Webdunia - Bharat's app for daily news and videos

Install App

ರಾಮದೇವ್ ಪತಂಜಲಿ ನೂಡಲ್ಸ್‌ ಅ. 15ರಂದು ಬಿಡುಗಡೆ

Webdunia
ಶುಕ್ರವಾರ, 9 ಅಕ್ಟೋಬರ್ 2015 (20:25 IST)
ನವದೆಹಲಿ:  ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದವು ಮುಂದಿನ ವಾರ 15 ರೂ. ದರಕ್ಕೆ ಇನ್‌ಸ್ಟಂಟ್ ನೂಡಲ್ಸ್ ಬಿಡುಗಡೆ ಮಾಡಲಿದೆ. ಮ್ಯಾಗಿ ಕಳೆದುಕೊಂಡ ಮಾರುಕಟ್ಟೆಯನ್ನು ಆಕ್ರಮಿಸುವುದು ಇದರ ಉದ್ದೇಶವೆಂದು ಭಾವಿಸಲಾಗಿದೆ.  ಮ್ಯಾಗಿಯಲ್ಲಿ ವಿಷಕಾರಿ ವಸ್ತುಗಳ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೆಲವು ತಿಂಗಳ ಹಿಂದೆ ಮ್ಯಾಗಿ ಮಾರಾಟಕ್ಕೆ ನಿಷೇಧ ವಿಧಿಸಲಾಗಿತ್ತು. 
 
ನೂಡಲ್ಸ್‌ಗೆ ಜಾಟ್ ಪಾಟ್ ಪಕಾವೊ, ಔರ್ ಬೆಫಿಕರ್ ಕಾವೋ ಎಂದು ಜಾಹೀರಾತು ಘೋಷಣೆಯೊಂದಿಗೆ ನಮ್ಮ ನೂಡಲ್ಸ್‌ನಲ್ಲಿ ಹೆಚ್ಚುವರಿ ಎಂಎಸ್‌ಜಿ ಮತ್ತು ಸೀಸದ ಅಂಶವಿಲ್ಲವೆಂದು ಯೋಗ ಗುರು ಪ್ರತಿಪಾದಿಸಿದ್ದಾರೆ. 
 
 ಟೂ ಮಿನಿಟ್ ನೂಡಲ್ಸ್ ಎಂಬ ಸಾಲಿನೊಂದಿಗೆ ಸ್ವಿಸ್ ದೈತ್ಯ ನೆಸ್ಲೆ ಕಂಪನಿಯು ಮ್ಯಾಗಿಯಲ್ಲಿ ಹೆಚ್ಚುವರಿ ಸೀಸ ಮತ್ತು ರುಚಿ ಹೆಚ್ಚಿಸುವ ಎಂಎಸ್‌ಜಿ ಇದ್ದಿದ್ದರಿಂದ ಮಾರಾಟ ನಿಷೇಧಿಸಲಾಗಿದೆ. ಮುಂಬೈ ಹೈಕೋರ್ಟ್‌ನಲ್ಲಿ ಕಂಪನಿಯು ಈ ಆದೇಶವನ್ನು ಪ್ರಶ್ನಿಸಿದ್ದು, ಈ ಆದೇಶವನ್ನು ರದ್ದು ಮಾಡಿ ಹೊಸ ಪರೀಕ್ಷೆಗೆ ಕೋರ್ಟ್ ಆದೇಶಿಸಿದೆ. 
ಡಿಸೆಂಬರ್‌ನಲ್ಲಿ ಉತ್ಪನ್ನಕ್ಕೆ ಮರುಚಾಲನೆ ನೀಡಲು ನೆಸ್ಲೆ ಎದುರುನೋಡುತ್ತಿದೆ. 
 
ನಾವು ಅಕ್ಟೋಬರ್ 15ರಂದು ಪತಂಜಲಿ ನೂಡಲ್ಸ್ ಬಿಡುಗಡೆ ಮಾಡುತ್ತೇವೆ. ಇದನ್ನು ಪೂರ್ಣ ಗೋಧಿ ಹಿಟ್ಟಿನಿಂದ ತಯಾರಿಸಲಾಗಿದ್ದು,  ಬೇರೆ ಕಂಪನಿಯ ನೂಡಲ್ಸ್ ರೀತಿಯಲ್ಲಿ ಮೈದಾದಿಂದ ತಯಾರಿಸಿ ಶೇ. 10ರಷ್ಟು ಮಾತ್ರ ಗೋದಿ ಹಿಟ್ಟನ್ನು ಹೊಂದಿಲ್ಲ ಎಂದು ರಾಮದೇವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. 
ಪತಂಜಲಿ ನೂಡಲ್ಸ್ ಅಕ್ಕಿ ತವುಡಿನ ಎಣ್ಣೆಯನ್ನು ಬಳಸುತ್ತದೆ. ಉಳಿದವರ ರೀತಿಯಲ್ಲಿ ಅಗ್ಗದ ಮತ್ತು ಕೆಳಮಟ್ಟದ ಪಾಮ್ ಎಣ್ಣೆಯನ್ನು ಬಳಸುವುದಿಲ್ಲ ಎಂದು ರಾಮದೇವ್ ಹೇಳಿದ್ದಾರೆ. 
 
 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments