Select Your Language

Notifications

webdunia
webdunia
webdunia
webdunia

ಜಗತ್ತು ಭಾರತದತ್ತ ನೋಡುವ ಡಿಜಿಟಲ್ ಇಂಡಿಯಾ ಕನಸು ಕಾಣುತ್ತೇನೆ: ಮೋದಿ (ವಿಡಿಯೊ)

ಜಗತ್ತು ಭಾರತದತ್ತ ನೋಡುವ ಡಿಜಿಟಲ್ ಇಂಡಿಯಾ ಕನಸು ಕಾಣುತ್ತೇನೆ: ಮೋದಿ (ವಿಡಿಯೊ)
ನವದೆಹಲಿ , ಬುಧವಾರ, 1 ಜುಲೈ 2015 (18:38 IST)
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಬುಧವಾರ ಇಲ್ಲಿನ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಡಿಜಿಟಲ್ ಇಂಡಿಯಾ ವೀಕ್‌ಗೆ ಚಾಲನೆ ನೀಡಿದರು. ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಮುನ್ನೋಟವು ವಿದ್ಯುನ್ಮಾನ ಸೇವೆಗಳಲ್ಲಿ, ಉತ್ಪನ್ನಗಳಲ್ಲಿ ಮತ್ತು ಉತ್ಪಾದನೆ ಮತ್ತು ಉದ್ಯೋಗಾವಕಾಶ ಕ್ಷೇತ್ರಗಳಲ್ಲಿ ಸಮಗ್ರ ಬೆಳವಣಿಗೆ ಸಾಧಿಸುವ ಗುರಿ ಹೊಂದಿದೆ.
 
ಸುಮಾರು 10,000 ಜನರು ಭಾಗವಹಿಸಿದ್ದ ಸಮಾರಂಭದಲ್ಲಿ ಉದ್ಯಮಿಗಳಾದ ರಿಲಯನ್ಸ್ ಮುಕೇಶ್ ಅಂಬಾನಿ ಮತ್ತು ಟಾಟಾ ಗ್ರೂಪ್ ಸೈರಸ್ ಮಿಸ್ಟ್ರಿ ಮುಂತಾದವರು ಸೇರಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಷಣದ ಮುಖ್ಯಾಂಶಗಳು:
* ಮುಂದಿನ ನಾವೀನ್ಯತೆಗೆ  ಜಗತ್ತು ಭಾರತದತ್ತ ನೋಡುವ ಡಿಜಿಟಲ್ ಇಂಡಿಯಾ ಕನಸನ್ನು ನಾನು ಕಾಣುತ್ತೇನೆ.
 * ಸರ್ಕಾರ ಮುಕ್ತವಾಗಿದ್ದು, ಆಡಳಿತ ಪಾರದರ್ಶಕವಾಗಿರುವ ಡಿಜಿಟಲ್ ಇಂಡಿಯಾದ ಕನಸನ್ನು ನಾನು ಕಾಣುತ್ತೇನೆ
* ಅಧಿಕ ವೇಗದ ಡಿಜಿಟಲ್ ಹೆದ್ದಾರಿಗಳು ದೇಶವನ್ನು ಒಗ್ಗೂಡಿಸುವ ಡಿಜಿಟಲ್ ಇಂಡಿಯಾದ ಕನಸನ್ನು ನಾನು ಕಾಣುತ್ತೇನೆ
*  ಜಗತ್ತು ರಕ್ತರಹಿತ ಯುದ್ಧದ ಅಪಾಯವನ್ನು ಎದುರಿಸುತ್ತಿದೆ. ಸೈಬರ್ ಸಮರದ ಬೆದರಿಕೆ ದೇಶಗಳಿಗೆ ಅಪಾಯದ ಭಯವೊಡ್ಡಿದೆ. ಸೈಬರ್ ಭದ್ರತೆಗೆ ಖಾತರಿಗೆ ಭಾರತ ಸಾರಥ್ಯ ವಹಿಸಬೇಕು.
*  ಅನೇಕ ಐಟಿ ಕಂಪನಿಗಳು ಮತ್ತು ವೃತ್ತಿಪರರಿರುವ ನಮ್ಮ ದೇಶದಲ್ಲಿ ವಿದ್ಯುನ್ಮಾನ ಸರಕುಗಳನ್ನು ಆಮದು ಮಾಡಿಕೊಳ್ಳಬಾರದು
* ಭಾರತದಲ್ಲಿ ವಿನ್ಯಾಸವು ಮೇಕ್ ಇನ್ ಇಂಡಿಯಾ ರೀತಿಯಲ್ಲಿ ಮುಖ್ಯವಾಗಿದೆ. ಡಿಸೈನ್ ಇನ್ ಇಂಡಿಯಾವು ಡಿಜಿಟಲ್ ಇಂಡಿಯಾಗೆ ನಿರೂಪಕ ಆಗಿರಬೇಕು.
*  ನಾನು ಎಲ್ಲಾ ಯುವಕರಿಗೆ ಉದ್ಯಮ ಆರಂಭಕ್ಕೆ ನೆರವಾಗುವ ಭರವಸೆ ನೀಡುತ್ತೇನೆ. ನಾವು ಈ ಕುರಿತು ಇನ್ನಷ್ಟು ಸಕ್ರಿಯರಾಗಿರಬೇಕು.
 
*  ಬ್ಯಾಂಕ್‌ಗಳು ಶೀಘ್ರದಲ್ಲೇ ಪೇಪರ್ ರಹಿತ ಮತ್ತು ಪ್ರಿಮೀಸ್ ರಹಿತವಾಗುತ್ತದೆ.
 
* ಕನಿಷ್ಟ ಸರ್ಕಾರ, ಗರಿಷ್ಟ ಆಡಳಿತದಲ್ಲಿ ತಂತ್ರಜ್ಞಾನವು ಭಾರೀ ಪಾತ್ರವನ್ನು ಹೊಂದಬೇಕಾಗಿದೆ. 
* ಡಿಜಿಟಲ್ ಸಂಪರ್ಕದಿಂದ ದೇಶದ ಅತೀ ಬಡವರನ್ನು ಕೂಡ ಹೊರಗಿಡಬಾರದು.
*  ಇ-ಆಡಳಿತವು ಸುಲಭ, ಪರಿಣಾಮಕಾರಿ ಮತ್ತು ಆರ್ಥಿಕ ಆಡಳಿತದಿಂದ ಕೂಡಿದೆ.
* ಶೀಘ್ರದಲ್ಲೇ ಈ ಆಡಳಿತವು ಮೊಬೈಲ್ ಆಡಳಿತಕ್ಕೆ ಪರಿವರ್ತನೆಯಾಗಲಿದೆ. 
* ಹಿಂದೆ ಜನರು ನದಿಗಳ ದಡಗಳಲ್ಲಿ ವಾಸಿಸುತ್ತಿದ್ದರು. ನಂತರ ಹೆದ್ದಾರಿಗಳು ಸೃಷ್ಟಿಯಾಯಿತು. ಈಗ ಜನರು ಒಎಫ್‌ಸಿ ಸಾಗುವ ದಾರಿಯಲ್ಲಿ ಮನೆಗಳನ್ನು ನಿರ್ಮಿಸಿದ್ದಾರೆ.
*  ಈ ಯೋಜನೆಯು 18 ಲಕ್ಷ ಭಾರತೀಯರಿಗೆ ಉದ್ಯೋಗ ಒದಗಿಸುವ ಗುರಿ ಹೊಂದಿದೆ. 
* ಕೋಟ್ಯಂತರ ಭಾರತೀಯರ ಕನಸುಗಳು ಇದರಿಂದ ಈಡೇರುತ್ತದೆ. ನಾವು ಭಾರತದ ಭವಿಷ್ಯವನ್ನು ಸಮಗ್ರ ನಿಲುವಿನ ಮೂಲಕ ಬದಲಿಸಲು ಪ್ರಯತ್ನಿಸಿದ್ದೇವೆ. 
 

Share this Story:

Follow Webdunia kannada