Webdunia - Bharat's app for daily news and videos

Install App

ಪೋರ್ಷೆ ಸಂಸ್ಥೆಯಿಂದ ಹೊಸ ಆವೃತ್ತಿಯ 911 ಮಾಡೆಲ್ ಕಾರುಗಳ ಬಿಡುಗಡೆ

Webdunia
ಗುರುವಾರ, 30 ಜೂನ್ 2016 (11:38 IST)
ಜರ್ಮನಿ ಮೂಲದ ಐಷಾರಾಮಿ ಸ್ಫೋರ್ಟ್ಸ್ ಕಾರ್ ತಯಾರಿಕಾ ಸಂಸ್ಥೆ ಪೋರ್ಷೆ, ಹೊಸ ಆವೃತ್ತಿಯ 911 ಮಾದರಿಯ ಕಾರುಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಈ ಆವೃತ್ತಿಯ ಕಾರುಗಳು ದೆಹಲಿ ಶೋ ರೂಮ್ ದರ ಹೊರತು ಪಡಿಸಿ 1.42 ಕೋಟಿ ರೂಪಾಯಿಗಳಿಂದ 2.66 ಕೋಟಿ ರೂಪಾಯಿಗಳಲ್ಲಿ ಲಭ್ಯವಾಗಲಿದೆ.
 
ಭಾರತದ ಕಾರ್ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಪೋರ್ಷೆ ಸಂಸ್ಥೆ, ಚೆನೈ ಮತ್ತು ಹೈದ್ರಾಬಾದ್ ನಗರದಲ್ಲಿ ಹೊಸ ಶೋ ರೂಮ್ ತೆರೆಯಲು ಯೋಜನೆ ರೂಪಿಸುತ್ತಿದೆ. ಕಳೆದ ವರ್ಷ ಭಾರತದ ಮಾರುಕಟ್ಟೆಯಲ್ಲಿ ನಾವು 408 ಕಾರುಗಳನ್ನು ಮಾರಾಟ ಮಾಡಿದ್ದೇವೆ. ಇದೀಗ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಹೊಸ ಆವೃತ್ತಿಯ 911 ಮಾದರಿಯ ಕಾರುಗಳಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯಲಿದೆ ಎಂದು ಪೋರ್ಷೆ ಸಂಸ್ಥೆಯ ನಿರ್ದೇಶಕ ಪವನ್ ಶೆಟ್ಟಿ ತಿಳಿಸಿದ್ದಾರೆ.
 
ಎಂಟನೇಯ ಪೀಳಿಗೆಯ ಕಾರುಗಳಾಗಿರುವ ಹೊಸ ಆವೃತ್ತಿಯ 911 ಮಾದರಿಯ ಕಾರುಗಳು, ಹಿಂದಿನ ಪೀಳಿಗೆಯ ಕಾರುಗಳಿಗಿಂತ ಹೆಚ್ಚು ಇಂಧನ ದಕ್ಷತೆ ಹೊಂದಿದೆ ಎಂದು ತಿಳಿಸಿದ್ದಾರೆ. 
 
ಪ್ರಸ್ತುತ, ಪೋರ್ಷೆ ಸಂಸ್ಥೆಯು ರಾಷ್ಟ ರಾಜಧಾನಿ ದೆಹಲಿ, ಮುಂಬೈ, ಬೆಂಗಳೂರು, ಅಹ್ಮದಬಾದ್, ಕೋಲ್ಕತಾ ಮತ್ತು ಕೊಚ್ಚಿ ನಗರದಲ್ಲಿ ಒಟ್ಟು ಆರು ಶೋ ರೂಮ್‌ಗಳನ್ನು ಹೊಂದಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments