Select Your Language

Notifications

webdunia
webdunia
webdunia
webdunia

ಫಾರೆಕ್ಸ್‌‌ : ರೂಪಾಯಿಯಲ್ಲಿ 32 ಪೈಸೆ ಚೇತರಿಕೆ

ಫಾರೆಕ್ಸ್‌‌ : ರೂಪಾಯಿಯಲ್ಲಿ 32 ಪೈಸೆ ಚೇತರಿಕೆ
ಮುಂಬೈ , ಸೋಮವಾರ, 19 ಮೇ 2014 (14:53 IST)
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಭರ್ಜರಿ ಗೆಲುವನ್ನು ಸಾಧಿಸಿದ ಹಿನ್ನಲೆಯಲ್ಲಿ ಉತ್ಸುಕರಾದ ಹೂಡುಕೆದಾರಿಂದ ವಿದೇಶಿ ಬಂಡವಾಳದ ಹರಿವು ಹೆಚ್ಚಾದ ಕಾರಣ ಫಾರೆಕ್ಸ್‌ ಮಾರುಕಟ್ಟೆಯಲ್ಲಿ ಇಂದಿನ ಪ್ರಾರಂಭಿಕ ವಹಿವಾಟುವಿನಲ್ಲಿ ಡಾಲರ್‌ ಎದುರು ರೂಪಾಯಿಯಲ್ಲಿ 32 ಪೈಸೆ ಚೇತರಿಕೆ ಕಂಡ ಕಾರಣ ಪ್ರತಿ ಡಾಲರ್‌‌ಗೆ 58.47 ರೂಪಾಯಿಗೆ ತಲುಪಿದೆ. ಫಾರೆಕ್ಸ್ ವಿಶ್ಲೇಷಕರ ಪ್ರಕಾರ ಬ್ಯಾಂಕ್‌ ಮತ್ತು ಆಯತಗಾರರಿಂದ ಡಾಲರ್‌ ಮಾರಾಟ ಹೆಚ್ಚಾದ ಕಾರಣ ಕೂಡ ರೂಪಾಯಿಯಲ್ಲಿ ಚೇತರಿಕೆ ಕಂಡು ಬಂದಿದೆ .
 
ಫಾರೆಕ್ಸ್‌ ಮಾರುಕಟ್ಟೆಯಲ್ಲಿ ಕಳೆದ ದಿನದ ವಹಿವಾಟುವಿನಲ್ಲಿ ಡಾಲರ್‌ ಎದುರು ರೂಪಾಯಿಯಲ್ಲಿ 50 ಪೈಸೆ ಚೇತರಿಕೆ ಕಾಣುವುದರ ಮೂಲಕ ಪ್ರತಿ ಡಾಲರ್‌ಗೆ 58.79 ರೂಪಾಯಿಗೆ ತಲುಪಿ ವಹಿವಾಟು ಸ್ಥಗಿತವಾಗಿತ್ತು. ಆದರೆ ಇಂದಿನ ದಿನದ ವಹಿವಾಟುವಿನಲ್ಲಿ ರೂಪಾಯಿಯಲ್ಲಿ 32 ಪೈಸೆ ಚೇತರಿಕೆ ಕಂಡು ಬರುವುದರ ಮೂಲಕ ಪ್ರತಿ ಡಾಲರ್‌‌ಗೆ 58.47 ರೂಪಾಯಿಗೆ ತಲುಪಿದೆ. ಮುಂಬೈ ಶೇರು ಮಾರುಟ್ಟೆಯಲ್ಲಿ ಸೂಚ್ಯಂಕ ಕೂಡ 275.82 ಅಂಕ ಅಥವಾ ಶೇ.1.14 ರಷ್ಟು ಚೇತರಿಕೆ ಕಾಣುವುದರ ಮೂಲಕ 24,397.56 ಅಂಕಗಳಿಗೆ ತಲುಪಿದೆ.

Share this Story:

Follow Webdunia kannada