Webdunia - Bharat's app for daily news and videos

Install App

ಇನ್ನೊಂದು ಸಂಚಲನಕ್ಕೆ ಕಾರಣವಾಗಲಿರುವ ರಿಲಯನ್ಸ್ ಜಿಯೋ

Webdunia
ಸೋಮವಾರ, 13 ಫೆಬ್ರವರಿ 2017 (16:42 IST)
ಈಗಾಗಲೆ ಉಚಿತ ಡಾಟಾ, ಕರೆಗಳಿಂದ ಶ್ರೀಸಾಮನ್ಯರ ಮನಸ್ಸಿನಲ್ಲಿ ಚಿರಮುದ್ರೆಯೊತ್ತಿರುವ ರಿಲಯನ್ಸ್ ಜಿಯೋ ಇದೀಗ ಇನ್ನೊಂದು ಸಂಚಲನ ಸೃಷ್ಟಿಸಲು ಹೊರಟಿದೆ. ಆರು ಅಂಕೆಯ ಮೊಬೈಲ್ ಸೀರೀಸ್ ಬಿಡುಗಡೆ ಮಾಡುವ ಮೂಲಕ ಮೊದಲ ಮೊಬೈಲ್ ನೆಟ್‌ವರ್ಕ್‍ ಆಗಿ ಅವತರಿಸಲಿದೆ.
 
ಈಗಾಗಲೆ ಉಳಿದ ದೂರಸಂಪರ್ಕ ಕಂಪೆನಿಗಳು 9, 8, 7 ಸೀರೀಸ್‌ನೊಂದಿಗೆ ಮೊದಲಾಗುವ ಫೋನ್ ನಂಬರ್‌ಗಳನ್ನು ನೀಡುತ್ತಿದೆ. ರಿಲಯನ್ಸ್ ಜಿಯೋ ಮೊದಲ ಬಾರಿಗೆ ’6’ ಸೀರೀಸ್‌ನೊಂದೆಗೆ ಆರಂಭವಾಗುವ ಮೊಬೈಲ್ ನಂಬರ್‌ಗಳನ್ನು ಗ್ರಾಹಕರಿಗೆ ನೀಡಲಿದೆ.
 
ಈ ಮೇರೆಗೆ ದೂರಸಂಪರ್ಕ ಇಲಾಖೆ (ಡಾಟ್)ಯಿಂದ ಅನುಮತಿ ಪಡೆದಿದೆ ಎಂಬ ಸುದ್ದಿ ಇದೆ. ಸದ್ಯಕ್ಕೆ ಅಸ್ಸಾಂ, ರಾಜಸ್ತಾನ, ತಮಿಳುನಾಡಿನಲ್ಲಿ ಮೊದಲ ಸೀರೀಸ್ ಫೋನ್‌ನಂಬರ್‌ಗಳನ್ನು ಪ್ರಾರಂಭಿಸಲು ಅನುಮತಿ ಸಿಕ್ಕಿದೆ. ಮಧ್ಯಪ್ರದೇಶ್, ಗುಜರಾತಿಗೆ 7 ಸೀರೀಸ್, ಕೋಲ್ಕತ್ತಾ, ಮಹಾರಾಷ್ಟ್ರಕ್ಕೆ 8 ಸೀರೀಸ್ ಎಂಎಸ್‍ಸಿ (ಮೊಬೈಲ್ ಸ್ವಿಚಿಂಗ್ ಕೋಡ್)ಯನ್ನು ಜಿಯೋಗೆ  ಡಾಟ್ ನಿಗದಿಪಡಿಸಿದೆ. 
 
 ಇನ್ನೊಂದು ಕಡೆ ಜಿಯೋ ಗ್ರಾಹಕರ ಸಂಖ್ಯೆ ದಿನೇದಿನೇ ವೃದ್ಧಿಸುತ್ತಲೇ ಇದೆ. ಡಿಸೆಂಬರ್ 31ಕ್ಕೆ ಬಳಕೆದಾರರ ಸಂಖ್ಯೆ 7.24 ಕೋಟಿಗೆ ತಲುಪಿದೆ. ಹೊಸದಾಗಿ ತೆಗೆದುಕೊಂಡ ಸೀರೀಸ್ ಮೂಲಕ ಮತ್ತಷ್ಟು ಸಂಖ್ಯೆಯ ಗ್ರಾಹಕರು ಆಕರ್ಷಿತರಾಗುವ ಸಾಧ್ಯತೆಗಳಿವೆ.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯನವರೇ ಇನ್ನೆಷ್ಟು ದಿನ ಈ ಭಂಡ ಬಾಳು: ಆರ್‌ ಅಶೋಕ್ ವ್ಯಂಗ್ಯ

ಮರಾಠಿ vs ಹಿಂದೆ ಭಾಷೆ ವಿವಾದ, ಭಾಷೆಯ ಹೆಸರಿನಲ್ಲಿ ಜನರನ್ನು ವಿಭಜಿಸಬಾರದು: ಕಂಗನಾ ರನೌತ್‌

ಕಾಂಗ್ರೆಸ್‌ನಲ್ಲಿ ಡಿಕೆ ಶಿವಕುಮಾರ್‌ಗೆ ಉನ್ನತ ಸ್ಥಾನ ಸಿಗಬೇಕು: ರಂಭಾಪುರಿ ಸ್ವಾಮೀಜಿ

ಸದ್ಯದಲ್ಲೇ ಸಿದ್ದರಾಮಯ್ಯ ದೆಹಲಿಗೆ ವರ್ಗಾವಣೆ ಪಕ್ಕಾ: ಬಿವೈ ವಿಜಯೇಂದ್ರ

ಸಂದೇಶ್‌ಖಾಲಿ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿಬಿಐ: ಟಿಎಂಸಿ ಮುಖಂಡ ಶಹಜಹಾನ್‌ ಶೇಖ್‌ಗೆ ಶಾಕ್‌

ಮುಂದಿನ ಸುದ್ದಿ
Show comments