Webdunia - Bharat's app for daily news and videos

Install App

ಬಹಿರಂಗಪಡಿಸದ ಕಪ್ಪು ಹಣ ಘೋಷಣೆಗೆ ಸೆ.30 ಗಡುವು

Webdunia
ಗುರುವಾರ, 2 ಜುಲೈ 2015 (13:52 IST)
ಹಣಕಾಸು ಸಚಿವಾಲಯವು ಬಹಿರಂಗಪಡಿಸದಿರುವ ವಿದೇಶಿ ಆದಾಯ ಅಥವಾ ಕಪ್ಪು ಹಣ ಘೋಷಿಸಲು ಸೆಪ್ಟೆಂಬರ್ 30ರವರೆಗೆ ಗಡುವನ್ನು ವಿಸ್ತರಿಸಿದೆ. ಆದಾಗ್ಯೂ, ಕಂಪ್ಲಯೇನ್ಸ್ ವಿಂಡೊದಲ್ಲಿ ಘೋಷಿಸಿದ ಆಸ್ತಿಯ ಶೇ. 30ರಷ್ಟು ತೆರಿಗೆ ಮತ್ತು ಅಷ್ಟೇ ಮೊತ್ತದ ದಂಡವನ್ನು ಕಟ್ಟಬೇಕಾಗುತ್ತದೆ ಮತ್ತು ಅದನ್ನು ಡಿ.31ರೊಳಗೆ ಪಾವತಿ ಮಾಡಬೇಕಾಗುತ್ತದೆ.

ಸಂಸತ್ತಿನಲ್ಲಿ ಅಂಗೀಕಾರವಾದ ಮತ್ತು 2016ರ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಕಪ್ಪು ಹಣದ ಹೊಸ ಕಾನೂನಿನ ಪ್ರಕಾರ,  ದಂಡವು ಶೇ. 90ರಷ್ಟು ಹೆಚ್ಚಾಗಿರುತ್ತದೆ ಮತ್ತು ಅದರ ಜೊತೆಗೆ ಬಹಿರಂಗಪಡಿಸದ ವಿದೇಶಿ ಆಸ್ತಿಗಳ ಮೇಲೆ ಶೇ. 30ರಷ್ಟು ತೆರಿಗೆ ಇರುತ್ತದೆ. ಇಂತಹ ವ್ಯಕ್ತಿಗಳು 10 ವರ್ಷಗಳ ಜೈಲುಶಿಕ್ಷೆವರೆಗೆ ಕ್ರಿಮಿನಲ್ ಕ್ರಮವನ್ನು ಎದುರಿಸಬೇಕಾಗುತ್ತದೆ. 
 
ಕೇಂದ್ರ ಸರ್ಕಾರವು 2015ರ ಸೆಪ್ಟೆಂಬರ್ 30 ರಂದು ಅಥವಾ ಅದಕ್ಕಿಂತ ಮುಂಚಿತವಾಗಿ ಭಾರತದ ಹೊರಗಿರುವ ಬಹಿರಂಗಪಡಿಸದ ಆಸ್ತಿಯನ್ನು ಘೋಷಿಸಬೇಕೆಂದು ಸೂಚಿಸಿದೆ ಎಂದು ಹೇಳಿಕೆ ತಿಳಿಸಿದೆ. 
 
ಈ ಕಾಯ್ದೆಯಲ್ಲಿ ಬಹಿರಂಗಪಡಿಸಿರದ ವಿದೇಶಿ ಆದಾಯ ಮತ್ತು ಆಸ್ತಿಗೆ ಪ್ರತ್ಯೇಕ ತೆರಿಗೆ ವಿಧಿಸಲು ಅವಕಾಶ ಕಲ್ಪಿಸಿದೆ.  ಕಾಯ್ದೆಯ ಉಲ್ಲಂಘನೆಗೆ ಕಠಿಣ ದಂಡಗಳು ಮತ್ತು ಕ್ರಮ ಸೇರಿದಂತೆ 10 ವರ್ಷಗಳವರೆಗೆ ಕಠಿಣ ಜೈಲುಶಿಕ್ಷೆಯನ್ನು ವಿಧಿಸಬಹುದಾಗಿದ್ದು, ತೆರಿಗೆಯ ಮೂರು ಪಟ್ಟು ದಂಡವನ್ನು ಹೇರಬಹುದಾಗಿದೆ ಎಂದು ಹೇಳಿಕೆ ತಿಳಿಸಿದೆ. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments