Webdunia - Bharat's app for daily news and videos

Install App

ಸಾಮ್‌ಸುಂಗ್ ಗ್ಯಾಲಕ್ಸಿ ಜೆ3 ಕೇವಲ 8990 ರೂ.ಗಳಲ್ಲಿ ಲಭ್ಯ

Webdunia
ಗುರುವಾರ, 31 ಮಾರ್ಚ್ 2016 (16:32 IST)
ನವದೆಹಲಿ: ಸಾಮ್‌ಸುಂಗ್ ಸಂಸ್ಥೆ, ಗ್ಯಾಲೆಕ್ಸಿ ಜೆ3 ಸ್ಮಾರ್ಟ್‌ಪೋನ್ ಪರಿಚಯದೊಂದಿಗೆ ತನ್ನ ಉತ್ಪನ್ನಗಳನ್ನು ವಿಸ್ತರಿಸಿದೆ. ಈ ಆವೃತ್ತಿಯ ಸ್ಮಾರ್ಟ್‌ಪೋನ್ ಬೆಲೆ 8,990 ರೂಪಾಯಿ ಆಗಿದ್ದು, ಸ್ನಾಪ್‌ಡೀಲ್ ಆನ್‌ಲೈನ್ ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದು ಮೂಲಗಳು ತಿಳಿಸಿವೆ.
ಬಳಕೆದಾರರ ಪ್ರಯಾಣದ ರೀತಿಯನ್ನು ಬದಲಾಯಿಸಲು, ಈ ಸ್ಮಾರ್ಟ್‌ಪೋನ್ ಹೊಸ ವೈಶಿಷ್ಟ್ಯದ ಎಸ್-ಬೈಕ್ ಮೊಡ್ ಆಯ್ಕೆ ಒಳಗೊಂಡಿದೆ. ಎಸ್-ಬೈಕ್ ಮೊಡ್ ಆಯ್ಕೆ ಮಾಡಿದರೆ, ಬಳಕೆದಾರ ಬೈಕ್‌ನಲ್ಲಿ ಸಂಚಾರಿಸುವಾಗ ಕರೆ ಬಂದರೆ ನಂತರ ಕರೆ ಮಾಡಿ ಎಂದು ಸ್ವಯಂ ಚಾಲಿತವಾಗಿ ಮೆಸೆಜ್ ರವಾಣೆಯಾಗುತ್ತದೆ. ಇದರಿಂದ ಬಳಕೆದಾರರಿಗೆ ರಸ್ತೆಯತ್ತ ಗಮನ ಹರಿಸಲು ಸಹಾಯಕವಾಗಿದೆ. 
 
ಗ್ಯಾಲಾಕ್ಸಿ ಎಸ್‌-7 ಆವೃತ್ತಿಯ ಅಪ್‌ಡೇಟ್ ಬಿಡುಗಡೆ ಮಾಡಿದ ಸಾಮ್‌ಸುಂಗ್
 
ಸಾಮ್‌ಸುಂಗ್ ಗ್ಯಾಲಾಕ್ಸಿ ಜೆ-3 ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು, 5 ಇಂಚಿನ ಎಚ್‌ಡಿ ಡಿಸ್‌ಪ್ಲೇ ಜೊತೆಗೆ 1280*720 ಫಿಕ್ಸೆಲ್ ರೆಸಲ್ಯೂಶನ್ ಒಳಗೊಂಡಿದೆ. ಈ ಪೋನ್ 1 ಜಿಬಿ ರ್ಯಾಮ್ ಜೊತೆ 1.5ಜಿಎಚ್‌ಝಡ್ ಕ್ವಾಡ್ ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 410 ಪ್ರೊಸೆಸರ್ ಹೊಂದಿದೆ. 8 ಜಿಬಿ ಆಂತರಿಕ ಸ್ಟೋರೆಜ್ ಜೊತೆಗೆ ಬಾಹ್ಯವಾಗಿ 128 ಜಿಬಿ ಎಸ್‌ಡಿ ಕಾರ್ಡ್‌ನ್ನು ಬಳಸಬಹುದಾಗಿದೆ.
 
ಈ ಸ್ಮಾರ್ಟ್‌ಪೋನ್ ಡ್ಯುಯಲ್ ಸಿಮ್ ಕಾರ್ಡ್ ವ್ಯವಸ್ಥೆ ಹೊಂದಿದ್ದು, ಆಂಡ್ರಾಯ್ಡ್ 5.1 ಲಾಲಿಪಾಪ್ ಆಪರೇಟಿಂಗ್ ಸಿಸ್ಟಮ್ ಒಳಗೊಂಡಿದೆ. ಮತ್ತು 8 ಎಮ್‌ಪಿ ರೆಯರ್ ಕ್ಯಾಮೆರಾ ಮತ್ತು 5 ಎಮ್‌ಪಿ ಫ್ರಂಟ್-ಫೆಸಿಂಗ್ ಕ್ಯಾಮೆರಾ ಜೊತೆಗೆ 2,600 ಎಮ್‌ಎಎಚ್ ಬ್ಯಾಟರಿ ಹೊಂದಿದೆ. ಮತ್ತು 4ಜಿ, ಎಲ್‌ಟಿಇ, 3ಜಿ, ವೈಫೈ ಕನೆಕ್ಟಿವಿಟಿ ಆಯ್ಕೆಯನ್ನು ಸಹ ಹೊಂದಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments