Select Your Language

Notifications

webdunia
webdunia
webdunia
webdunia

ದುಬೈಗೆ ಬೇಡೆವಾಯಿತು ಭಾರತದ ಮೆಣಸಿನಕಾಯಿ

ದುಬೈಗೆ ಬೇಡೆವಾಯಿತು ಭಾರತದ ಮೆಣಸಿನಕಾಯಿ
ದುಬೈ , ಭಾನುವಾರ, 11 ಮೇ 2014 (15:53 IST)
ಅದೇಕೋ ಗೊತ್ತಿಲ್ಲ ವಿದೇಶಿಯರಿಗೆ ಭಾರತೀಯ ವಸ್ತುಗಳು ಬೇಡವಾಗುತ್ತಿವೆ. ಭಾರತ ಮಾವು 
ಯೂರೋಪ ಯುನಿಯನ್‌‌ಗೆ ಬೇಡವಾಗಿದ ಸುದ್ದಿ ನೀವು ಓದಿದ್ದಿರಿ,. ಇದೀಗ ಸೌದಿ ಅರಬ್‌‌ ರಾಷ್ಟ್ರಕ್ಕೆ 
ಭಾರತದ ಮೆಣಸಿನಕಾಯಿ ಬೇಡವಂತೆ. ತರಕಾರಿಗಳಲ್ಲಿ ಐದನೇ ಅತಿ ಹೆಚ್ಚಿನ ಪ್ರಮಾಣದ 
ಮೆಣಸಿನಕಾಯಿ ಸೌದಿ ಅರೇಬಿಯಾಗೆ ರಪ್ತಾಗುತ್ತದೆ. 
 
ಸೌದಿ ಅರೇಬಿಯಾದ ಕೃಷಿ ಸಚಿವಾಲಯ ಮೇ 30ರಿಂದ ಭಾರತದ ಮೆಣಸಿನಕಾಯಿಗೆ ನಿಷೇಧ ಹೇರಿದೆ 
ಎಂದು ಭಾರತದ ರಾಯಭಾರಿ ಕಚೇರಿಯ ಅಧಿಕಾರಿ ಸುರಿಂದರ್‌ ಭಗತ್‌ ತಿಳಿಸಿದ್ದಾರೆ. ಈ ವಿಷಯದ 
ಕುರಿತು ಭಾರತದ ಅಧಿಕಾರಿಗಳು ಸೌದಿ ಅರೇಬಿಯಾದ  ಅಧಿಕಾರಗಳೊಂದಿಗೆ ಸಂಪರ್ಕದಲ್ಲಿದೆ ಎಂದು 
ತಿಳಿಸಿದ್ದಾರೆ. 
 
ಭಾರತೀಯ ಶಿಪ್‌ಮೆಂಟ್ನ ಸೈಫಲ್‌ ಟೆಸ್ಟಿಂಗ್‌ ನಂತರ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು 
ಸೌದಿ ಅರೇಬಿಯಾದ ಕೃಷಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಟೆಸ್ಟಿಂಗ್‌‌ನಲ್ಲಿ ಭಾರತದ 
ಮೆಣಸಿನಕಾಯಿಯಲ್ಲಿ ಕೀಟನಾಶಕ ಸತ್ವ ಹೆಚ್ಚಿಗಿತ್ತು ಎಂದು ತಿಳಿದು ಬಂದಿದೆ. 

Share this Story:

Follow Webdunia kannada