Select Your Language

Notifications

webdunia
webdunia
webdunia
webdunia

ಇಂದು ಮಂಡಿಸಲಿರುವ ರೈಲ್ವೆ ಬಜೆಟ್‌ನಲ್ಲಿ ಏನೇನಿರಬಹುದು, ಕೆಳಗಿವೆ ಓದಿ

ಇಂದು ಮಂಡಿಸಲಿರುವ ರೈಲ್ವೆ ಬಜೆಟ್‌ನಲ್ಲಿ ಏನೇನಿರಬಹುದು, ಕೆಳಗಿವೆ ಓದಿ
ನವದೆಹಲಿ , ಗುರುವಾರ, 26 ಫೆಬ್ರವರಿ 2015 (10:20 IST)
ರೈಲ್ವೆ ಸಚಿವ ಸುರೇಶ್ ಪ್ರಭು ಗುರುವಾರ ಪ್ರಮುಖ ಸುಧಾರಣೆಗೆಳ ನಿರೀಕ್ಷೆಗಳೊಂದಿಗೆ ತಮ್ಮ ಪ್ರಥಮ ರೈಲ್ವೆ ಬಜೆಟ್  ಇಂದು ಮಂಡನೆ ಮಾಡಲಿದ್ದಾರೆ.  ಯೋಜನೆಗಳನ್ನು ಪೂರ್ಣಗೊಳಿಸಲು ಮತ್ತು ಮೂಲಸೌಲಭ್ಯ ವಿಸ್ತರಣೆಗೆ ಹೆಚ್ಚಿನ ನಿಧಿ ಸಂಗ್ರಹಣೆಗಾಗಿ ರೈಲ್ವೆಯಲ್ಲಿ ಖಾಸಗಿ ಹೂಡಿಕೆಯನ್ನು ಆಕರ್ಷಿಸಲು ಪ್ರಭು ನೀಲನಕ್ಷೆಯನ್ನು ಸಿದ್ಧಪಡಿಸಲಿದ್ದಾರೆ. ರೈಲ್ವೆ ಬಜೆಟ್‌ನಿಂದ ಕೆಲವು ನಿರೀಕ್ಷೆಗಳನ್ನು ಇಲ್ಲಿ ಕೊಡಲಾಗಿದೆ.
 
1. ಕೇಂದ್ರ ಸರ್ಕಾರದಿಂದ 50,000 ಕೋಟಿ ರೂ.ಗಳನ್ನು ರೈಲ್ವೆ ಅಭಿವೃದ್ಧಿಗೆ ಕೋರುವ ನಿರೀಕ್ಷೆಯಿದೆ.
 
2. ಪ್ರಯಾಣಿಕರ ದರಗಳು ಏರಿಕೆಯಾಗುವ ಸಾಧ್ಯತೆಯಿಲ್ಲ. ಆದರೆ ಸರಕು ಸಾಗಣೆ ದರಗಳು ಸುಧಾರಣೆಯಾಗಬಹುದು.  ತತ್ಕಾಲ್ ದರದಲ್ಲಿ ಸ್ವಲ್ಪ ಮಟ್ಟಿನ ಏರಿಕೆಯಾಗಬಹುದು.  ಪ್ರಯಾಣ  ದರದಲ್ಲಿ ಸಬ್ಸಿಡಿ ನೀಡುವುದಕ್ಕಾಗಿ ಸರಕುಸಾಗಣೆ ದರಗಳನ್ನು ಹೆಚ್ಚಿನ ಮಟ್ಟದಲ್ಲಿ ಇರಿಸಲಾಗಿದೆ.
 
3. 1.82 ಲಕ್ಷ ಕೋಟಿ ವೆಚ್ಚದ 359 ಯೋಜನೆಗಳು ಇನ್ನೂ ಬಾಕಿವುಳಿದಿರುವಂತೆ, ಗುರುವಾರದ ರೈಲ್ವೆ ಬಜೆಟ್‌ನಲ್ಲಿ ಹೊಸ ರೈಲುಗಳು ಮತ್ತು ಯೋಜನೆಗಳು ಕೆಲವೇ ಮಾತ್ರ ಇರುವ ಸಾಧ್ಯತೆಯಿದೆ.
 
4.ಕೇವಲ 100 ಕೋಟಿ ಮಾತ್ರ ಮೀಸಲಾಗಿಟ್ಟಿರುವ ಮುಂಬೈ-ಅಹ್ಮದಾಬಾದ್ ಬುಲೆಟ್ ರೈಲಿನ ಬಗ್ಗೆ ಹೆಚ್ಚಿನ ವಿವರಗಳು ಹೊರಬೀಳುವ ಸಾಧ್ಯತೆಯಿದೆ. ರಾಜಧಾನಿ ಮತ್ತು ಶತಾಬ್ದಿ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುವ 20 ರೈಲುಗಳನ್ನು ಖರೀದಿಸುವ ಯೋಜನೆಯಿದೆ.
 
5. ಪ್ರಯಾಣಿಕರ ಸೌಲಭ್ಯಗಳ ಬಗ್ಗೆ ಪ್ರಕಟಣೆ ಹೊರಬೀಳುವ ಸಾಧ್ಯತೆಯಿದೆ. ಅಂತರ ನಗರ ಸೇವೆಗಳಿಗೆ ಎಸಿ ಬೋಗಿಗಳನ್ನು ಪ್ರಕಟಿಸುವ ಸಾಧ್ಯತೆಯಿದೆ. ಐಟಿ ವ್ಯವಸ್ಥೆಗಳ ವ್ಯಾಪಕ ಬಳಕೆ, ಪ್ರಯಾಣಿಕರಿಗೆ ಆಪ್ಸ್ ಮತ್ತು ರೈಲ್ವೆ ಆವರಣದಲ್ಲಿ ವೈ-ಫೈ ಸೌಲಭ್ಯವನ್ನು ಪ್ರಕಟಿಸಬಹುದು.
 
6.ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆ ಹೆಚ್ಚಳಕ್ಕೆ ಕ್ರಮಗಳನ್ನು ನಿರೀಕ್ಷಿಸಲಾಗಿದೆ. ದೇಶದಲ್ಲಿ ರೈಲು ಅಪಘಾತಗಳಿಗೆ ಮುಖ್ಯಕಾರಣವಾಗಿರುವ ಕಾವಲಿಲ್ಲದ ಲೆವೆಲ್ ಕ್ರಾಸಿಂಗ್‌ನಲ್ಲಿ ಸುರಕ್ಷತೆಗೆ 20,000 ಕೋಟಿ ರೂ. ಸುರಕ್ಷತಾ ನಿಧಿಯನ್ನು ಹಣಕಾಸು ಸಚಿವಾಲಯದಿಂದ ರೈಲ್ವೆ ಬಯಸಿದೆ.
 
7. ರಾಜ್ಯಸರ್ಕಾರಗಳು ಮತ್ತು ಬಾಹ್ಯ ಸಂಸ್ಥೆಗಳು ಒಳಗೊಂಡ ಯೋಜನೆಗಳ ಅನುಷ್ಠಾನಕ್ಕೆ ಪ್ರಭು ಜಂಟಿ ಉದ್ಯಮ ವ್ಯವಸ್ಥೆಯನ್ನು ಪ್ರಕಟಿಸಬಹುದು.
8. ಮೇಕ್ ಇನ್ ಇಂಡಿಯಾಗೆ ಒತ್ತು ನೀಡಲು ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಪ್ರಸ್ತಾವನೆಗಳು. ಸರಕುಸಾಗಣೆ ಭಾಗಗಳು ಮತ್ತು ಬೋಗಿಗಳನ್ನು ಸ್ಥಳೀಯವಾಗಿ ನಿರ್ಮಿಸಲು ದೇಶೀಯ ಸಂಸ್ಥೆಗಳಿಗೆ ಹೆಚ್ಚಿನ ಪ್ರೋತ್ಸಾಹಕಗಳು.
 
9. ಸ್ವಚ್ಛ ಭಾರತ್ ಅಭಿಯಾನವನ್ನು ಜಾರಿಗೆ ತರಲು ಸ್ವಚ್ಛತೆ ಬಗ್ಗೆ ರೈಲ್ವೆ ಬಜೆಟ್‌ನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಆನ್ ಬೋರ್ಡ್ ಹೌಸ್ ಕೀಪಿಂಗ್ ಸೇವೆಗಳ ವ್ಯಾಪ್ತಿಯಲ್ಲಿ ಇನ್ನೂ 100 ರೈಲುಗಳು ಬರಲಿವೆ. 
 10. ಸೌರ ಶಕ್ತಿಯ ಬಳಕೆ,  ತಾಜ್ಯದಿಂದ ಇಂಧನ ತಯಾರಿಕೆ ಯೋಜನೆಗೆ ಚಾಲನೆ ಮತ್ತು ರೈಲು ನಿರ್ವಹಣೆಗಳಲ್ಲಿ ಸಿಎನ್‌ಜಿಯ ಹೆಚ್ಚಳ ಮತ್ತು ನೀರು ಮರುಬಳಕೆ ಸ್ಥಾವರಗಳ ಸ್ಥಾಪನೆ ಪ್ರಕಟಣೆ ನಿರೀಕ್ಷೆ 

Share this Story:

Follow Webdunia kannada