Select Your Language

Notifications

webdunia
webdunia
webdunia
webdunia

ಮಾರ್ಚ್ 2015ರೊಳಗೆ 50ಲಕ್ಷ ಸರಕಾರಿ ಅಧಿಕಾರಿಗಳಿಗೆ ಸುರಕ್ಷಿತ ಇ-ಮೇಲ್

ಮಾರ್ಚ್ 2015ರೊಳಗೆ 50ಲಕ್ಷ ಸರಕಾರಿ ಅಧಿಕಾರಿಗಳಿಗೆ ಸುರಕ್ಷಿತ ಇ-ಮೇಲ್
ನವದೆಹಲಿ , ಸೋಮವಾರ, 29 ಸೆಪ್ಟಂಬರ್ 2014 (11:06 IST)
ಕೇಂದ್ರ ಸರಕಾರ ಅಭಿವೃದ್ಧಿ ಪಡಿಸುತ್ತಿರುವ ಸುರಕ್ಷಿತ ಇ-ಮೇಲ್ ವ್ಯವಸ್ಥೆ 2015ರ ಮಾರ್ಚ್ ವೇಳೆಗೆ ಸಂಪೂರ್ಣ ಸಿದ್ಧವಾಗಲಿದೆ.ಭಾರತೀಯ ಇಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಮೊದಲ ಹಂತವಾಗಿ ಸುಮಾರು 50 ಲಕ್ಷ ಸರಕಾರಿ ನೌಕರರಿಗೆ ಇ-ಮೇಲ್ ವ್ಯವಸ್ಥೆ ನೀಡಲು ನಿರ್ಧರಿಸಿದೆ.

ಈ ಉದ್ದೇಶಕ್ಕಾಗಿ ಈಗಾಗಲೇ ಬಜೆಟ್‌ನಲ್ಲಿ 100 ಕೋಟಿ ರೂ. ಮೀಸಲಿಡಲಾಗಿದೆ. ಸರಕಾರಿ ಇ-ಮೇಲ್ ವ್ಯವಸ್ಥೆ ಜಾರಿಯಾಗುತ್ತಿದ್ದಂತೆ ಎಲ್ಲ ಸರಕಾರಿ ಕಚೇರಿಯ ಜಿ-ಮೇಲ್, ಯಾಹೂ ಮೇಲ್ ಹಾಗೂ ಇನ್ನಿತರ ಖಾಸಗಿ ಮೇಲ್‌ಗಳನ್ನು ನಿಷೇಧಿಸಲಾಗುತ್ತದೆ.
 
ಸರಕಾರಿ ಕಚೇರಿಯಲ್ಲಿ ಈ ವ್ಯವಸ್ಥೆ ಜಾರಿಯಾದ ನಂತರ ಸಾರ್ವಜನಿಕ ಕ್ಷೇತ್ರಗಳಿಗೂ ಈ ಸೇವೆಯನ್ನು ವಿಸ್ತರಿಸುವ ಯೋಜನೆಯಿದೆ. ಅಮೇರಿಕ ಗುಪ್ತಚರ ಇಲಾಖೆ ಇ-ಮೇಲ್ ಮುಖಾಂತರ ಭಾರತೀಯ ಗೌಪ್ಯ ಮಾಹಿತಿ ಹಾಗೂ ಇನ್ನಿತರ ವಿಷಯಗಳನ್ನು ಕಲೆಹಾಕುತ್ತಿದೆ ಎಂಬ ಮಾಹಿತಿಗಳು ಬಹಿರಂಗವಾಗುತ್ತಿವೆ. ಅಲ್ಲದೆ ಈ ಕುರಿತು ಸಾಕಷ್ಟು ವಿಚಾರಗಳು ನಡೆಯುತ್ತಿವೆ. ಇದರಿಂದಾಗಿ ಸರಕಾರಿ ಕಡತಗಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಕಾಡುತ್ತಿದೆ. ಇದಕ್ಕೆಲ್ಲ ಪರಿಹಾರವಾಗಿ ಕೇಂದ್ರ ಸರಕಾರ ಸುರಕ್ಷಿತವಾದ ಹ್ಯಾಕ್ ಮಾಡಲಾಗದ ಇ-ಮೇಲ್ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. 

Share this Story:

Follow Webdunia kannada