Select Your Language

Notifications

webdunia
webdunia
webdunia
webdunia

ಗ್ಯಾಲಕ್ಸಿ ನೋಟ್ 7 ವೈಫಲ್ಯಕ್ಕೆ ಕಾರಣ ಗೊತ್ತಾಗಿದೆ!

ಗ್ಯಾಲಕ್ಸಿ ನೋಟ್ 7 ವೈಫಲ್ಯಕ್ಕೆ ಕಾರಣ ಗೊತ್ತಾಗಿದೆ!
New Delhi , ಮಂಗಳವಾರ, 17 ಜನವರಿ 2017 (10:31 IST)
ಅಗ್ರಶ್ರೇಣಿ ಮೊಬೈಲ್ ತಯಾರಿಕಾ ಸಂಸ್ಥೆ ಸ್ಯಾಂಸಂಗ್ ಕಂಪೆನಿಯನ್ನು ನಷ್ಟಗಳಲ್ಲಿ ಮುಳುಗಿಸಿದ ಗ್ಯಾಲಕ್ಸಿ ನೋಟ್ 7 ಸಮಸ್ಯೆಗೆ ಕಾರಣವನ್ನು ಕಡೆಗೂ ಪತ್ತೆಹಚ್ಚಲಾಗಿದೆ. ನೋಟ್ 7 ಸ್ಫೋಟಗೊಳ್ಳಲು ಪ್ರಮುಖ ಕಾರಣ ಅದರ ಬ್ಯಾಟರಿ ಎಂದು ಕಂಪೆನಿ ನಿರ್ವಹಿಸಿದ ಆಂತರಿಕ ವಿಚಾರಣೆಯಲ್ಲಿ ಬಯಲಾಗಿದೆ.
 
ಆ ಸಂಸ್ಥೆಯ ಅಧಿಕಾರಿ ವರ್ಗ ಈ ವಿಷಯವನ್ನು ತಿಳಿಸಿವೆ. ನೋಟ್ 7 ವೈಫಲ್ಯವನ್ನು ಅತಿದೊಡ್ಡ ಟೆಕ್ ವೈಫಲ್ಯವಾಗಿ ನಿಪುಣರು ಬಣ್ಣಿಸಿದ್ದಾರೆ. ಆದರೆ ಕಂಪೆನಿ ಮಾತ್ರ ಇದರ ಬಗ್ಗೆ ಅಳೆದುತೂಗಿ ಸ್ಪಂದಿಸಿದೆ. ನೋಟ್ 7 ವೈಫಲ್ಯಕ್ಕೆ ಕಾರಣಗಳನ್ನು ಸಂಪೂರ್ಣವಾಗಿ ಬಹಿರಂಗ ಪಡಿಸುವುದು ಕಷ್ಟ ಎಂದಿದೆ.
 
ಆದರೂ ವಿಚಾರಣೆಯ ವರದಿಯನ್ನು ಜನವರಿ 23ಕ್ಕೆ ಬಿಡುಗಡೆ ಮಾಡುತ್ತಿರುವುದಾಗಿ ಭಾವಿಸುತ್ತಿದ್ದಾರೆ. ಇದರ ಮುಂದಿನ ದಿನವೇ ಸ್ಯಾಂಸಂಗ್ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಲಿದ್ದಾರೆ. ಗೆಲ್ಯಾಕ್ಸಿ ಎಸ್ 8ನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸ್ಯಾಂಸಂಗ್ ಸಿದ್ಧವಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಆ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರಿ ರಿಯಾಯಿತಿ