಿಸ್ಟೋರ್ ಆಗುತ್ತಿದೆ.
ನಿಮ್ಮ ಫೇಸ್‌ಬುಕ್ ಖಾತೆ ನಿಷ್ಕ್ರಿಯವಾಗದೆ ಉಳಿಯಬೇಕಂದಿದ್ದರೆ ಅಪರಿಚಿತ ಮೂಲಗಳ ಯಾವುದೇ ಫೋಟೋ, ಅದರಲ್ಲೂ ಸೂಟ್ ಧರಿಸಿರುವ ಬೆಕ್ಕಿನ ಫೋಟೋವನ್ನು ಮಾತ್ರ ಹಂಚಿಕೊಳ್ಳಲೇ ಬೇಡಿ ಎಂದು ಇನ್ನೊಂದು ವರದಿ ಎಚ್ಚರಿಸಿದೆ.
ಈ ರೀತಿಯಾಗಲು ಕಾರಣವೇನೆಂದು ಇನ್ನು ತಿಳಿದು ಬಂದಿಲ್ಲ. ಆದರೆ ಇದನ್ನು ಪ್ರಯತ್ನಿಸಿ ನೋಡಿದಾಗ ಅಂತಹದ್ದೇನೂ ಆಗಿಲ್ಲ ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ