Select Your Language

Notifications

webdunia
webdunia
webdunia
webdunia

ಇಂದಿನಿಂದ ರಿಂಗಿಂಗ್ ಬೆಲ್ ಫ್ರೀಡಂ 251 ಸ್ಮಾರ್ಟ್‌ಫೋನ್ ಮಾರಾಟಕ್ಕೆ

ಇಂದಿನಿಂದ ರಿಂಗಿಂಗ್ ಬೆಲ್ ಫ್ರೀಡಂ 251 ಸ್ಮಾರ್ಟ್‌ಫೋನ್ ಮಾರಾಟಕ್ಕೆ
ನವದೆಹಲಿ , ಮಂಗಳವಾರ, 28 ಜೂನ್ 2016 (19:41 IST)
ವಿಶ್ವದಲ್ಲಿಯೇ ಅತೀ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಪೋನ್‌ ನೀಡುವುದಾಗಿ ಘೋಷಿಸಿದ ಬಳಿಕ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ರಿಂಗಿಂಗ್ ಬೆಲ್ ಸಂಸ್ಥೆ, ಇಂದಿನಿಂದ 251 ರೂಪಾಯಿ ಬೆಲೆಯ ಪ್ರೀಡಂ-251 ಸ್ಮಾರ್ಟ್‌ಪೋನ್‌ಗಳನ್ನು ಗ್ರಾಹಕರಿಗೆ ವಿತರಣೆ ಮಾಡಲಿದೆ. 
 
ರಿಂಗಿಂಗ್ ಬೆಲ್ಸ್ ಸಂಸ್ಥೆ, ಕಡಿಮೆ ಬೆಲೆಯ ಪೋನ್‌ಗಳನ್ನು ಮುಂಗಡ ನೋಂದಣಿ ಮಾಡಿಕೊಂಡಿರುವ ಗ್ರಾಹಕರಿಗೆ ಇಂದಿನಿಂದ ಪೋನ್‌ ವಿತರಣೆ ಮಾಡಲಿದೆ.
 
ರಿಂಗಿಂಗ್ ಬೆಲ್ಸ್ ಸಂಸ್ಥೆ, ಫೆಬ್ರುವರಿ ತಿಂಗಳಲ್ಲಿ ವಿಶ್ವದ ಅತೀ ಕಡಿಮೆ ಬೆಲೆಯ ಪೋನ್‌ಗಳನ್ನು ನೀಡುವುದಾಗಿ ಘೋಷಿಸಿತ್ತು. ನಂತರ ಸಾಕಷ್ಟು ವಿವಾದಗಳಿಗೆ ಕಾರಣವಾಗಿತ್ತು. 
 
ರಿಂಗಿಂಗ್ ಬೆಲ್ಸ್ ಸಂಸ್ಥೆ ಅತೀ ಕಡಿಮೆ ಬೆಲೆಯ ಪೋನ್‌ ನೀಡುವುದಾಗಿ ಘೋಷಣೆ ಮಾಡಿದ ಬಳಿಕ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಗಳು ದೊರೆತ್ತಿದ್ದವು. ಸುಮಾರು 7 ಕೋಟಿ ಗ್ರಾಹಕರು ಕಂಪೆನಿಯ ವೆಬ್‌ಸೈಟ್‌ಗೆ ಲಗ್ಗೆ ಹಾಕಿದ್ದರಿಂದ ವೆಬ್‌ಸೈಟ್ ಹಲವಾರು ಬಾರಿ ಸ್ಥಗಿತಗೊಂಡಿತ್ತು 
 
ಕೇಂದ್ರ ಸರಕಾರ ಕಂಪೆನಿಯ ವಹಿವಾಟಿನ ಬಗ್ಗೆ ಸೂಕ್ಷ್ಮವಾಗಿ ಗಮನಿಸಿದ್ದಲ್ಲದೇ ಕಂಪೆನಿಯ ಕಚೇರಿಯ ಮೇಲೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ರಿಂಗಿಂಗ್ ಬೆಲ್ ಕಂಪೆನಿ, ತನ್ನ ಉತ್ಪನ್ನವನ್ನು ವಾಪಸ್ ಪಡೆದುಕೊಂಡಿದ್ದಲ್ಲದೇ ಹಣವನ್ನು ಗ್ರಾಹಕರಿಗೆ ಮರಳಿ ನೀಡಿತ್ತು.
 
ಸಂಸ್ಥೆ ಘೋಷಿಸಿದ್ದ ಕಡಿಮೆ ಬೆಲೆಯ ಪೋನ್‌ಗಳನ್ನು ಒಟ್ಟು 7 ಕೋಟಿ ಗ್ರಾಹಕರು ಮುಂಗಡ ಬುಕ್ಕಿಂಗ್ ಮಾಡಿಕೊಂಡಿದ್ದು, ಅದರಲ್ಲಿ 30 ಸಾವಿರ ಗ್ರಾಹಕರು ಮುಂಗಡ ಹಣ ಸಂದಾಯ ಮಾಡುವ ಮೂಲಕ ಬುಕ್ಕಿಂಗ್ ಮಾಡಿಕೊಂಡಿದ್ದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

7ನೇ ವೇತನ ಆಯೋಗ ಜಾರಿ: ಸರಕಾರಿ ನೌಕರರ ವೇತನದಲ್ಲಿ ಶೇ.20 ರಷ್ಟು ಹೆಚ್ಚಳ ಸಾಧ್ಯತೆ